ಸಿಹಿ ಪ್ರಿಯರಿಗೆ ಸಿಹಿ ಸುದ್ದಿ: ಜು.20ರವರೆಗೆ ನಂದಿನಿ ಸಿಹಿ ಉತ್ಸವ
ಬೆಂಗಳೂರು, ಜು.7: ಕರ್ನಾಟಕ ಹಾಲು ಮಹಾಮಂಡಳಿಯು ಜು.20ರವರೆಗೆ ನಂದಿನಿ ಸಿಹಿ ಉತ್ಸವವನ್ನು ನಡೆಸುತ್ತಿದೆ. ಶೇ.10ರಷ್ಟು ರಿಯಾಯಿತಿ ದರದಲ್ಲಿ ಸಿಹಿ ತಿನಿಸುಗಳು ಗ್ರಾಹಕರಿಗೆ ಸಿಗಲಿದೆ.
ರೈತರನ್ನು ಪ್ರೋತ್ಸಾಹಿಸುವುದು ಹಾಗೂ ಗ್ರಾಹಕರಿಗೆ ನಂದಿನಿ ಉತ್ಪನ್ನಗಳನ್ನು ಹೆಚ್ಚೆಚ್ಚು ಪರಿಚಯಿಸುವ ಉದ್ದೇಶದಿಂದ ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ರಾಜ್ಯಾದ್ಯಂತ ಒಟ್ಟು 15 ದಿನಗಳ ಕಾಲ ಉತ್ಸವ ನಡೆಯಲಿದ್ದು ಜು.20ರವರೆಗಿರಲಿದೆ.
ಸಿಹಿ ತಿನಿಸುಗಳಾದ ಮೈಸೂರು ಪಾಕ್, ಪೇಡಾ, ಧಾರವಾಡ ಪೇಡಾ, ಕೇಸರ್ ಪೇಡಾ, ಏಲಕ್ಕಿ ಪೇಡಾ, ಬಾದಾಮ್ ಬರ್ಫಿ, ಕ್ಯಾಶ್ಯು ಬರ್ಫಿ, ಕೋಕೋನಟ್ ಬರ್ಫಿ, ಕುಂದ, ಜಾಮೂನ್ ರಸಗುಲ್ಲಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಬಗೆಯ ಸಿಹಿ ತಿನಿಸುಗಳು ಈ ಆಹಾರ ಉತ್ಸವದಲ್ಲಿ ಲಭ್ಯವಿರಲಿದೆ.

ಈ ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ನಂದಿನಿ ಬ್ರ್ಯಾಂಡ್, ಹಾಲು, ಗುಡ್ ಲೈಫ್ ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆಗೆ ರಿಯಾಯಿತಿ ಇರುವುದಿಲ್ಲ. ಇದರಿಂದ ಒಂದೇ ಕಡೆ ಸಾಕಷ್ಟು ಬಗೆಯ ನಂದಿನಿ ಉತ್ಪನ್ನಗಳು ಲಭ್ಯವಾಗಲಿದೆ.ಸಿಹಿ ಪ್ರಿಯರಿಗೆ ಇದು ಒಳ್ಳೆಯ ಸಮಯವಾಗಿದೆ.












Click it and Unblock the Notifications