ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಿನ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟ ಕೆಎಂಎಫ್

|
Google Oneindia Kannada News

ಬೆಂಗಳೂರು, ಡಿ. 26 : ಹೊಸವರ್ಷದಲ್ಲಿ ಕರ್ನಾಟಕದಲ್ಲಿ ಹಾಲಿನ ದರ ಹೆಚ್ಚಾಗುವ ಸಾಧ್ಯತೆ ಇದೆ. ಲೀಟರ್ ಹಾಲಿನ ದರವನ್ನು 2ರಿಂದ 3 ರೂ. ಹೆಚ್ಚಿಸುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮುಖ್ಯಮಂತ್ರಿಗಳ ಒಪ್ಪಿಗೆ ದೊರೆತರೆ ಹೊಸ ವರ್ಷದಲ್ಲಿ ಹಾಲಿನ ದರ ಹೆಚ್ಚಳವಾಗಲಿದೆ.

ಮೂರು ದಿನಗಳ ಹಿಂದೆ ನಡೆದ ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್) ಆಡಳಿತ ಮಂಡಳಿ ಸಭೆಯಲ್ಲಿ ದರ ಏರಿಕೆ ಬಗ್ಗೆ ಒಂದು ಸಾಲಿನ ನಿರ್ಣಯವನ್ನು ಕೈಗೊಂಡಿದ್ದು, ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗಿದೆ.

KMF

ಹಾಲಿನ ಉತ್ಪನ್ನದಿಂದ ಬರುವ ಲಾಭಕ್ಕಿಂತ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದೆ. ಸಿಬ್ಬಂದಿ ವೇತನ, ಸಾರಿಗೆ ವೆಚ್ಚ ಮುಂತಾದವುಗಳಿಂದ ಮಂಡಳಿಗೆ ಹೊರೆಯಾಗುತ್ತಿದ್ದು ಹಾಲಿನ ದರವನ್ನು 2 ಅಥವ 3 ರೂ. ಹೆಚ್ಚಳ ಮಾಡಲು ಅವಕಾಶ ನೀಡಬೇಕೆಂದು ಕೆಎಂಎಫ್ ಮನವಿ ಮಾಡಿದೆ. [ನಂದಿನಿ ಹಾಲಿನ ದರ 2 ರೂ. ಹೆಚ್ಚಳ]

ಕೆಎಂಎಫ್ 2013ರ ಸೆಪ್ಟೆಂಬರ್ ತಿಂಗಳಿನಲ್ಲಿ ಹಾಲಿನ ದರ ಏರಿಕೆ ಮಾಡಿತ್ತು. ಎಲ್ಲಾ ರೀತಿಯ ಹಾಲಿನ ದರವನ್ನು 2 ರೂ. ಮತ್ತು ಅರ್ಧ ಲೀಟರ್ ಮೊಸರಿನ ಬೆಲೆಯನ್ನು 1 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಸೆ.11ರಿಂದ ನೂತನ ದರ ಜಾರಿಗೆ ಬಂದಿತ್ತು. [ಕೆಎಂಎಫ್ ಅಧ್ಯಕ್ಷರಾಗಿ ನಾಗರಾಜ್ ಆಯ್ಕೆ]

2014ರ ಸೆ. 17ರಂದು ನಡೆದ ಕೆಎಂಎಫ್ ಚುನಾವಣೆಯಲ್ಲಿ ಪಿ.ನಾಗರಾಜ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಹಾಲಿನ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಸಿಎಂ ಇದಕ್ಕೆ ಒಪ್ಪಿಗೆ ನೀಡುತ್ತಾರೆಯೇ? ಕಾದು ನೋಡಬೇಕು.

English summary
Karnataka Milk Federation (KMF)likely to increase milk price. The proposal to hike the price by at least Rs. 2 to Rs. 3 a liter was discussed at the KMF’s board meeting and submitted to government for approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X