ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹಾಲು ಒಕ್ಕೂಟ ಸಂಗ್ರಹಿಸುವ (KMF) ಹಾಲಿನ ಪ್ರಮಾಣದಲ್ಲಿ ದಶಲಕ್ಷ ಲೀ.ನಷ್ಟು ಇಳಿಕೆ

|
Google Oneindia Kannada News

ಬೆಂಗಳೂರು ಜನವರಿ 17: ರಾಜ್ಯದಲ್ಲಿ ಸರಿ ಸುಮಾರು 26 ಲಕ್ಷಕ್ಕಿಂತಲೂ ಅಧಿಕ ಹಾಲು ಉತ್ಪಾದಕರನ್ನು ಹೊಂದಿರುವ ಕರ್ನಾಟಕ ಹಾಲು ಒಕ್ಕೂಟ (KMF)ಕ್ಕೆ ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ ಸುಮಾರು 10ಲಕ್ಷ ಲೀಟರ್ ಕಡಿಮೆ ಹಾಲು ಸಂಗ್ರಹವಾಗಿದೆ.

ಕರ್ನಾಟಕ ಹಾಲು ಒಕ್ಕೂಟ (KMF)ಕ್ಕೆ 2021 ಮತ್ತು 2022ರಲ್ಲಿ ಪ್ರತಿನಿತ್ಯ 84.5 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿತ್ತು. ಆದರೆ ಕಳೆದ ವರ್ಷ (2022) ಜುಲೈನಿಂದ ನಿತ್ಯ ಮೊದಲ ಬಾರಿಗೆ ಹಾಲು 75.6 ಲಕ್ಷ ಲೀಟರ್ ಹಾಲನ್ನು ಸಂಗ್ರಹವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಒಟ್ಟು ಸಂಗ್ರಹಣೆ ಹಾಲಿನ ಪೈಕಿ 9-10 ಲಕ್ಷ ಲೀಟರ್ ಹಾಲು ಸಂಗ್ರಹದಲ್ಲಿ ಇಳಿಕೆ ಕಂಡು ಬಂದಿದೆ.

ಇಷ್ಟು ಪ್ರಮಾಣದಲ್ಲಿ ಹಾಲು ಉತ್ಪಾದನೆ ಇಳಿಕೆ ಆಗಲು ಕಳೆದ ವರ್ಷ ರಾಸುಗಳಿಗೆ ಆವರಿಸಿದ್ದ ಲಂಪಿ ಚರ್ಮ ರೋಗ, ಕಾಲು-ಬಾಯಿ ರೋಗ ಇಷ್ಟೇ ಅಲ್ಲದೇ ಅತಿವೃಷ್ಟಿಯಿಂದ ಕಳಪೆ ಮೇವು ಲಭ್ಯವಾಗಿದ್ದು, ಹಾಲು ಉತ್ಪಾದನೆ ಮೇಲೆ ಪರಿಣಾಮ ಬೀರಿದೆ. ರೋಗದಿಂದ ಸಾಕಷ್ಟು ರಾಸುಗಳು ಮೃತಪಟ್ಟಿವೆ. ಇನ್ನೂ ಮಳೆಗಾಲದ ನಂತರ ಹಸಿರು ಮೇವು ಸಿಗುವುದು ವಿರಳ. ಬೇಸಿಗೆಯಲ್ಲಂತೂ ಸಾಮಾನ್ಯವಾಗಿ ಹಸುಗಳ ಹಾಲು ಪೂರೈಕೆ ಕಡಿಮೆ ಇರುತ್ತದೆ.

ಹಾಲಿನ ಉಪ ಉತ್ಪನಗಳ ಬೆಲೆ ಏರಿಕೆ

ಹಾಲಿನ ಉಪ ಉತ್ಪನಗಳ ಬೆಲೆ ಏರಿಕೆ

ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದ್ದರಿಂದಲೇ ಹಾಲಿನ ಉಪ ಉತ್ಪನ್ನಗಳಾದ ತುಪ್ಪ, ಬೆಣ್ಣೆ, ಪನೀರ್ ಮತ್ತಿತರ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ ಎನ್ನಬಹುದು. ತುಪ್ಪ ಹಾಗೂ ಬೆಣ್ಣೆಯು ಕೆಜಿಗೆ 30 ರಿಂದ 40 ರೂ.ನಷ್ಟು ಏರಿಕೆ ಆಗಿದೆ. ಅಲ್ಲದೇ ಹಾಲು ಒಕ್ಕೂಟಗಳು ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಪೂರೈಸುವ ಹಾಲಿನ ಪುಡಿ ಉತ್ಪಾದನೆಯಲ್ಲಿ ಇಳಿಕೆ ಮಾಡಲಾಗಿದೆ. ಶಾಲೆಗಳಿಗೆ ಏಪ್ರಿಲ್‌ವರೆಗೆ ರಜೆ ಇರುವ ಪರಿಣಾಮ ಹಾಲಿನ ಪುಡಿಯ ದಾಸ್ತಾನು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಲು ಉತ್ಪನ್ನಗಳ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆ

ಹಾಲು ಉತ್ಪನ್ನಗಳ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆ

ಉಪ ಉತ್ಪನ್ನಗಳ ಬೆಳೆ ಏರಿಕೆ, ಹಾಲಿನ ಪೂರೈಕೆ ಕಡಿಮೆಯಾಗಿದ್ದರಿಂದ ಚಿಲ್ಲರೆ ಮಳಿಗೆಗಳು ಮಾರುಕಟ್ಟೆ ತೊರೆದಿವೆ.

ಸಂಗ್ರಹಣೆಯ ಆಧಾರದ ಮೇಲೆ ಮಾರಾಟವು ಮೊದಲಿನಂತಿರದೇ ತುಸು ಬಿಗಿಯಾಗಿದೆ. ಏಪ್ರಿಲ್ ವೇಳೆಗೆ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆಯಿದೆ. ತುಮಕೂರು ಸಹಕಾರಿ ಹಾಲು ಒಕ್ಕೂಟವೊಂದರಲ್ಲೇ ನಿತ್ಯ ಸುಮಾರು 70,000 ಲೀಟರ್ ಹಾಲು ಸಂಗ್ರಹಣೆಯಲ್ಲಿ ಕುಸಿತ ಕಂಡಿದೆ.

ಕೆಎಂಎಪ್‌ನಿಂದ ತುಪ್ಪ ಪೂರೈಕೆಯಲ್ಲಿ ಇಳಿಕೆ

ಕೆಎಂಎಪ್‌ನಿಂದ ತುಪ್ಪ ಪೂರೈಕೆಯಲ್ಲಿ ಇಳಿಕೆ

ಕರ್ನಾಟಕ ಹಾಲು ಒಕ್ಕೂಟ (KMF) 2021-22ರಲ್ಲಿ ರಾಜ್ಯದ ಮಾರುಕಟ್ಟೆಗೆ ತಿಂಗಳಿಗೆ ಅಂದಾಜು 2 ಸಾವಿರ ಟನ್ ತುಪ್ಪ ಪೂರೈಸುತ್ತಿತ್ತು, ಸದ್ಯ ಹಾಲಿನ ಕೊರತೆಯಿಂದಾಗಿ ಮಾಸಿಕ 1,700 ಟನ್‌ ಮಾತ್ರ ಸರಬರಾಜು ಆಗುತ್ತಿದೆ. ಇನ್ನೂ ಮಾಸಿಕ 150 ಟನ್ ಬೆಣ್ಣೆ ಉತ್ಪಾದನೆ ಕುಸಿದಿದೆ. ತುಮಕೂರು, ಕೋಲಾರ, ಶಿವಮೊಗ್ಗ, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳ ಒಕ್ಕೂಟಗಳಲ್ಲಿ ಹಾಲು ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದೆ ಎಂದು ಒಕ್ಕೂಟದ ಅಧಿಕಾರಿಗಳು ತಿಳಿಸಿದ್ದಾರೆ.

ಹಾಸನ ಜಿಲ್ಲಾ ಒಕ್ಕೂಟದಿಂದ ಉತ್ಪನ್ನ ವಿದೇಶಕ್ಕೆ ರಫ್ತು

ಹಾಸನ ಜಿಲ್ಲಾ ಒಕ್ಕೂಟದಿಂದ ಉತ್ಪನ್ನ ವಿದೇಶಕ್ಕೆ ರಫ್ತು

ಇಂತಹ ನಕರಾತ್ಮಕ ಬೆಳವಣಿಗೆ ಮಧ್ಯದಲ್ಲೂ ಹಾಸನ ಜಿಲ್ಲಾ ಹಾಲು ಒಕ್ಕೂಟವು ಹಾಲು ಮತ್ತದರ ಉಪ ಉತ್ಪನ್ನಗಳನ್ನು ಸಿಂಗಾಪುರ ಸೇರಿದಂತೆ ಇನ್ನಿತರ ದೇಶಗಳಿಗೆ ರಫ್ತು ಮಾಡಲು ನಿರ್ಧರಿಸಿದೆ. ಈ ಜಿಲ್ಲಾ ಹಾಲು ಒಕ್ಕೂಟ ಕೆಎಂಎಫ್ ಮೂಲಕ 1.5 ಲಕ್ಷ ಲೀ. ಟೆಟ್ರಾಪಾಕ್ ಹಾಲನ್ನು ಮಾಲ್ಡೀವ್ಸ್‌ ಪ್ರಯೋಗಾತ್ಮಕವಾಗಿ ರವಾನಿಸಿದೆ. ಉಳಿದಂತೆ ಬೇರೆ ಹಾಲು, ಬೆಣ್ಣೆ ರವಾನೆಗೆ ತಯಾರಿ ಮಾಡಿಕೊಂಡಿದೆ. ಈ ರೀತಿಯ ರಫ್ತಿನಿಂದ ಒಕ್ಕೂಟಕ್ಕೆ ವಾರ್ಷಿಕವಾಗಿ ಸುಮಾರು 500 ಕೋಟಿ ಆದಾಯ ಸಂದಾಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Karnataka Milk Federation (KMF) has slump in milk procurement by 10 liters since 2022 July, says close source.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X