ಹಾಲು ಉತ್ಪಾದಕರಿಗೆ ಕೆಎಂಎಫ್ ಶಾಕ್: 2 ರೂ. ಕಡಿತ
ಬೆಂಗಳೂರು, ಜೂನ್ 5: ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಸಂಘ ಹಾಗೂ ಅನೇಕ ಒಕ್ಕೂಟಗಳು ಸೇರಿ ಹಾಲಿನ ದರದಲ್ಲಿ 2 ರೂ. ಕಡಿತ ಮಾಡಿವೆ.
ಸರ್ಕಾರವು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಲೀಟರ್‌ಗೆ 5 ರೂ. ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಆದರೆ ಹಾಲಿನ ಉತ್ಪಾದನೆ ಹೆಚ್ಚಾದರೆ ನಿರ್ವಹಣೆಯ ತೊಡಕನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿವೆ.
ಬೆಂಗಳೂರು ಹಾಲು ಒಕ್ಕೂಟದಲ್ಲಿ 2 ರೂ. ಕಡಿತ ಮಾಡಲಾಗಿದೆ. ಕೆಲವು ಒಕ್ಕೂಟಗಳು ಪ್ರತಿ ಲೀಟರ್‌ಗೆ 1.50-2 ರೂ ವರೆಗೆ ದರ ಕಡಿತ ಮಾಡಿವೆ. ಆದರೆ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರ ಇಳಿಕೆಯಾಗುವುದಿಲ್ಲ.

ರೈತರಿಗೆ ದರ ಕರಿಮೆಯಾದರೆ ಅದರ ಲಾಭ ಗ್ರಾಹಕರಿಗೆ ನೀಡುವಂತಾಗಬೇಕು, ಆದರೆ ಒಕ್ಕೂಟಗಳು ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರೈತರಿಗೂ ನಷ್ಟ ಇತ್ತ ಖರೀದಿಸುವವರಿಗೂ ಇದರ ಲಾಭ ಸಿಗದಾಗಿದೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಹಾಲು ಉತ್ಪಾದನೆ ಹೆಚ್ಚಳವಾಗುತ್ತಿದೆ. ಮೇ-ಜೂನ್ ತಿಂಗಳಲ್ಲಿ ಅಧಿಕ ಪ್ರಮಾಣದ ಹಾಲು ಉತ್ಪತ್ತಿಯಾಗುವ ಕಾರಣ ಹಾಲು ಒಕ್ಕೂಟಗಳಿಗೆ ಹೆಚ್ಚುವರಿ ಹಾಲು ಮಾರಾಟ ಮಾಡಲು ಆಗುವುದಿಲ್ಲ. ಈ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಿ ಸಂಗ್ರಹಿಸಿ ಇಡಬೇಕು ಇಲ್ಲವೇ ಮಾರಾಟ ಮಾಡಬೇಕಾಗಿದೆ.












Click it and Unblock the Notifications