'ಕಿಲ್ಲರ್ ಕಾಂಗ್ರೆಸ್' ಎಂದು ಟ್ವೀಟ್ ಮಾಡಿದ ಅನಂತ್ ಕುಮಾರ್ ಹೆಗಡೆ
ಬೆಂಗಳೂರು, ಜನವರಿ 4: "ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರಾಜ್ಯ ಸರಕಾರ ಪ್ರಾಯೋಜಿತ ಇಸ್ಲಾಮಿಕ್ ಭಯೋತ್ಪಾದನೆಗೆ ಮೂರು ತಿಂಗಳಿಗೆ ಒಬ್ಬ ಹಿಂದೂವನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಕೇಂದ್ರ ಕೌಶಲಾಭಿವೃದ್ಧಿ ಖಾತೆಯ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಟ್ವೀಟ್ ಮಾಡಿದ್ದಾರೆ.
ದೀಪಕ್ ಸಾವಿನ ನಂತರ ಪ್ರತಿಕ್ರಿಯೆ ನೀಡಿರುವ ಅವರು, ಕರ್ನಾಟಕದ ಮುಖ್ಯಮಂತ್ರಿಗಳು ಅಲ್ಪ ಸಂಖ್ಯಾತರ ಮತಗಳನ್ನು ಸೆಳೆಯುವ ಸಲುವಾಗಿ ತಮ್ಮ ಜಾಹೀರಾತಿನಲ್ಲಿ ಈ ಸಂಖ್ಯೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಬಹುದು ಎಂದು ಟೀಕಿಸಿರುವ ಅವರು, 'ಕಿಲ್ಲರ್ ಕಾಂಗ್ರೆಸ್' ಎಂಬ ಒಕ್ಕಣೆ ಹಾಕಿ, ರಕ್ತಸಿಕ್ತ ಕೈ ಗುರುತಿನ ಫೋಟೋ ಹಾಕಿದ್ದಾರೆ.

ಕೇಂದ್ರ ಸಚಿವರಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧ ಅನಂತಕುಮಾರ್ ಹೆಗಡೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. "ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನದ ಬದಲಾವಣೆಗೆ" ಎಂದು ಹೇಳಿಕೆ ನೀಡಿದ್ದ ಅವರು, ಆ ನಂತರ ಆಕ್ಷೇಪ ಹಾಗೂ ಆಕ್ರೋಶ ಕೇಳಿಬಂದ ಹಿನ್ನೆಲೆಯಲ್ಲಿ ಸಂಸತ್ ನಲ್ಲಿ ಕ್ಷಮೆ ಕೋರಿದ್ದರು.
We have lost a #Hindu every quarter during @siddaramaiah's regime on account of State sponsored #IslamicTerror.@CMofKarnataka can pride these figures in his advertisements to lick the minority votes. #KillerCongress #HinduGenocide #DeepakMurder pic.twitter.com/Clp5lZN9uO
— Anantkumar Hegde (@AnantkumarH) 4 January 2018












Click it and Unblock the Notifications