kichcha Sudeep: ಆ ಎರಡು ಪಕ್ಷದಿಂದ ಬಿಗ್ ಆಫರ್: ಕಿಚ್ಚ ಸುದೀಪ್ ನಡೆ ಯಾವ ಪಾರ್ಟಿ ಕಡೆ?
ಬೆಂಗಳೂರು,ಡಿಸೆಂಬರ್ 17: ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಾ? ಈ ಒಂದು ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸ್ವತಃ ನಟ ಸುದೀಪ್ ಅವರೇ ಈ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಜೊತೆಗೆ ಕಾಣಿಸಿಕೊಂಡಿದ್ದ ಸುದೀಪ್ ಅವರು ಯಾವ ಪಕ್ಷವನ್ನ ಸೇರ್ಪಡೆಯಾಗಲಿದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಈ ಪ್ರಶ್ನೆಗೆ ನಟ ಕಿಚ್ಚ ಸುದೀಪ್ ಅವರೇ ಉತ್ತರಿಸಿದ್ದಾರೆ.
ಅಲ್ಲದೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆ ಒಂದು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವೂ ಕೇಳಿಬಂದಿತ್ತು ಎನ್ನುವ ಕುರಿತು ನಟ ಸುದೀಪ್ ಅವರೇ ಖಾಸಗಿ ಚಾನೆಲ್ ಒಂದರ ಸಂದರ್ಶನದಲ್ಲಿ ಯಾವ ಯಾವ ಪಕ್ಷದಿಂದ ಯಾವ ಆಫರ್ ಬಂದಿತ್ತು ಎಂಬ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ರಾಜಕೀಯದ ಬಗ್ಗೆ ನನಗೆ ಇನ್ನೂ ಆಸಕ್ತಿ ಹುಟ್ಟಿಲ್ಲ. ನಾನು ಬರುವುದೇ ಇಲ್ಲ ಅಂತ ಹೇಳಿದ್ರೆ ಅದು ಬದಲಾವಣೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಭೇಟಿ ಆಗಿದ್ವಿ, ಡಿ ಕೆ ಶಿವಕುಮಾರ್ ಅವರು ನನಗೆ ಉತ್ತಮ ಸ್ನೇಹಿತರು. ಇವರು ಬಂದ್ರೆ ಅವರು ಬರ್ತಾರೆ. (ಕಾಂಗ್ರೆಸ್ ನವ್ರು ಬಂದ್ರೆ, ಬಿಜೆಪಿಯವರು ಬರ್ತಾರೆ) ಯಾರಾದ್ರೂ ಒಬ್ಬರು ನನ್ನ ಎತ್ಕೊಂಡ್ ಹೋಗ್ತಾರೆ. ಇಬ್ಬರು ಸ್ನೇಹಿತರೇ ನನಗೆ ಎಂದು ಸುದೀಪ್ ಅವರು ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ಕೇಳಿ ಬಂದ ಕುರಿತು ಕಿಚ್ಚ ಸುದೀಪ್ ಅವರು ಮಾತನಾಡಿ, ಯಾವ ಊರು, ಆ ಊರು, ಈ ಊರು ಅಂತ ಅಲ್ಲ. ನಿಮಗೆ ಯಾವ ಊರು ಬೇಕು ಹೇಳಿ, ನಾವು ಅದನ್ನ ಬಿಡ್ಸಿ ಮಾಡಿಕೊಡ್ತಿವಿ ಅಂತ ಬಂದಿತ್ತು ಎಂದು ಕೈ ನಾಯಕರು ಕೊಟ್ಟ ಆಫರ್ ಬಗ್ಗೆ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಸಿನಿಮಾದಲ್ಲಿ ಇನ್ನೂ ಕೆಲಸ ಮಾಡ್ಬೇಕು. ಕೆಲವು ಕೆಲಸಗಳಿವೆ, ಇನ್ನೂ ಏನೇನೋ ಮಾಡ್ಬೇಕು. ರಾಜಕೀಯ ಎನ್ನುವುದು ತುಂಬಾ ದೊಡ್ಡ ಜವಾಬ್ದಾರಿ. ಅದು ಹಸಿವಲ್ಲ, ಅದು ಜವಾಬ್ದಾರಿ. ನೀವು ಬೆಳಗ್ಗೆ ನಿಮಗೋಸ್ಕರ ಎದ್ದೇಳೋಕೆ ಆಗಲ್ಲ, ಬೇರೆಯವರಿಗೊಸ್ಕರ ಏಳ್ಬೇಕು. ಎಲ್ಲಾರು ತೃಪ್ತಿಯಾದಮೇಲೆ ಮಲ್ಕೊಬೇಕು. ಅದಕ್ಕೆ ರೆಡಿ ಇದ್ದಾಗ ಬರ್ತಿನಿ . ನನಗೆ ಎರಡು ಕಡೆ ಕಾಲಿಡೋಕೆ ಇಷ್ಟ ಇಲ್ಲ. ರಾಜಕೀಯಕ್ಕೆ ಹೋದಾಗ ಎರಡು ಕಡೆ ಕಾಲಿಡಬಾರದು. ಸಿನಿಮಾರಂಗದಲ್ಲಿಯೇ ಕೆಲಸ ಇದೆ. ತುಂಬಾನೆ ಕೆಲಸ ಮಾಡೋದಿದೆ. ಸಿನಿರಂಗದಲ್ಲಿಯೇ ಇನ್ನು ದುಡಿಯೋದು ಇದೆ. ಹಾಗಾಗಿಯೇ ಸದ್ಯಕ್ಕೆ ರಾಜಕೀಯ ಯೋಚನೆ ಇಲ್ಲ ಅನ್ನುವ ಅರ್ಥದಲ್ಲಿಯೇ ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ರಾಜಕೀಯ ಬೇಡ ಅಂತಲೂ ಹೇಳಲಿಲ್ಲ.
ನಾನು ಕಳೆದ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಅವರ ಪರ ಪ್ರಚಾರ ಮಾಡಿದ್ದೆ. ನಾನು ಬಸವರಾಜ ಬೊಮ್ಮಾಯಿ ಅವರಿಗೊಸ್ಕರ ಪ್ರಚಾರ ಮಾಡಿದ್ದು, ಅವರು ನನಗೆ ತುಂಬಾ ಆತ್ಮೀಯರು ಹೀಗಾಗಿ ನಾನು ಪ್ರಚಾರಕ್ಕೆ ಹೋಗಿದ್ದೆ ಎಂದು ನಟ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ನನಗೆ ಸಿನಿಮಾವೇ ದೊಡ್ಡ ವೇದಿಕೆ. ಈ ದೊಡ್ಡ ವೇದಿಕೆಯಿಂದಲೇ ನನ್ನ ರಾಜಕೀಯಕ್ಕೆ ಕರೆಯುತ್ತಿರುವುದು. ಸಿನಿಯಾ ಕ್ಷೇತ್ರ ದೊಡ್ಡ ವೇದಿಕೆ. ಇದಕ್ಕಿಂತ ದೊಡ್ಡ ವೇದಿಕೆ ಬರುವುದೇ ಇಲ್ಲ . ನನಗೆ ಹೆಸರು ಕೊಟ್ಟಿದ್ದು ಹಾಗೂ ಕೋಟಿ ಕೋಟಿ ಜನ ಪ್ರೀತಿ ಗಳಿಸಿದ್ದೇನೆ. ಸಿನಿಮಾ ಕ್ಷೇತ್ರವೇ ನನಗೆ ದೊಡ್ಡ ವೇದಿಕೆ, ಇದಕ್ಕಿಂತ ದೊಡ್ಡ ವೇದಿಕೆ ಯಾವುದು ಇಲ್ಲ ಎಂದು ಸುದೀಪ್ ಅವರು ರಾಜಕೀಯದ ಕುರಿತು ಮಾತನಾಡಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ











Click it and Unblock the Notifications