CM Post: ಮುಖ್ಯಮಂತ್ರಿ ಬದಲಾವಣೆ: ಮಹತ್ವದ ಮಾಹಿತಿ ಕೊಟ್ಟ ಕೆ ಹೆಚ್ ಮುನಿಯಪ್ಪ
ಬೆಂಗಳೂರು, ಏಪ್ರಿಲ್ 16: 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುತದೊಂದಿಗೆ ಅಧಿಕಾರಕ್ಕೆ ಬಂದ ದಿನವೇ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಿಗ್ ಫೈಟ್ ಏರ್ಪಟ್ಟಿತ್ತು. ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಪಟ್ಟ ಸಿದ್ದರಾಮಯ್ಯ ಪಾಲಾಯಿತು. ಸದ್ಯ ಸರ್ಕಾರ ಸುಭದ್ರವಾಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಶುರುವಾಗಿದೆ. ಸಿಎಂ ಪಟ್ಟದ ವಿಚಾರವಾಗಿ ಎರಡುವರೆ ವರ್ಷಗಳ ಅವಧಿಯ ಹಂಚಿಕೆಯಾಗಿದೆ ಎನ್ನುವ ಮಾತುಗಳನ್ನ ಡಿ ಕೆ ಶಿವಕುಮಾರ್ ಅವರು ಹೇಳಿಕೆಯೂ ರಾಜ್ಯ ರಾಜಕೀಯ ಸಂಚಲನವನ್ನ ಸೃಷ್ಟಿಸಿದ್ದು, ಇದೀಗ ಸಿಎಂ ಬದಲಾವಣೆ ಕುರಿತು ಸಚಿವ ಕೆ ಎಚ್ ಮುನಿಯಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿಗಳ ಬದಲಾವಣೆಯ ವಿಚಾರವಾಗಿ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರವರೇ ಇದ್ದು ಅವರೇ ಮುಂದುವರೆಯಲಿದ್ದಾರೆ. ಯಾವುದೇ ಬದಲಾವಣೆಗಳಿಲ್ಲ ಅದು ನಮ್ಮ ಎಐಸಿಸಿ ನಾಯರು ನೋಡುತ್ತಾರೆ. ಪರಿಶಿಷ್ಟ ಜಾತಿಯ ಮುಖ್ಯಮಂತ್ರಿ ಆಗಬೇಕು ಎನ್ನುವ ವಿಚಾರ ಈಗ ಅಪ್ರಸ್ತುತ ಎಂದು ತಿಳಿಸಿದರು. ಇಂದು ಆಹಾರ ಸಚಿವ ಕೆಹೆಚ್.ಮುನಿಯಪ್ಪ ರವರ ನಿವಾಸಕ್ಕೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರು ಸೌಜನ್ಯಯುತವಾಗಿ ಬೇಟಿ ನೀಡಿದರು. ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರವರ ಕುಟುಂಬಕ್ಕೆ 20 ವರ್ಷಗಳ ಸಂಭಂದವಿದ್ದು, ಸಚಿವರು ಇಂದು ಅವರ ಕ್ಷೇತ್ರದ ಕೆಲಸದ ವಿಚಾರವಾಗಿ ಬೇಟಿ ನೀಡಿದರು ಎಂದು ತಿಳಿಸಿದರು.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಲೋಕಸಭೆಯ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿರವರ ಪರವಾಗಿ ಇಡಿ ಚಾರ್ಜ್ ಶೀಟ್ ಸಲ್ಲಿಸಿದ್ದು ನಮ್ಮ ಪಕ್ಷ ಕಾನೂನು ಪ್ರಕಾರ ಹೋರಾಟವನ್ನು ನಡೆಸಲಿದ್ದೇವೆ ಕೇಂದ್ರ ಸರ್ಕಾರ ಹಾಗೂ ಬೆಜೆಪಿ ಪಕ್ಷದ ನಾಯಕರು ನಮ್ಮ ನಾಯಕರ ವಿರುದ್ದ ಇಲ್ಲ ಸಲ್ಲದ ಆರೋಪಗಳನ್ನು ವರೆಸಿ ಅವರ ತೇಜೊವದೆ ಮಾಡಲು ಹೊರಟಿದ್ದು ನಾವು ಈ ಕುರಿತು ಹೋರಾಟ ನಡೆಸಲಿದ್ದೇವೆ.
ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ.ಸಿಬಿಐ,ಆಧಾಯ ತೆರಿಗೆ ಇವುಗಳಿಂದ ನಮ್ಮ ಪಕ್ಷದ ನಾಯಕರಿಗೆ ಕಿರುಕುಳ ನೀಡುವುದು ಸಹಜವಾಗಿದೆ. ಬಿಜೆಪಿಯ ಕೇಂದ್ರ ನಾಯಕರ ಮೇಲೆ ಯಾರೆ ಮಾತನಾಡಿದರು ಹಾಗೂ ಬಲಿಷ್ಠ ಪಕ್ಷ ಸಂಘಟನೆ ಮಾಡುವ ನಾಯಕರನ್ನು ಟಾರ್ಗೆಟ್ ಮಾಡಿ ಅವರನ್ನು ಪಕ್ಷಕ್ಕೆ ಸೆಳೆಯುವುದು ಇಲ್ಲವಾದರೆ ಅವರ ವಿರುದ್ದ ತನಿಖಾ ಸಂಸ್ಥೆಗಳ ಮೂಲಕ ಕ್ರಮತೆಗೆದುಕೊಳ್ಳುವುದು ಸಹಜವಾಗಿದೆ ಎಂದು ಹೇಳಿದರು.
ಸಂವಿಧಾನ ಚೌಕಟ್ಟಿನಲ್ಲಿ ನಾವು ಕಾನೂನಿಗೆ ಗೌರವ ಕೊಡಬೇಕು ಮತ್ತು ಕೇಂದ್ರ ಸರ್ಕಾರದ ವಿರುದ್ಧ ನಾವು ದೊಡ್ಡಮಟ್ಟದಲ್ಲಿ ಹೋರಾಟ ಮಾಡಲು ನಿರ್ದಾರ ಮಾಡುತ್ತೇವೆ. ಜಾತಿ ಗಣತಿ ವಿಚಾರವಾಗಿ ನಾಳೆ ನಡೆಯಲಿರುವ ಸಚಿವಸಂಪುಟಸಭೆಯಲ್ಲಿ ಚರ್ಚೆ ನೆಡೆಸಲಿದ್ದೇವೆ. ಸಂವಿಧಾನ ಚೌಕಟ್ಟಿನಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಎಲ್ಲಾ ಧರ್ಮಗಳಿಗೆ ಸಮಾನವಾದ ಅವಕಾಶಗಳಿದ್ದು ಅದರಂತೆಯೆ ಜಾತಿಗಣತಿ ನಡೆಸಿದ್ದು ಸಚಿವ ಸಂಪುಟ ಸಭೆಯಲ್ಲಿ ಇದರಬಗ್ಗೆ ಚರ್ಚೆ ನಡೆಸಲಿದ್ದೇವೆ ಎಂದರು.












Click it and Unblock the Notifications