ಜಾರಿ ನಿರ್ದೇಶನಾಲಯದ ತನಿಖೆಗೆ ಬೆಸ್ತುಬಿದ್ದ ಕೆಜಿಎಫ್ ಬಾಬು..!
ಬೆಂಗಳೂರು, ಜೂನ್ 21: ಕೆಜಿಎಫ್ ಬಾಬು ಯಶೋಗಾಥೆಯೇ ನಿಬ್ಬೆರಗಾಗುವಂತೆ ಮಾಡುತ್ತದೆ. ಕೆಜಿಎಫ್ ಬಾಬು ಗುಜರಿ ಬಾಬುವಾಗಿದ್ದುಕೊಂಡು ಸಾವಿರಾರು ಕೋಟಿ ಒಡೆಯನಾಗಿದ್ದು ಕಡಿಮೆಯ ಮಾತಲ್ಲ ಬಿಡಿ. ಗುಜರಿ ಬಾಬುವಾಗಿದ್ದು ಕೆಜಿಎಫ್ ಬಾಬುವಾಗಿ ಸಾವಿರಾರು ಕೋಟಿ ಒಡೆಯನಾಗಿದ್ದಾಗಲೂ ತನ್ನ ಸಾಮ್ರಾಜ್ಯಕ್ಕೆ ಧಕ್ಕೆಯಿರಲಿಲ್ಲ. ಆದರೆ ರಾಜಕೀಯ ಅಖಾಡಕ್ಕೆ ಧುಮುಕಿದ್ದೆ ಶನಿ ಒಕ್ಕರಿಸಿದಂತಾಗಿದೆ. ಇಡಿ ವಿಚಾರಣೆಗೆ ಕೆಜಿಎಫ್ ಬಾಬು ಹೈರಾಣಾಗಿಸಿದೆ.
ಇಡಿ ಅಧಿಕಾರಿಗಳು ವಿಚರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರಿಂದ ದೆಹಲಿಗೆ ತೆರಳಿದ್ದ ಕೆಜಿಎಫ್ ಬಾಬು ತನಿಖೆಗೆ ಒಳಪಟ್ಟಿದ್ದರು. ಸತತದ 10 ಗಂಟೆಗಳ ವಿಚಾರಣೆಗೆ ಒಳಗಾಗಿದ್ದ ಕೆಜಿಎಫ್ ಬಾಬು ತನಿಖೆಯ ರೀತಿಗೆ ಸುಸ್ತಾಗಿ ಹೋಗಿದ್ದಾರೆ. ಕಾಂಗ್ರೆಸ್‌ನ ಯಾರ ಬೇನಾಮಿಯೂ ನಾನಲ್ಲ. ಆಸ್ತಿಗಳನ್ನು ಹರಾಜಿನಲ್ಲಿ ಕೂಗಿ ಖರೀದಿಯನ್ನು ಮಾಡಿದ್ದೇನೆ ಎಂದಿದ್ದಾರೆ.
ಇಡಿ ಅಧಿಕಾರಿಗಳು ನನ್ನ ಆಸ್ತಿಯ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿಲ್ಲ. ರಾಜಕೀಯ ರಾಜಕಾರಣದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ರಾಜಕಾರಣಕ್ಕಾಗಿ ಬಂದಿದ್ದೇಕೆ. ಕಾಂಗ್ರೆಸ್ ಸೇರಿದ್ದೇಕೆ ಎಂದೆಲ್ಲಾ ಕೇಳುತ್ತಾರೆ. ಮನಿಲಾಂಡ್ರಿಂಗ್ ಮಾಡಿಲ್ಲ. ಸುಖಾ ಸುಮ್ಮನೆ ಇಡಿ ತೊಂದರೆ ಕೊಡುತ್ತಿದೆ, ಸಂಬಂಧವೇ ಇಲ್ಲದ ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಅಸಧಾನವನ್ನು ಹೊರಹಾಕಿದ್ದಾರೆ ಕೆಜಿಎಫ್ ಬಾಬು.

ಕಾಂಗ್ರೆಸ್‌ನ ಯಾರ ಬೇನಾಮಿಯಲ್ಲ
ಕೆಜಿಎಫ್ ಬಾಬು ಇಡಿಯ ತನಿಖೆಯಿಂದ ಎಷ್ಟು ಹೈರಾಣಗಾಗಿದ್ದಾರೆ ಎಂದರೇ ತಾನೂ ರಾಜಕಾರಣಕ್ಕೆ ಬಂದಿದ್ದೆ ತಪ್ಪಾಯ್ತು ಎನ್ನುತ್ತಿದ್ದಾರೆ. ಇಡಿಯ ತನಿಖೆಯಲ್ಲಿ ಮನಿ ಲಾಂಡ್ರಿಗ್ ಮಾಡಿಲ್ಲ, ಯಾರಿಗೂ ಮೋಸ ಮಾಡಿಲ್ಲ. ಆದರೂ ಇಡಿ ತನಿಖೆ ಮಾಡುತ್ತಿದ್ದಾರೆ. ಎರಡು ದಿನ ತನಿಖೆಯಾಗಿದೆ. ಎಲ್ಲವೂ ರಾಜಕೀಯ ಪ್ರಶ್ನೆಗಳನ್ನೇ ಕೇಳುತ್ತಾರೆ. ಎಲೆಕ್ಷನ್ ನಲ್ಲಿ ಏನು ಮಾಡಿದೆ ಅಂತೆಲ್ಲಾ ಕೇಳುತ್ತಾರೆ. ನಾನು ಕಾಂಗ್ರೆಸ್‌ನ ಯಾರ ಬೇನಾಮಿಯಲ್ಲ ಎಂದಿದ್ದೇನೆ. ಮಾಧ್ಯಮದ ಬಳಿಯಲ್ಲಿ ಓಪನ್ ಆಗಿ ಮಾತನಾಡೋದು ಸರಿಯಿಲ್ಲ ಎಂದಿದ್ದಾರೆ. ತನಿಖೆಗೆ ಸಹಕಾರವನ್ನು ನೀಡುತ್ತಿದ್ದೇೆನೆ ಎಂದು ಹೇಳಿದ್ದಾರೆ.

ವಕೀಲ ಮೂಲಕ ಚಿನ್ನವನ್ನು ಬಿಡಿಸಬೇಕಿದೆ
ಇಡಿ ಅಧಿಕಾರಿಗಳು ಮನೆ ಮತ್ತು ಕಚೇರಿ ಮೇಲೆ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದರು. ಚಿನ್ನವನ್ನು ಸೀಜ್ ಮಾಡಿದ್ದಿಂದ ವಕೀಲರ ಮೂಲಕ ಚಿನ್ನವನ್ನು ಬಿಡಿಸಿಕೊಳ್ಳಬೇಕಿದೆ. ಚಿನ್ನವನ್ನು ಬಿಡಿಸುವ ಸಲುವಾಗಿ ದೆಹಲಿಗೆ ಬಂದಿದ್ದೇನೆ. ವಕೀಲರನ್ನು ಭೇಟಿ ಮಾಡಿ ಮಾತಾಡಿದ್ದೇನೆ ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ.

ಸಮನ್ಸ್ ನೀಡಿದರೇ ವಿಚರಣೆಗೆ ಹಾಜರು
ಕೆಜಿಎಫ್ ಬಾಬುವನ್ನು ಇಡಿ ಅಧಿಕಾರಿಗಳು ಎರಡು ದಿನ ವಿಚಾರಣೆಯನ್ನು ನಡೆಸಿದ್ದಾರೆ. ಎರಡು ದಿನದಲ್ಲಿ 10 ತಾಸು ವಿಚಾರಣೆಯನ್ನು ಮಾಡಿದ್ದಾರೆ. ಸಮನ್ಸ್ ನೀಡಿದಾಗ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚನೆಯನ್ನು ನೀಡಿದ್ದಾರೆ. ಸಮನ್ಸ್ ನೀಡಿದ ಬಳಿಕ ಇಡಿ ತನಿಖೆಗೆ ಹಾಜರಾಗುತ್ತೇನೆ. ತನ್ನ ಎಲ್ಲಾ ಆಸ್ತಿಯನ್ನು ಹರಾಜಿನಲ್ಲಿ ತೆಗೆದುಕೊಂಡು ತೆರಿಗೆಯನ್ನು ಕಟ್ಟಿದ್ದೇನೆ. ಇಡಿ ಅಧಿಕರಿಗಳಿಗೆ ಸಹಕಾರವನ್ನು ನೀಡುತ್ತೇನೆ ಎಂದಿದ್ದಾರೆ ಬಾಬು.

ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದ ಇಡಿ
ಉದ್ಯಮಿ ಕೆಜಿಎಫ್ ಬಾಬುಗೆ ಸೇರಿದ ಮನೆ, ಕಚೇರಿ ಮೇಲೆ ಮೇ 28ರಂದು ದಾಳಿ ಮಾಡಿದ್ದ ಇಡಿ ನಿರಂತರ 18 ಗಂಟೆಗಳ ಕಾಲ ಬಾಬು ಮನೆಯಲ್ಲಿ ಹುಡುಕಾಟ ನಡೆಸಿದ್ದರು. ಇಡಿ ಅಧಿಕಾರಿಗಳು ಕೆಲವು ಮಹತ್ವದ ಕಡತಗಳನ್ನ ವಶಕ್ಕೆ ಪಡೆದು ತೆರಳಿದ್ದರು. ಈ ಸಂಬಂಧ ವಿಚಾರಣೆಗೆ ಬರುವಂತೆ ಬುಲಾವ್ ನೀಡಿದ್ದರು.
ಸ್ಕ್ರಾಪ್ ಬ್ಯುಸಿನೆಸ್ ಮಾಡುತ್ತಿದ್ದ ಕೆಜಿಎಫ್ ಬಾಬು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಶುರು ಮಾಡಿದ್ದರು. ಜಮೀನು, ನಿವೇಶನ, ಕಟ್ಟಡಗಳ ಕೊಡು ಕೊಳ್ಳುವಿಕೆ ಶುರುವಿಟ್ಟು ಸಾವಿರಾರು ಕೋಟಿಯ ಒಡೆಯನಾಗಿದ್ದರು. ಕೆಜಿಎಫ್ ಬಾಬು ವ್ಯವಹಾರ, ಹಣಕಾಸು ವಹಿವಾಟು ಮೇಲೆ ನಿಗಾ ಇಟ್ಟಿದ್ದ ಇಡಿ ಅಧಿಕಾರಿಗಳು, ಕಳೆದ ಒಂದು ತಿಂಗಳಿಂದ ಬಾಬು ಆರ್ಥಿಕ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿ ದಾಳಿ ಮಾಡಿದ್ದರು. ಬಾಬುಗೆ ಸೇರಿದ ಎರಡು ಮನೆ, ಉಮ್ರಾ ಡೆವಲಪರ್ಸ್ ಕಚೇರಿ, ಸಂಬಂಧಿಗಳ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ವ್ಯಾಪಕ ಶೋಧ ನಡೆಸಿದ್ದರು. ಇದೀಗ ಇಡಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.












Click it and Unblock the Notifications