ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀವಿದ್ದಲ್ಲೆ ಬರಲಿದೆ ರುಚಿ ರುಚಿ ಮೀನು ಖಾದ್ಯ

By Madhusoodhan
|
Google Oneindia Kannada News

ಬೆಂಗಳೂರು, ಜೂನ್, 30: ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಯೋಜನೆಯಡಿ ಪ್ರಾಯೋಗಿಕವಾಗಿ ಒಂದು ಮೊಬೈಲ್ ಮತ್ಸ್ಯದರ್ಶಿನಿ ಮತ್ತು ಮೊಬೈಲ್ ಮೀನು ಮಾರಾಟ ವಾಹನವನ್ನು ರಾಜ್ಯದ ಆಯ್ದ ಪ್ರದೇಶಗಳಲ್ಲಿ ಬಿಡುಗಡೆ ಮಾಡಲಿದೆ.

ಈ ಯೋಜನೆಯಡಿ ಮಾರ್ಚ್ 4 ರಂದು ಮಂಗಳೂರಿನಲ್ಲಿ ರಾಷ್ಟ್ರೀಯ ಮತ್ಸ್ಯಮೇಳದ ಸಮಯದಲ್ಲಿ ಪ್ರಥಮವಾಗಿ ಮೊಬೈಲ್ ಮತ್ಸ್ಯದರ್ಶಿನಿಯನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗಿದೆ. ಈ ಮೊಬೈಲ್ ಮತ್ಸ್ಯದರ್ಶಿನಿಯನ್ನು ಟಾಟಾ ಎಸ್ ಸೂಪರ್ ವಾಹನದ ಚಾಸೀಸ್ ಮೇಲೆ ನಿರ್ಮಿಸಲಾಗಿದೆ.[ಕಾವೇರಿ ಪ್ರವಾಹದ ನೀರಲ್ಲಿ ಮೀನು ಹಿಡಿದೋನೇ ಜಾಣ]

fish

ಮೊಬೈಲ್ ಮತ್ಸ್ಯದರ್ಶಿನಿಯಲ್ಲಿ ಗ್ರಾಹಕರಿಗೆ ಉತ್ತಮ ಪರಿಸರದಲ್ಲಿ ಮೀನು ಮತ್ತು ಮೀನಿನ ಮೌಲ್ಯದರ್ಶಿತ ಖಾದ್ಯಗಳನ್ನು ಸಾರ್ವಜನಿಕರಿಗೆ ನೀಡಲಾಗುವುದು. ಈ ವಾಹನದಲ್ಲಿ ಮೀನನ್ನು ಸಂರಕ್ಷಿಸಿ ಇಡಲು ಬೇಕಾದ ಇಲೆಕ್ಟ್ರಿಕಲ್ ಮತ್ತು ಫ್ರೈಯರ್‌ಗಳ ಓವರ್ ಹೆಡ್ ಟ್ಯಾಂಕ್, ತ್ಯಾಜ್ಯ ವಸ್ತು ಶೇಖರಣೆ, ಬ್ಯಾಟರಿ ಚಾಲಿತವಾಗಿರುತ್ತದೆ.[ಕರಾವಳಿ ಬಂದರಿಗೆ ಬೊಂಬಾಟ್ ಬೂತಾಯಿ!]

ವಾಹನದ ಎರಡು ಪಾರ್ಶ್ವಗಳನ್ನು ತೆರೆದು ಸಾರ್ವಜನಿಕರಿಗೆ ಸೇವೆ ಒದಗಿಸಲಾಗುವುದು. ಇದನ್ನು ಮಂಗಳೂರಿನ ಪ್ರಮುಖ ಕೇಂದ್ರಗಳಾದ ಕದ್ರಿ ಪಾರ್ಕ್, ಪಿಲಿಕುಳ ನಿಸರ್ಗಧಾಮದಲ್ಲಿ ಬಳಸುತ್ತಿದ್ದು, ದಿನವೊಂದಕ್ಕೆ 15 ಸಾವಿರ ರು. ಮೀನು ಖಾದ್ಯಗಳು ಮಾರಾಟವಾಗುತ್ತಿದೆ.

ಮೊಬೈಲ್ ಮೀನು ಮಾರಾಟ ವಾಹನ:
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ಮೊಬೈಲ್ ಮತ್ಸ್ಯದರ್ಶಿನಿಯನ್ನು ಮಾತ್ರವಲ್ಲದೆ ಸಾರ್ವಜನಿಕರಿಗೆ ತಾಜಾ ಮೀನನ್ನು ಶುದ್ಧೀಕರಿಸಿಕೊಡಲು ಮೊಬೈಲ್ ಮೀನು ಮಾರಾಟ ವಾಹನವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಸಹ ಮೊಬೈಲ್ ಮತ್ಸ್ಯದರ್ಶಿನಿಯಲ್ಲಿದಂತೆ ಮೀನು ಸಂರಕ್ಷಿಸಲು ಬೇಕಾದ ಚಿಲ್ಲರ್, ನೀರಿನ ವ್ಯವಸ್ಥೆ ಹಾಗೂ ತ್ಯಾಜ್ಯ ಸಂಗ್ರಹಣ ವ್ಯವಸ್ಥೆ ಇರುತ್ತದೆ.[ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]

ಮೊಬೈಲ್ ಮತ್ಸ್ಯದರ್ಶಿನಿ ಮತ್ತು ಮೊಬೈಲ್ ಮೀನು ಮಾರಾಟ ವಾಹನಗಳನ್ನು ಬೆಂಗಳೂರು ಪರಿಸರ ಹಾಗೂ ಇತರ ಆಯ್ದ ಸ್ಥಳಗಳಲ್ಲಿ ಉಪಯೋಗಿಸಲಾಗುವುದಲ್ಲದೇ ರಾಜ್ಯಾದಾದ್ಯಂತ ನಡೆಯುವ ಮತ್ಸ್ಯಮೇಳ, ಕೃಷಿಮೇಳ ಹಾಗೂ ಇತರ ವಸ್ತು ಪ್ರದರ್ಶನಗಳಲ್ಲಿ ಉಪಯೋಗಿಸಲಾಗುವುದು.

ಭವಿಷ್ಯದಲ್ಲಿ ಮೊಬೈಲ್ ಮತ್ಸ್ಯದರ್ಶಿನಿ ಮತ್ತು ಮೊಬೈಲ್ ಮೀನು ಮಾರಾಟ ವಾಹನಗಳಲ್ಲಿ ಮೀನು ಮತ್ತು ಮೀನಿನ ಖಾದ್ಯಗಳ ಮಾರಾಟ ಪ್ರಕ್ರಿಯೆಯು ಉತ್ತಮವಾದಲ್ಲಿ ಇಂತಹ ಮೊಬೈಲ್ ಮತ್ಸ್ಯದರ್ಶಿನಿ ಮತ್ತು ಮೊಬೈಲ್ ಮೀನು ಮಾರಾಟ ವಾಹನಗಳನ್ನು ರಾಜ್ಯದ ಇತರೆ ನಗರಗಳಲ್ಲಿ ಪರಿಚಯಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

English summary
Karnataka Fisheries Development Corporation (KFDC) said KFDC will open a mobile Matsyadarshini (fish canteen) in all over Karnataka shortly. The mobile Matsyadarshini is built on a Tata Ace Super vehicle chassis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X