Get Updates
Get notified of breaking news, exclusive insights, and must-see stories!

Electricity Connection: ಹೊಸ ವಿದ್ಯುತ್ ಸಂಪರ್ಕ ಪಡೆಯುವವರಿಗೆ ಸಿಹಿಸುದ್ದಿ

ಬೆಂಗಳೂರು, ಏಪ್ರಿಲ್. 11: ಇದು ಬೇಸಿಗೆಯ ಸಮಯ. ಕಟ್ಟಡ, ಮನೆ ನಿರ್ಮಾಣ ಕಾಮಗಾರಿ ಅತಿ ಹೆಚ್ಚಾಗಿ ನಡೆಯುತ್ತವೆ. ಇದೇ ವೇಳು ತಮ್ಮ ನೂತನ ಕಟ್ಟಡ ಮತ್ತು ಮನೆಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕೊಡಿಸುವುದು ತುಂಬಾ ತ್ರಾಸದಾಯಕ ಕೆಲಸವಾಗಿತ್ತು. ಈಗ ಈ ಕಷ್ಟ ಇರೋದಿಲ್ಲ. ಕೇವಲ ಮೂರು ದಿನದಲ್ಲೇ ನಿಮ್ಮ ಮನೆಗೆ ಸಿಗಲಿದೆ ಸಂಪರ್ಕ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಇತ್ತೀಚೆಗೆ ಹೊರಡಿಸಿರುವ ಆದೇಶದಲ್ಲಿ ಗ್ರಾಹಕರಿಗೆ ವಿದ್ಯುತ್ ಪೂರೈಸಲು ನೀಡಲಾಗಿದ್ದ ಗರಿಷ್ಠ ಸಮಯವನ್ನು ಏಳರಿಂದ ಮೂರು ದಿನಗಳಿಗೆ ಕಡಿತಗೊಳಿಸಿದೆ. ತಮ್ಮ ಕಟ್ಟಡಗಳಿಗೆ ವಿದ್ಯುತ್ ಪಡೆಯಲು ಸವಾಲುಗಳನ್ನು ಎದುರಿಸುತ್ತಿದ್ದ ಹಲವಾರು ಗ್ರಾಹಕರಿಗೆ ಇದು ದೊಡ್ಡ ಪರಿಹಾರ ನೀಡಿದೆ.

KERC reduced maximum time to provide new electricity connection to consumers from 7 days to 3

ಈ ಆದೇಶವು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳು, ಕಾರ್ಯಕ್ಷಮತೆಯ ಗುಣಮಟ್ಟ (SoP) ಮತ್ತು ಸಂಬಂಧಿತ ವಿಷಯಗಳು) ನಿಯಮಗಳು, 2022ಕ್ಕೆ ಬದಲಾವಣೆ ಮಾಡಿ ಹೊರಡಿಸಲಾಗಿದೆ. ಕಾಯ್ದೆಗೆ ತಿದ್ದುಪಡಿಗಳನ್ನು ಸೂಚಿಸಿ, ಗ್ರಾಹಕರಿಗೆ ಉಪಯೋಗ ನೀಡುತ್ತದೆ.

ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುವ ಕಂಪನಿಗಳು (ಎಸ್ಕಾಮ್‌ಗಳು) ಮೆಟ್ರೋ ನಗರಗಳಲ್ಲಿ ಅರ್ಜಿಯನ್ನು ಸ್ವೀಕರಿಸಿದ ಮೂರು ದಿನಗಳಲ್ಲಿ ಸಂಪರ್ಕ ನೀಡಬೇಕಿದೆ. ಹಾಗೆಯೇ, ಇತರ ಪುರಸಭೆಯ ಪ್ರದೇಶಗಳಲ್ಲಿ ಏಳು ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 15 ದಿನಗಳಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

"ಇದಲ್ಲದೆ, ವಿದ್ಯುತ್ ಸರಬರಾಜಿಗೆ ವಿತರಣಾ ಮುಖ್ಯ ವಿಸ್ತರಣೆ ಅಥವಾ ಹೊಸ ಸಬ್‌ಸ್ಟೇಷನ್‌ಗಳ ಕಾರ್ಯಾರಂಭದ ಅಗತ್ಯವಿದ್ದರೆ, ವಿತರಣಾ ಪರವಾನಗಿದಾರರು ಅಂತಹ ಸ್ಥಳಗಳಲ್ಲಿ 90 ದಿನಗಳನ್ನು ಮೀರದೆ ಅವಧಿಯೊಳಗೆ ಅಂತಹ ವಿಸ್ತರಣೆ ಅಥವಾ ಕಾರ್ಯಾರಂಭ ಮಾಡಬೇಕು. ನಂತರ ತಕ್ಷಣವೇ ವಿದ್ಯುತ್ ಸರಬರಾಜು ಮಾಡುತ್ತಾರೆ" ಎಂದು ಆದೇಶದಲ್ಲಿ ಸೂಚಿಸಿದೆ.

KERC reduced maximum time to provide new electricity connection to consumers from 7 days to 3

ವಿದ್ಯುತ್ ಸರಬರಾಜನ್ನು ಒದಗಿಸುವ ಗರಿಷ್ಠ ಅವಧಿಯ ಕಡಿತವನ್ನು ವಿದ್ಯುತ್ ಸಚಿವಾಲಯದ ನಿರ್ದೇಶನದ ಮೇರೆಗೆ ಮಾಡಲಾಗಿದೆ. ಈ ನಿರ್ಧಾರವು ಫೆಬ್ರವರಿ 22, 2024 ರಂದು ಹೊರಡಿಸಲಾದ ಅಧಿಸೂಚನೆಯನ್ನು ಅನುಸರಿಸಿ, ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020 ಕಾಯ್ದೆಗೆ ತಿದ್ದುಪಡಿ ಮಾಡಿದೆ. ಇದರ ಅನ್ವರ ವಿದ್ಯತ್ ಸಂಪರ್ಕ ಕಲ್ಪಿಸುವ ಗರಿಷ್ಠ ಅವಧಿಯನ್ನು ಮೂರು ದಿನಕ್ಕೆ ಇಳಿಸಿದೆ.

ಇನ್ನು, ಇಲ್ಲಿಯವರೆಗೆ, ಕೆಇಆರ್‌ಸಿ ನಿಯಮಗಳು, ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳು, ಕಾರ್ಯಕ್ಷಮತೆಯ ಗುಣಮಟ್ಟ ಮತ್ತು ಸಂಬಂಧಿತ ವಿಷಯಗಳ ನಿಯಮಗಳು, 2022ರ ಪ್ರಕಾರ ಮೆಟ್ರೋ ನಗರಗಳಲ್ಲಿ ಏಳು ದಿನಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಸೂಚಿಸಿತ್ತು.

ಇನ್ನುಳಿದ ಪುರಸಭೆ ವ್ಯಾಪ್ತಿಯಲ್ಲಿ 15 ದಿನ, ಗ್ರಾಮೀಣ ಪ್ರದೇಶದಲ್ಲಿ 30 ದಿನಗಳ ಒಳಗೆ ವಿದ್ಯುತ್ ಪೂರೈಕೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಕೇಂದ್ರ ಸರ್ಕಾರ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಇದು ವಿದ್ಯುತದ ಸಂಪರ್ಕ ಪಡೆಯುವ ಹಲವು ಗ್ರಾಹಕರಿಗೆ ಉಪಯೋಗವಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+