ಕೇರಳ ವಿಧಾನಸಭೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ

Written By:
Subscribe to Oneindia Kannada

ಕಾಸರಗೋಡು, ಜೂನ್ 03: ಕೇರಳ ಶಾಸನ ಸಭೆಯಲ್ಲಿ ಮೊಳಗಿದ ಕನ್ನಡ ಡಿಂಡಿಮ. ಹೌದು,,, ಆಶ್ಚರ್ಯವಾದರೂ ಸತ್ಯ. ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಜೈ ಕನ್ನಡಾಂಬೆ ಎಂದಿದ್ದಾರೆ.

ಮಂಗಳೂರಿನಿಂದ ಕೇವಲ 26 ಕಿಮೀ ದೂರದ ಮಂಜೇಶ್ವರದಿಂದ ಕೇರಳ ವಿಧಾನಸಭೆಗೆ ಆಯ್ಕೆಯಾಗಿರುವ ಪಿ.ಬಿ ಅಬ್ದುಲ್ ರಜಾಕ್ ಕನ್ನಡದಲ್ಲಿ ಪ್ರಮಾಣ ತೆಗೆದುಕೊಂಡರು.[ಭಾಷೆ ಮರೆತ ಬಿಎಂಟಿಸಿ: ಸರ್ಕಾರಕ್ಕೆ ಹನುಮಂತಯ್ಯ ಪತ್ರ]

kannada

ಮಂಜೇಶ್ವರ ಕ್ಷೇತ್ರದಲ್ಲಿ ಶೇ. 55 ರಷ್ಟು ಕನ್ನಡಿಗರಿದ್ದಾರೆ. ಮುಸ್ಲಿಂ ಲೀಗ್ ನಿಂದ ಆಯ್ಕೆಯಾಗಿರುವ ರಜಾಕ್ ಕನ್ನಡದ ಪರ ಹೋರಾಟ ಮಾಡಿಕೊಂಡೆ ಬಂದಿದ್ದಾರೆ. ಮಂಜೇಶ್ವರದಲ್ಲಿ ಕೊಂಕಣಿ, ಉರ್ದು, ಕನ್ನಡ, ಮಲಯಾಳಂ, ತುಳು, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಚಾಲ್ತಿಯಲ್ಲಿದೆ.[PMO ವೆಬ್ ಸೈಟ್ ನಲ್ಲಿ ಕನ್ನಡ ಎಲ್ಲಿ? ಅರ್ಜಿಗೆ ಸಹಿ ಹಾಕಿ]

ರಜಾಕ್ ವಿರುದ್ಧ ಬಿಜೆಪಿಯ ಕೆ ಸುರೇಂದ್ರ್ ಕೇವಲ 89 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು. ಈ ಹಿಂದೆ ಮಂಜೇಶ್ವರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲ ಸಹ ಕನ್ನಡದಲ್ಲೇ ಪ್ರಮಾಣ ತೆಗೆದುಕೊಂಡಿದ್ದನ್ನು ಇಲ್ಲಿ ಉಲ್ಲೇಖ ಮಾಡಬಹುದು.

ಕರ್ನಾಟಕ ವಿಧಾನಸಭೆಯಲ್ಲಿ ಖಾನಾಪುರ ಶಾಸಕ ಚಂದ್ರಕಾಂತ್ ಪಾಟೀಲ್ ಮತ್ತು ಬೆಳಗಾವಿ ದಕ್ಷಿಣ ಶಾಸಕ ಸಂಭಾಜಿ ಪಾಟೀಲ್ ಮರಾಠಿಯಲ್ಲಿ ಪ್ರಮಾಣ ತೆಗೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kasaragod: MLA from Manjeshwaram PB Abdul Razzak took oath in Kannada. Manjeshwaram is about 26 km from Mangaluru and a coastal town in Kasargod district of Kerala. Out of the total population, 55 per cent comprises Kannadigas. Forms in government offices are available in Kannada and Malayalam.
Please Wait while comments are loading...