Get Updates
Get notified of breaking news, exclusive insights, and must-see stories!

ಕೋಮು ಗಲಭೆಯಲ್ಲಿ ಕೇರಳ ನಿಷೇಧಿತ ಸಂಘಟನೆಗಳ ಕೈವಾಡ, ಒತ್ತಡದಲ್ಲಿ ಪೊಲೀಸರು: ಆರ್‌ ಅಶೋಕ್ ಹೇಳಿದ್ದೇನು

ಬೆಂಗಳೂರು, ಸೆಪ್ಟಂಬರ್ 15: ರಾಜಕೀಯ ಸ್ವರೂಪ ಪಡೆದುಕೊಂಡಿರುವ ಮಂಡ್ಯ ಜಿಲ್ಲೆಯ ನಾಗಮಂಗಲ ಕೋಮು ಘರ್ಷಣೆಗೆ ಕೇರಳ ನಂಟಿದೆ. ಕೇರಳದ ನಿಷೇಧಿತ ಸಂಘಟನೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಕೈವಾಡ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ. ಧುರುಳರು ದೃಷ್ಕೃತ್ಯದ ಸಲುವಾಗಿ ಹೀಗೆಲ್ಲ ಮಾಡಿದ್ದಾರೆ ಎಂದು ಘಟನೆ ವಿವರವನ್ನು ಅವರು ಬಿಚ್ಚಿಟ್ಟಿದ್ದಾರೆ.

ಘಟನೆ ಕುರಿತು ರಾಜ್ಯ ಸರ್ಕಾರ ನಡೆಯನ್ನು ಟೀಕಿಸಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಎಫ್‌ಐಆರ್ ಪೋಟೋ ಹಂಚಿಕೊಂಡಿದ್ದಾರೆ. ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ PFI, KFD ಅಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದರು.

Kerala Banned Organisations link with for the Mandya Communal Riots R Ashok Doubt

ನಾಗಮಂಗಲದಲ್ಲಿ ಈ ದುರುಳರು ಗಲಭೆ ನಡೆಸುವ ಮೊದಲೇ 150 ಮಾಸ್ಕ್ ಖರೀದಿಸಿದ್ದಾರೆ. ಯಾರಿಗೂ ಗುರುತು ಸಿಗದಂತೆ ಮಾಸ್ಕ್ ಹಾಕಿಕೊಂಡು ಸಿಸಿಟಿವಿಗಳನ್ನ ನಾಶ ಮಾಡಿದ್ದಾರೆ. ಈ ದುಷ್ಕೃತ್ಯ ಸಂಪೂರ್ಣ ಪ್ರಾಯೋಜಿತ ಮತ್ತು ಪೂರ್ವನಿಯೋಜಿವಾಗಿದೆ ಎಂಬುದು ತಿಳಿಯುತ್ತದೆ. ಈ ಬಗ್ಗೆ ಸ್ವತಃ ಸ್ಥಳೀಯರೇ ಅನುಮಾನವಾಗಿದೆ ಎಂದು ತಿಳಿಸಿದ್ದಾರೆ.

ನಿಷೇಧ ಸಂಘಟನೆಗಳ ಒತ್ತಡದಲ್ಲಿ ಪೊಲೀಸರು?

ಅಷ್ಟೇ ಅಲ್ಲದೆ ಸರ್ಕಾರ ದಾಖಲಿಸಿರುವ FIR ನಲ್ಲಿ ಮೊದಲ 23 ಆರೋಪಿಗಳು ಹಿಂದೂಗಳೇ ಆಗಿದ್ದಾರೆ. ಮುಸ್ಲಿಮರು ಮಾಡಿ ಕೃತ್ಯದಲ್ಲಿ ಹಿಂದುಗಳ ಮೇಲೆ ಗೂಬೆ ಕೂರಿಸುವಂತಾಗಿದೆ. ಪೋಲಿಸರು ನಿಷೇಧಿತ ಸಂಘಟನೆಗಳ ಒತ್ತಡದಲ್ಲಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ ಎಂದು ಪೊಲೀಸರ ವಿರುದ್ಧ ಅವರು ಕಿಡಿ ಕಾರಿದರು.

ಈ ಕೋಮುಗಲಭೆಯಲ್ಲಿ ನಿಷೇಧಿತ ಸಂಘಟನೆಗಳು ಮತ್ತು ಮತೀಯ ಮೂಲಭೂತವಾದಿಗಳ ಕೈವಾಡವಿರುವ ಸಂಶಯ ವ್ಯಕ್ತವಾಗಿದೆ. ಪೋಲಿಸರು ಈ ಪ್ರಕರಣವನ್ನು ಬೇಧಿಸುವುದು ಕಷ್ಟಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ಪ್ರಕರಣವನ್ನ NIA ಗೆ ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಸ್ಥಳೀಯರ ಪರವಾಗಿ ಒತ್ತಾಯಿಸಿದ್ದಾರೆ.

Kerala Banned Organisations link with for the Mandya Communal Riots R Ashok Doubt

ಆಡಳಿತ ಪಕ್ಷದ ನಡೆ ಖಂಡಿಸಿದ್ದ ವಿಪಕ್ಷ ನಾಯಕರು

ಸದ್ಯ ನಾಗಮಂಗಲದಲ್ಲಿ ನಡೆದ ಹಿಂಸಾಚಾರ, ಆಸ್ತಿ ಪಾಸ್ತಿ ನಷ್ಟ, ಅಲ್ಲದೇ ಗೃಹ ಸಚಿವರ ಹೇಳಿಕೆಗಳು ವ್ಯಾಪಕ ಟೀಕೆಗೆ ಗುರಿಯಾಗಿವೆ. ಸಿಎಂ ಸಿದ್ದರಾಮಯ್ಯ ತಪ್ಪು ಯಾರೇ ಮಾಡಲಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಇತ್ತ ವಿಪಕ್ಷಗಳ ನಾಯಕರು, ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಖಂಡಿಸಿದ್ದಾರೆ. ನೀವು ಬಂದ ಮೇಲೆ ತುಷ್ಟೀಕರಣ ರಾಜಕಾರಣದಿಂದ ಇದೆಲ್ಲ ಆಗಿದೆ ಎಂದು ಜರಿದಿದ್ದಾರೆ.

ಇತ್ತೀಚೆಗೆ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿಟಿ ರವಿ ಸೇರಿದಂತೆ ಇನ್ನಿತರ ಬಿಜೆಪಿ ಮುಖಂಡರು ನಾಗಮಂಗಲಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದರು. ಹಿಂದೂಗಳ ಮೇಲೆ ಪ್ರಕರಣ ದಾಖಲಿಸಿದ್ದಕ್ಕೆ ಕಮಲ ಪಡೆ ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ಸಿಎಂ ಸಿದ್ದರಾಮಯ್ಯನವರ ಮೇಲೆ ಕಂಡ ಕಾರಿತ್ತು. ಹಿಂದೂಗಳ ಮೇಲಿನ ಕೇಸ್ ರದ್ದಗೊಳಿಸದಿದ್ದರೆ ಆರ್.ಅಶೋಕ ಅವರು ಉಗ್ರ ಹೋರಾಟದ ಎಚ್ಚರಿಕೆ ಈಗಾಗಲೇ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+