• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KCET ಕೌನ್ಸೆಲಿಂಗ್ 2022: ರ್‍ಯಾಂಕ್ ವಿದ್ಯಾರ್ಥಿಗಳಿಗೆ ಮೊದಲನೇ ಸುತ್ತಿನ ಕೌನ್ಸೆಲಿಂಗ್ ನಾಳೆಯಿಂದ ಆರಂಭ

|
Google Oneindia Kannada News

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು, ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ -2022) ರ ಪರಿಷ್ಕೃತ ರ್ಯಾಂಕ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈಗ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಮೊದಲನೇ ಸುತ್ತಿನ ಕೌನ್ಸೆಲಿಂಗ್ ಪ್ರಾರಂಭಿಸುತ್ತಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಾಳೆ ಅಕ್ಟೋಬರ್ 7 ರಂದು KCET ದಾಖಲೆ ಪರಿಶೀಲನೆ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ. ದಾಖಲೆ ಪರಿಶೀಲನೆ ಪ್ರಕ್ರಿಯೆಯು ಅಕ್ಟೋಬರ್ 8 ರಂದು ಕೊನೆಗೊಳ್ಳುತ್ತದೆ. ಅಭ್ಯರ್ಥಿಗಳು KEA - cetonline ನ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲೆ ಪರಿಶೀಲನೆಯ ಕುರಿತು ಹೆಚ್ಚಿನ ವಿವರಗಳನ್ನು ಪರಿಶೀಲಿಸಬಹುದು. ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಬಹುದಾದ ಅಭ್ಯರ್ಥಿಗಳ ಹೆಸರನ್ನು ಇಂದು ಮಧ್ಯಾಹ್ನ 1 ಗಂಟೆಯ ನಂತರ ಅಧಿಕೃತ ವೆಬ್‌ಸೈಟ್‌ http://kea.kar.nic.in/ ನಲ್ಲಿ ಪ್ರಕಟಿಸಲಾಗುವುದು.

ಅರ್ಹ ಅಭ್ಯರ್ಥಿಗಳಿಗೆ ಅಕ್ಟೋಬರ್ 7 ರಿಂದ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಆರಂಭವಾಗುತ್ತಿದ್ದು, ಅಭ್ಯರ್ಥಿಗಳು ನಿಗದಿತ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ಕೆಸಿಇಟಿ 2022 ಅರ್ಜಿ ನಮೂನೆ, ಅರ್ಜಿ ಶುಲ್ಕ ಪಾವತಿ ಪ್ರತಿ, ಕೆಸಿಇಟಿ 2022 ಪ್ರವೇಶ ಪತ್ರ, ಎಸ್‌ಎಸ್‌ಎಲ್‌ಸಿ ಅಥವಾ 10 ನೇ ತರಗತಿಯ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಥವಾ 12 ನೇ ತರಗತಿಯ ಅಂಕಪಟ್ಟಿ ಮತ್ತು ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.


ಅಧಿಕೃತ ಕರಡು ಪ್ರಕಾರ, ಅನರ್ಹ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆಗೆ ಹಾಜರಾಗಲು ಈ ದಾಖಲೆಗಳು ಅವಶ್ಯಕ-

ದಾಖಲಾತಿ ಪರಿಶೀಲನೆಗೆ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆಗಳು

ಸಿಇಟಿ-2022ಕ್ಕೆ ಭರ್ತಿ ಮಾಡಿ ಅಂತಮವಾಗಿ ಸಲ್ಲಿಸಿರುವ ಅರ್ಜಿ ಪ್ರತಿ.

ಸಿಇಟಿ-2022ರ ಮೂಲ ಪ್ರವೇಶ ಪತ್ರ.

ಎಸ್‌ಎಸ್‌ಎಲ್‌ಸಿ ಅಥವಾ 10 ನೇ ತರಗತಿ ಅಂಕಪಟ್ಟಿ.

ದ್ವಿತೀಯ ಪಿಯುಸಿ ಅಥವಾ 12 ನೇ ತರಗತಿ ಅಂಕಪಟ್ಟಿ.

1 ರಿಂದ 12ನೇ ತರಗತಿಯವರೆಗೆ ಅಧ್ಯಯನ ಮಾಡಿದ ಏಳು ವರ್ಷದ ವ್ಯಾಸಂಗ ಪ್ರಮಾಣ ಪತ್ರ.

ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ- 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಲ್ಲಿ.

ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ- 1 ರಿಂದ 10 ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದಲ್ಲಿ.

ಚಾಲ್ತಿಯಲ್ಲಿರು ಜಾತಿ ಪ್ರಮಾಣ ಪತ್ರ.

ಚಾಲ್ತಿಯಲ್ಲಿರು ಆದಾಯ ಪ್ರಮಾಣ ಪತ್ರ.

371 (ಜೆ) ಹೈದರಾಬಾದ್- ಕರ್ನಾಟಕ ಪ್ರದೇಶ ಮೀಸಲಾತಿ ಪ್ರಮಾಣ ಪತ್ರ.

ಸಂಖ್ಯಾಧಿಕ ಕೋಟಾ ( supernumerary Quota).

ದಾಖಲಾತಿ ಪರಿಶೀಲನೆ ದಿನಾಂಕ - 07-10-2022 ರಿಂದ 08-10-2022 ರವರೆಗೆ.

ಕೌನ್ಸಿಲಿಂಗ್ ಪರಿಶೀಲನೆ ಸ್ಲಿಪ್ ಬಿಡುಗಡೆ ದಿನಾಂಕ - 07-10-202 ರಿಂದ 10-10-2022 ರವರೆಗೆ.

ಸೀಟ್‌ ಮ್ಯಾಟ್ರಿಕ್ಸ್ ಮತ್ತು ಶುಲ್ಕದ ವಿವರಗಳ ಪ್ರಕಟಣೆ ದಿನಾಂಕ - 07-10-2022.

ಇಚ್ಛೆ/ ಆಯ್ಕೆಗಳನ್ನು ದಾಖಲಿಸುವುದು (ಆದ್ಯತಾ ಕ್ರಮದಲ್ಲಿ) - 07-10-202 ರಿಂದ11-10-2022 ರವರೆಗೆ.

ಅಣುಕು ಸೀಟು ಹಂಚಿಕೆಯ ಫಲಿತಾಂಶ ದಿನಾಂಕ - 13-10-2022.

ಆಯ್ಕೆಗಳನ್ನು ಬದಲಿಸಲು ಅವಕಾಶ - 13-10-2022 ರಿಂದ 15-10-2022 ರವರೆಗೆ.

ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ದಿನಾಂಕ - 17-10-2022.

ಸೀಟು ಹಂಚಿಕೆಯಾದ ಅಭ್ಯರ್ಥಿಗಳು choice ಅನ್ನು ಆಯ್ಕೆ ಮಾಡಲು - 18-10-2022 ರಿಂದ 20-10-2022 ರವರೆಗೆ.

ಶುಲ್ಕ ಪಾವತಿ, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳುವುದು - 19-10-2022 ರಿಂದ 21-10-2022 ರವರೆಗೆ.

choice - 1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಕೊನೆಯ ದಿನಾಂಕ - 22-10-2022.

English summary
The Karnataka Examinations Authority has released the revised rank list of the Karnataka Common Entrance Test (KCET-2022) and now the first round of counseling for the ranked students will be held tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X