ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೀಕರ್ ಆಗಿ ಕೆ.ಬಿ.ಕೋಳಿವಾಡ ಅವಿರೋಧ ಆಯ್ಕೆ

|
Google Oneindia Kannada News

ಬೆಂಗಳೂರು, ಜುಲೈ 05 : ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ರಾಣೆಬೆನ್ನೂರು ಶಾಸಕ ಕೆ.ಬಿ.ಕೋಳಿವಾಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಸಿದ್ದರಾಮಯ್ಯ ಅವರ ಸಂಪುಟ ಸೇರಿರುವುದರಿಂದ ಸ್ಪೀಕರ್ ಸ್ಥಾನ ತೆರವಾಗಿತ್ತು.

ಸೋಮವಾರ ಕೆ.ಬಿ.ಕೋಳಿವಾಡ ಅವರು 'ವಿಧಾನಸಭಾಧ್ಯಕ್ಷರ ಹುದ್ದೆಯನ್ನು ವಹಿಸಿಕೊಳ್ಳಲು ಸಿದ್ಧನಿದ್ದೇನೆ' ಎಂಬ ಒಪ್ಪಿಗೆ ಪತ್ರವನ್ನು ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಿಗೆ ನೀಡಿದ್ದರು. ಈ ಉಮೇದುವಾರಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಅನುಮೋದಕರಾಗಿ ಸಹಿ ಹಾಕಿದ್ದರು.[ಜುಲೈ 5ರಂದು ಸ್ಪೀಕರ್ ಆಯ್ಕೆ]

Koliwad

ಸ್ಪೀಕರ್ ಸ್ಥಾನಕ್ಕೆ ಒಂದೇ ನಾಮಪತ್ರ ಸಲ್ಲಿಕೆ ಆಗಿರುವುದರಿಂದ ಕೋಳಿವಾಡ ಅವರು ಅವಿರೋಧವಾಗಿ ಆಯ್ಕೆಯಾದರು. ಮಂಗಳವಾರ ವಿಧಾನಸಭೆ ಕಲಾಪ ಆರಂಭವಾದ ತಕ್ಷಣ ಕೋಳಿವಾಡ ಅವರ ಆಯ್ಕೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಾಯಿತು. [ಬಗೆಹರಿಯಿತು ಸ್ಪೀಕರ್ ಹುದ್ದೆಯ ಕಗ್ಗಂಟು!]

ಕೆ.ಬಿ.ಕೋಳಿವಾಡ ಅವರು ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಕಾಗೋಡು ತಿಮ್ಮಪ್ಪ ಅವರು ಸಂಪುಟ ಸೇರಿದ ಬಳಿಕ ತೆರವಾದ ಸ್ಪೀಕರ್ ಸ್ಥಾನವನ್ನು ವಹಿಸಿಕೊಳ್ಳುವಂತೆ ಸಿದ್ದರಾಮಯ್ಯ ಅವರು ಕೋಳಿವಾಡ ಅವರ ಮನವೊಲಿಸಿದ್ದರು.

ಸದನದಲ್ಲಿ ಈಗ ನಾಲ್ವರು ಸ್ಪೀಕರ್ : ವಿಧಾನಸಭೆಯಲ್ಲಿ ಈಗ ನಾಲ್ವರು ಸ್ಪೀಕರ್‌ಗಳಿದ್ದಾರೆ. ಹಿಂದೆ ರಮೇಶ್‌ ಕುಮಾರ್, ಕಾಗೋಡು ತಿಮ್ಮಪ್ಪ, ಜಗದೀಶ್ ಶೆಟ್ಟರ್ ಮತ್ತು ಕೆ.ಜಿ.ಬೋಪಯ್ಯ ಅವರು ಸ್ಪೀಕರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಈಗ ಎಲ್ಲರೂ ವಿಧಾನಸಭೆಯ ಸದಸ್ಯರಾಗಿದ್ದಾರೆ.

KB Koliwad
English summary
Senior Congress MLA (Ranebennur) K.B.Koliwad become the speaker of Karnataka Legislative Assembly. Post vacant after Kagodu Thimmappa joined for Chief Minister Siddaramaiah cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X