ಕೋಮು ಹಿಂಸಾಚಾರದಲ್ಲಿ ದೇಶಕ್ಕೆ ಕರ್ನಾಟಕ ನಂಬರ್ 2!

Subscribe to Oneindia Kannada

ನವದೆಹಲಿ, ಆಗಸ್ಟ್ 9: 2017ನೇ ವರ್ಷದ ಮೊದಲ ಐದು ತಿಂಗಳಲ್ಲಿ ಉತ್ತರ ಪ್ರದೇಶ ಬಿಟ್ಟರೆ ಕರ್ನಾಟಕದಲ್ಲೇ ಅತೀ ಹೆಚ್ಚಿನ ಕೋಮು ಹಿಂಸಾಚಾರ ಘಟನೆಗಳು ನಡೆದಿವೆ.

ಮೊದಲ 5 ತಿಂಗಳಲ್ಲಿ ದೇಶದಲ್ಲಿ 296 ಕೋಮು ಗಲಭೆಗಳು ನಡೆದಿವೆ. ಈ ಕೋಮು ಸಂಘರ್ಷಕ್ಕೆ 44 ಜನರು ಬಲಿಯಾಗಿದ್ದರೆ, 892 ಮಂದಿ ಗಾಯಗೊಂಡಿದ್ದಾರೆ.

Karnataka witnesses 36 communal incidents in 2017, 2nd highest so far

ಇದರಲ್ಲಿ ಮೊದಲ ಸ್ಥಾನದಲ್ಲಿರುವ ಉತ್ತರ ಪ‍್ರದೇಶದಲ್ಲಿ 60 ಕೋಮು ಹಿಂಸಾಚಾರಗಳು ನಡೆದಿದ್ದು 16 ಜನರು ಮೃತಪಟ್ಟಿದ್ದಾರೆ; 151 ಮಂದಿ ಗಾಯಗೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 36 ಕೋಮು ಸಂಘರ್ಷಗಳು ನಡೆದಿದ್ದು, 3 ಜನರು ಮೃತಪಟ್ಟು, 93 ಮಂದಿ ಗಾಯಗೊಂಡಿದ್ದಾರೆ.

ಇನ್ನು ಮಧ್ಯ ಪ್ರದೇಶದಲ್ಲಿ 29, ರಾಜಸ್ಥಾನದಲ್ಲಿ 27, ಪಶ್ಚಿಮ ಬಂಗಾಳದಲ್ಲಿ 26, ಬಿಹಾರದಲ್ಲಿ 23 ಮತ್ತು ಗುಜರಾತ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ 20 ಕೋಮು ಗಲಭೆಗಳು ಇದೇ 5 ತಿಂಗಳ ಅವಧಿಯಲ್ಲಿ ನಡೆದಿವೆ.

ಈ ಹಿಂದಿನ ವರ್ಷಗಳ ಅಂಕಿ ಅಂಶಗಳನ್ನು ನೋಡುವುದಾದರೆ,

2014

ಕೋಮು ಗಲಭೆಗಳು-644

ಮೃತಪಟ್ಟವರು - 95

ಗಾಯಗೊಂಡವರು - 1,921

ಉತ್ತರ ಪ್ರದೇಶ- 133

ಮಹಾರಾಷ್ಟ್ರ- 97

ಗುಜರಾತ್‌-74

ಕರ್ನಾಟಕ-73

2015

ಕೋಮು ಗಲಭೆಗಳು-751

ಮೃತಪಟ್ಟವರು - 97

ಗಾಯಗೊಂಡವರು - 2,624

ಉತ್ತರ ಪ್ರದೇಶ- 155

ಕರ್ನಾಟಕ-105

2016

ಕೋಮು ಗಲಭೆಗಳು-703

ಮೃತಪಟ್ಟವರು - 86

ಗಾಯಗೊಂಡವರು - 2,321

ಉತ್ತರ ಪ್ರದೇಶ- 162

ಕರ್ನಾಟಕ-101

Hebbagodi Police station attacked by angry mob, Bengaluru riot over provident fund Norms

ಈ ಮಾಹಿತಿಯನ್ನು ಕೇಂದ್ರ ಗೃಹ ಇಲಾಖೆ ಮಂಗಳವಾರ ಲೋಕಸಭೆಯಲ್ಲಿ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The current year has seen 296 incidents of communal violence so far, with 44 deaths, according to data released by the home ministry in Parliament. Uttar Pradesh has seen the highest number of incidents with 60, while Karnataka with 36 incidents holds the second position.
Please Wait while comments are loading...