Karnataka Weather: ಮಳೆ ಮುನ್ಸೂಚನೆ ಇದ್ಯಾ?-ಇಲ್ಲಿದೆ ಜನವರಿ 28ರ ವರದಿ
ಕರ್ನಾಟಕ, ಜನವರಿ, 28: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉಷ್ಣಾಂಶ ಪ್ರಮಾಣದಲ್ಲಿ ಇಳಿಕೆಯಾಗುತ್ತಿದ್ದು, ಚಳಿಯ ಪ್ರಮಾಣ ಏರಿಕೆಯಾಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣವೇ ಮುಂದುವರೆಯುತ್ತಿದೆ. ಇನ್ನು ಇಂದು (ಜನರಿ 28) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ವಾತಾವರಣ ಹೇಗಿರಲಿದೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಇಂದು ಮಧ್ಯಾಹ್ನದ ವೇಳಗೆ ಬಿಸಿಲು ಹಾಗೂ ಒಣಹವೆಯ ವಾತಾವರಣ ಇರಲಿದೆ. ಹಾಗೆಯೇ ಕೆಲವೆಡೆ ಮೋಡ ಕವಿದ ವಾತಾವರಣ ಇರಲಿದೆ. ಬೆಳಗ್ಗೆ 10 ಗಂಟೆಯಾದರೂ ಚಳಿಯ ವಾತಾವರಣ ಮುಂದುವರೆಯಲಿದೆ. ಹಾಗೆಯೆ ಸಂಜೆಯು ಕೂಎ ಶೀತ ಗಾಳಿ ಚಳಿಯ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಇದೆ.

ಚಿಕ್ಕಮಗಳೂರು, ಮೈಸೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳ ಕಡೆಗೆ ಚಳಿಯ ಪ್ರಮಾಣ ಹೆಚ್ಚಿರಲಿದೆ. ಇನ್ನು ಯಾವ್ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಉಷ್ಣಾಂಶ ದಾಖಲು ಆಗಲಿದೆ ಎನ್ನುವ ಮಾಹಿತಿಯನ್ನು ನೋಡುವುದಾದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 28 ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು ಆಗಲಿದೆ, ಮಂಗಳೂರು ಗರಿಷ್ಠ 32 ಕನಿಷ್ಠ 23, ಶಿವಮೊಗ್ಗ ಗರಿಷ್ಠ 31 ಕನಿಷ್ಠ 18, ಬೆಳಗಾವಿ ಗರಿಷ್ಠ 31 ಕನಿಷ್ಠ 17, ಮೈಸೂರಿನಲ್ಲಿ ಗರಿಷ್ಠ 31 ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ಮಂಡ್ಯ ಗರಿಷ್ಠ 32 ಕನಿಷ್ಠ 19, ಮಡಿಕೇರಿ ಗರಿಷ್ಠ 30 ಕನಿಷ್ಠ 16, ರಾಮನಗರ ಗರಿಷ್ಠ 31 ಕನಿಷ್ಠ 18, ಹಾಸನ ಗರಿಷ್ಠ 28 ಕನಿಷ್ಠ 17, ಚಾಮರಾಜನಗರ ಗರಿಷ್ಠ 32 ಕನೊಷ್ಠ 17, ಚಿಕ್ಕಬಳ್ಳಾಪುರ ಗರಿಷ್ಠ 27 ಕನಿಷ್ಠ 17, ಕೋಲಾರ ಗರಿಷ್ಠ 28 ಕನಿಷ್ಠ 17, ತುಮಕೂರು ಗರಿಷ್ಠ 29 ಕನಿಷ್ಠ 17, ಉಡುಪಿ ಗರಿಷ್ಠ 31 ಕನಿಷ್ಠ 22, ಕಾರವಾರ ಗರಿಷ್ಠ 32 ಕನಿಷ್ಠ 21, ಚಿಕ್ಕಮಗಳೂರು ಗರಿಷ್ಠ 31 ಕನಿಷ್ಠ 18, ದಾವಣಗೆರೆಯಲ್ಲಿ ಗರಿಷ್ಠ 31 ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ.
ಹುಬ್ಬಳ್ಳಿ ಗರಿಷ್ಠ 31 ಕನಿಷ್ಠ 18, ಚಿತ್ರದುರ್ಗ ಗರಿಷ್ಠ 29 ಕನಿಷ್ಠ 18, ಹಾವೇರಿ ಗರುಷ್ಠ 32 ಕನಿಷ್ಠ 18, ಬಳ್ಳಾರಿ ಗರಿಷ್ಠ 32 ಕನಿಷ್ಠ 19, ಗದಗ ಗರಿಷ್ಠ 31 ಕನಿಷ್ಠ 19,
ಕೊಪ್ಪಳ ಗರಿಷ್ಠ 32 ಕನಿಷ್ಠ 19, ರಾಯಚೂರು ಗರಿಷ್ಠ 32 ಕನಿಷ್ಠ 20, ಯಾದಗಿರಿ ಗರಿಷ್ಠ 32 ಕನಿಷ್ಠ 19, ವಿಜಯಪುರ ಗರಿಷ್ಠ 32 ಕನಿಷ್ಠ 19, ಬೀದರ್ ಗರಿಷ್ಠ 30 ಕನಿಷ್ಠ 18, ಕಲಬುರಗಿ ಗರಿಷ್ಠ 32 ಕನಿಷ್ಠ 18, ಬಾಗಲಕೋಟೆಯಲ್ಲಿ ಗರಿಷ್ಠ 32 ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎನ್ನುವ ಮಾಹಿತಿ ನೀಡಿದೆ.












Click it and Unblock the Notifications