Karnataka Weather: ಜಿಲ್ಲಾವಾರು ಇಂದು ದಾಖಲಾಗುವ ಮಳೆ ಮತ್ತು ತಾಪಮಾನದ ವಿವರ ಇಲ್ಲಿದೆ

ಕರ್ನಟಕ, ಮೇ, 24: ಈಗಾಗಲೇ ರಾಜ್ಯದಲ್ಲಿ ವರುಣದೇವ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಇದರಿಂದ ಸಾಕಷ್ಟು ಅನಾಹುತಗಳು ಕೂಡ ಸಂಭವಿಸಿವೆ. ಒಂದೆಡೆ ಕೆಲವರರು ಮನೆ, ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದರೆ, ಮತ್ತೊಂದೆಡೆ ಕೃಷಿ ಭೂಮಿಗಳು ಜಲಾವೃತವಾಗಿ ರೈತರು ಆತಂಕ್ಕೆ ಒಳಗಾಗಿದ್ದಾರೆ. ಮತ್ತೇ ಇಂದು ಕೂಡ ವರುಣನ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದಾರೆ ರಾಜ್ಯದ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಮತ್ತು ತಾಪಮಾನ ದಾಖಲಾಗಲಿದೆ ಎಂದು ಇಲ್ಲಿ ತಿಳಿಯಿರಿ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ವಾತಾವರಣ ಇದ್ದು, ಸಂಜೆ ನಂತರ ಮಳೆರಾಯ ಅಬ್ಬರಿಸಿದ್ದಾನೆ. ಇದರಿಂದ ಬೆಂಗಳೂರಿನ ಹಲವೆಡೆ ಜನರ ಜೀವನ ನೀರಲ್ಲಿ ಮುಳುಗಿದೆ. ಎಷ್ಟೋ ಕುಟುಂಬಗಳು ಮನೆ, ಮಠಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿವೆ. ಮತ್ತೊಂದೆಡೆ ವಾಹನ ಸವಾರರು ಕೆರೆಯಂತಾದ ರಸ್ತೆಗಳೆಲ್ಲಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

Karnataka Weather: Karnatakas District wise rainfall and temperature record details on may 24

ಹಾಗೆಯೆ ನಗರದಲ್ಲಿ ಇಂದು ಕೂಡ ಮಳೆ ಮುಂದುವರೆಯಲಿದ್ದು, ಈ ಹಿನ್ನೆಲೆ ಜನರಿಗೆ ಎಚ್ಚರಿಕೆ ಸಂದೇಶಗಳನ್ನು ಕೂಡ ರವಾನೆ ಮಾಡಲಾಗಿದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆ ಜೋರಾಗಿದೆ. ಅಲ್ಲದೆ ಇಂದಿನಿಂದ ಮುಂದಿನ 3 ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಮಾಹಿತಿ ನೀಡಿದೆ.

ಅದರಲ್ಲೂ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ಅಬ್ಬರದ ಮಳೆ ಆಗಲಿದೆ. ಮತ್ತು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವರುಣ ಆರ್ಭಟ ಮುಂದುವರೆಸಲಿದ್ದಾನೆ. ಮತ್ತೊಂದೆಡೆ ಗಾಳಿಯ ವೇಗ ಕೂಡ ಹೆಚ್ಚಾಗಲಿದ್ದು, ಗಂಟೆಗೆ 40-50 ಕಿಲೋ ಮೀಟರ್‌ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇಂದು ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ. ಇನ್ನು ಮಂಜಿನ ನಗರಿ ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲು ಆಗಲಿದೆ ಎನ್ನುವ ಮಾಹತಿಯನ್ನು ನೀಡಿದೆ.

ತಾಪಮಾನ ದಾಖಲೆಯ ವಿವರ

1. ಬೆಂಗಳೂರು: 31-22
2. ಮಂಗಳೂರು: 32-26
3. ಶಿವಮೊಗ್ಗ: 34-23
4. ಬೆಳಗಾವಿ: 34-22
5. ಮೈಸೂರು: 33-22
6. ಮಂಡ್ಯ: 33-23
7. ಮಡಿಕೇರಿ: 26-18
8. ರಾಮನಗರ: 33-23
9. ಹಾಸನ: 30-21
10. ಚಾಮರಾಜನಗರ: 32-22
11. ಕೋಲಾರ: 33-23
12. ಚಿಕ್ಕಬಳ್ಳಾಪುರ: 31-21
13. ತುಮಕೂರು: 33-22
14. ಉಡುಪಿ: 33-27
15. ಕಾರವಾರ: 34-28
16. ಚಿಕ್ಕಮಗಳೂರು: 29-20
17. ದಾವಣಗೆರೆ: 36-23
18. ಹುಬ್ಬಳ್ಳಿ: 35-23
19. ಚಿತ್ರದುರ್ಗ: 35-23
20. ಹಾವೇರಿ: 36-23
21. ಬಳ್ಳಾರಿ: 39-25
22. ಗದಗ: 37-23
23. ಕೊಪ್ಪಳ: 38-24
24. ರಾಯಚೂರು: 40-27
25. ಯಾದಗಿರಿ: 41-28
26. ವಿಜಯಪುರ: 31-22
27. ಬೀದರ್: 38-27
28. ಬಾಗಲಕೋಟೆ: 39-24
29. ಕಲಬುರಗಿ: 40-28

ಹೀಗೆ ಜಿಲ್ಲಾವರು ಇಂದು ದಾಖಲಾಗುವ ತಾಪಮಾನ ಮತ್ತು ಮಳೆಯ ವಿವರವನ್ನು ನೀಡಲಾಗಿದೆ. ಹಾಗೆಯೆ ಇಂದು ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ಸಹ ನೀಡಿದೆ. ಆದ್ದರಿಂದ ಜನರು ಮನೆಯಿಂದ ಬರುವ ಮುನ್ನ ಸುರಕ್ಷತೆ ದೃಷ್ಟಿಯಿಂದ ಹವಾಮಾನ ಇಲಾಖೆ ನೀಡಿರುವ ಸೂಚನೆಗಳನ್ನು ನೋಡುವುದು ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+