ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಕನಸಿನ 'ಬೇಟಿ ಬಚಾವೋ' ಯೋಜನೆಗೆ ವಿಜಯಪುರ

|
Google Oneindia Kannada News

ವಿಜಯಪುರ, ಡಿಸೆಂಬರ್, 15: ನರೇಂದ್ರ ಮೋದಿ ಕನಸಿನ 'ಮಗಳನ್ನು ಉಳಿಸಿ, ಮಗಳನ್ನು ಕಲಿಸಿ' ಯೋಜನೆಗೆ ಕರ್ನಾಟಕದ ವಿಜಯಪುರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ದೇಶದ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು ವಿಜಯಪುರವೂ ಅದರಲ್ಲಿ ಸೇರಿದೆ.

ಮಕ್ಕಳ ಲಿಂಗಾನುಪಾತದ ಹಿನ್ನೆಲೆಯಲ್ಲಿ ಜಿಲ್ಲೆಗಳನ್ನು ಮೂರು ವಿಧವಾಗಿ ವರ್ಗೀಕರಿಸಲಾಗಿದೆ. ಕಡಿಮೆ ಲಿಂಗಾನುಪಾತ, ಸಾಧಾರಣ ಲಿಂಗಾನುಪಾತ ಮತ್ತು ಅತಿ ಕಡಿಮೆ ಲಿಂಗಾನುಪಾತ ಎಂಬ ಆಧಾರದಲ್ಲಿ ಲೆಕ್ಕಕ್ಕೆ ತೆಗೆದುಕೊಂಡು ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು. ವಿಜಯಪುರ 3ನೇ ವಿಭಾಗದಲ್ಲಿ ಅಂದರೆ ಅತಿ ಕಡಿಮೆ ಲಿಂಗಾನುಪಾತದಲ್ಲಿ ಬರುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್ ಟಿ ತಲ್ವಾರ್ ಮಾಹಿತಿ ನೀಡಿದ್ದಾರೆ.[ಡಿಜಿಟಲ್ ಇಂಡಿಯಾ ಎಂದರೇನು? ಉದ್ದೇಶಗಳೇನು?]

Karnataka: Vijayapura chosen for ‘Beti Bachao Beti Padhao'

2001 ಮತ್ತು 2011ರ ಜನಗಣತಿ ಆಧಾರವಾಗಿಟ್ಟುಕೊಂಡು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. 2001ರಲ್ಲಿ 1000 ಪುರುಷರಿಗೆ 928 ಮಹಿಳೆಯರಿದ್ದರು ಅದೇ 2011 ರಲ್ಲಿ 1000 ಪುರುಷರಿಗೆ 931 ಬಂದು ನಿಂತಿತು. ಅಂಥ ಯಾವ ಮಹತ್ವದ ವ್ಯತ್ಯಾಸವೂ ಕಂಡು ಬರಲಿಲ್ಲ. 2011 ರ ಅಂತ್ಯಕ್ಕೆ ರಾಜ್ಯದಲ್ಲಿ 1000 ಪುರುಷರಿಗೆ 962 ಮಹಿಳೆಯರು ಎಂಬ ಲೆಕ್ಕ ಸಿಕ್ಕಿತು. ಈ ಎಲ್ಲ ದಾಖಲೆಗಳನ್ನು ತಾಳೆ ಹಾಕಿ ವಿಜಯಪುರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.[ಕರ್ನಾಟಕದಲ್ಲಿ ಸ್ಮಾರ್ಟ್ ಸಿಟಿ ಕನಸು ಸಾಕಾರವಾಗುವುದೆ?]

ಯೋಜನೆ ಅನುಷ್ಠಾನಕ್ಕೆ ಗ್ರಾಮ ಪಂಚಾಯಿತಿಗಳ ನೆರವನ್ನು ಪಡೆದುಕೊಳ್ಳಲಾಗುವುದು. ಶಿಕ್ಷಣ, ಕಂದಾಯ, ಆರೋಗ್ಯ, ಪೊಲೀಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರವನ್ನು ಪಡೆದುಕೊಂಡು ಯೋಜನೆ ಜಾರಿ ಮಾಡಲಾಗುವುದು ಎಂದು ತಲ್ವಾರ್ ಮಾಹಿತಿ ನೀಡಿದರು.

English summary
Vijayapura has become the district in Karnataka and one among the 100 districts in the country to have been chosen for the implementation of the Centre's ‘Beti Bachao Beti Padhao' (BBBP) scheme. The ambitious scheme of the Union government and the pet project of Prime Minister Narendra Modi aims to balance child sex ratio (CSR) in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X