ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ದ್ವಿಚಕ್ರ ವಾಹನ ಸವಾರಿ ಎಲ್ಲರಿಗೂ ಇಷ್ಟವೇ. ಅದರಲ್ಲೂ ಹಿಂಬದಿಯಲ್ಲಿ ಒಬ್ಬರನ್ನ ಜತೆಯಾಗಿ ಕೂಡಿಸಿಕೊಂಡು ಬೈಕ್ ರೈಡ್ ಮಾಡುವುದು ಇನ್ನೂ ಅದರ ಮಜಾನೇ ಬೇರೆ ಎನ್ನುವುದು ಬೈಕ್ ಪ್ರೇಮಿಗಳ ಮಾತು.

100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧ?100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳಲ್ಲಿ ಡಬಲ್ ರೈಡ್ ನಿಷೇಧ?

ಆದರೆ, ಇದಕ್ಕೆಲ್ಲ ರಾಜ್ಯ ಸಾರಿಗೆ ಇಲಾಖೆ ತಣ್ಣೀರೆರಚಿದೆ.100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ಬೈಕ್ ಮತ್ತು ಸ್ಕೂಟರ್ ಗಳಲ್ಲಿ ಡಬಲ್ ರೈಡ್ ನಿಷೇಧಿಸಿ ರಾಜ್ಯ ಸಾರಿಗೆ ಇಲಾಖೆಯ ಉಪ ಕಾರ್ಯದರ್ಶಿ ಕೆ.ಬೀರೇಶ್ ಸುತ್ತೋಲೆ ಹೊರಡಿಸಿದ್ದಾರೆ.

Karnataka Transport deparment bans double ride on less than 100CC bikes

100 ಸಿಸಿಗಿಂತ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ದ್ವಿಚಕ್ರ ವಾಹನಗಳಿಗೆ ಹಿಂಬದಿ ಸೀಟು ಅಳವಡಿಸಿದ್ದಲ್ಲಿ ಅಂತಹ ವಾಹನಗಳ ನೊಂದಾಣಿಯನ್ನು ನಿಷೇಧಿಸುವಂತೆ ಅಪಘಾತದ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು. ಹೈಕೋರ್ಟ್ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಸೋಮವಾರ ಈ ಕ್ರಮಕೈಗೊಂಡಿದೆ.

ಹಿಂಬದಿ ಸೀಟು ಅಳವಡಿಸಿದ ದ್ವಿಚಕ್ರ ವಾಹನಗಳ ನೊಂದಾಣಿ ಮಾಡಿಕೊಳ್ಳದಂತೆ ಸಾರಿಗೆ ಇಲಾಖೆ ಆರ್ ಟಿಒಗೆ ಸೂಚಿಸಿದೆ. ಮಾತ್ರವಲ್ಲದೇ ವಾಹನ ಮೇಲೆ ಹಿಂಬದಿ ಸವಾರನೊಂದಿಗೆ ಪ್ರಯಾಣಿಸುವುದನ್ನು ಸಹ ನಿಷೇಧಿಸಲಾಗಿದೆ.

100 ಸಿಸಿಗಿಂತ ಕಡಿಮೆಯ ಎಂಜಿನ್ ಹೊಂದಿರುವ ಬೈಕ್ ಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿರುವ ಕಾರಣದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ.

English summary
Karnataka Transport deparment has banned double ride on less than 100CC bikes. Deputy Secretary of State Transport K.Biresh has issued a circular on October 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X