ಕರ್ನಾಟಕ-ತಮಿಳುನಾಡು ನಡುವೆ ಬಸ್ ಸಂಚಾರ ಆರಂಭ
ಬೆಂಗಳೂರು, ಅ.9 : ಕರ್ನಾಟಕ ಹೈಕೋರ್ಟ್‌ನಲ್ಲಿ ಜಯಲಲಿತಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ತಮಿಳುನಾಡಿಗೆ ಸ್ಥಗಿತಗೊಳಿಸಲಾಗಿದ್ದ ಕೆಎಸ್ಆರ್‌ಟಿಸಿ ಬಸ್ ಸಂಚಾರವನ್ನು ಬುಧವಾರ ಸಂಜೆಯಿಂದ ಪುನಃ ಆರಂಭಿಸಲಾಗಿದೆ. ಎಲ್ಲಾ ಬಸ್ಸುಗಳು ಗುರುವಾರದಿಂದ ಎಂದಿನಂತೆ ಸಂಚಾರ ನಡೆಸಲಿವೆ.
ಮಂಗಳವಾರ ಜಯಲಲಿತಾ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ ಬಳಿಕ ತಮಿಳುನಾಡಿಗೆ ಸಾಗುವ 417 ಕೆಎಸ್ಆರ್‌ಟಿಸಿ ಬಸ್ ಸಂಚಾರವನ್ನು ಮುಂಜಾಗ್ರತಾ ಕ್ರಮವಾಗಿ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಸಂಜೆ ಕೆಲವು ಬಸ್‌ಗಳ ಸಂಚಾರ ಆರಂಭಗೊಂಡಿದ್ದು, ಗುರುವಾರದಿಂದ ಎರಡೂ ರಾಜ್ಯಗಳ ನಡುವೆ ಸಂಚಾರ ಎಂದಿನಂತೆ ಇರಲಿದೆ.

ಜಯಲಲಿತಾ ಜಾಮೀನು ಅರ್ಜಿ ವಜಾಗೊಂಡ ಬಳಿಕ ಹೆಚ್ಚಿನ ಪ್ರತಿಭಟನೆ ನಡೆಯದೇ ಪರಿಸ್ಥಿತಿ ಶಾಂತವಾಗಿರುವುದರಿಂದ ಬಸ್ ಸಂಚಾರವನ್ನು ಪುನಃ ಆರಂಭಿಸಲಾಗಿದೆ. ಶುಕ್ರವಾರ, ಶನಿವಾರ ಹೆಚ್ಚಿನ ಜನರು ಎರಡೂ ರಾಜ್ಯಗಳ ನಡುವೆ ಹೆಚ್ಚಿನ ಜನರು ಪ್ರಯಾಣಿಸುವುದನ್ನು ಗಮನದಲ್ಲಿಟ್ಟುಕೊಂಡು ಬಸ್ ಸಂಚಾರ ಆರಂಭಿಸಲಾಗಿದೆ. ತಮಿಳುನಾಡಿನಿಂದ ಬರುವ ಕೆಎಸ್ಆರ್‌ಟಿಸಿ ಬಸ್‌ಗಳು ಸಂಚಾರ ಆರಂಭಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಕರ್ನಾಟಕ -ತಮಿಳುನಾಡು ನಡುವೆ ಸರ್ಕಾರಿ ಸಾರಿಗೆ ಇಲ್ಲ]
ಬುಧವಾರ ವಾಲ್ಮೀಕಿ ಜಯಂತಿ ಪ್ರಯುಕ್ತ ಕರ್ನಾಟಕದಲ್ಲಿ ಸರ್ಕಾರಿ ರಜೆ ಇತ್ತು. ರಜೆ ವೇಳೆಯಲ್ಲಿ ತಮಿಳುನಾಡಿಗೆ ತೆರಳುವ ಕೆಎಸ್ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಹಲವು ಪ್ರಯಾಣಿಕರು ಪರದಾಡಿದರು. ಖಾಸಗಿ ಬಸ್‌ಗಳು ಎಂದಿನಂತೆ ಸಂಚಾರ ನಡೆಸುತ್ತಿದ್ದು, ಗುರುವಾರದಿಂದ ಕೆಎಸ್ಆರ್‌ಟಿಸಿ ಎಲ್ಲಾ ಬಸ್‌ಗಳ ಸಂಚಾರವೂ ಆರಂಭವಾಗಲಿದೆ. [ಪಶ್ಚಾತ್ತಾಪ ಪಡಲು ನಾನೇನು ತಪ್ಪು ಮಾಡಿಲ್ಲ: ಭವಾನಿ]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜೈಲು ಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅರ್ಜಿಯ ವಿಚಾರಣೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದು ಜಾಮೀನು, ನೀಡಲು ನಿರಾಕರಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದ ಪ್ರತಿಭಟನೆ ನಡೆಯಬಹುದೆಂದು ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಂದಹಾಗೆ ಜಯಲಲಿತಾ ಜಾಮೀನು ಕೋರಿ ಇಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications