ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಿಂದ ಮೀರಾ ಕುಮಾರ್ ಗೆ ಭರ್ಜರಿ ಮತ ಚಲಾವಣೆ

By Sachhidananda Acharya
|
Google Oneindia Kannada News

ನವದೆಹಲಿ, ಜುಲೈ 20: ರಾಜ್ಯವಾರು ರಾಷ್ಟ್ರಪತಿಗಳಿಗೆ ಮತ ಚಲಾಯಿಸಿದ ಲೆಕ್ಕ ಬಹಿರಂಗವಾಗಿದೆ. ಪಶ್ಚಿಮ ಬಂಗಾಳ ಬಿಟ್ಟರೆ ವಿಪಕ್ಷಗಳ ಅಭ್ಯರ್ಥಿ ಮೀರಾ ಕುಮಾರ್ ರನ್ನು ಕರ್ನಾಟಕದಲ್ಲೇ ಹೆಚ್ಚಾಗಿ ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿರುವುದೂ ಇದಕ್ಕೆ ಕಾರಣ.

ನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯನೂತನ ರಾಷ್ಟ್ರಪತಿ ಸೇರಿದಂತೆ ಈವರೆಗಿನ ರಾಷ್ಟ್ರಾಧ್ಯಕ್ಷರ ಪರಿಚಯ

224 ಶಾಸಕರಲ್ಲಿ ರಾಜ್ಯದ 222 ಎಂಎಲ್ಎಗಳು ಮತ ಚಲಾಯಿಸಿದ್ದು ಇವರಲ್ಲಿ 163 ಶಾಸಕರು ಮೀರಾ ಕುಮಾರ್ ಪರ ಮತದಾನ ಮಾಡಿದ್ದಾರೆ. ಪ್ರತಿ ಮತದ ಮೌಲ್ಯ 131 ಆಗಿದ್ದು ಒಟ್ಟು 21,353 ಮೌಲ್ಯದ ಮತಗಳು ಮೀರಾ ಕುಮಾರ್ ಪರ ಚಲಾವಣೆಯಾಗಿವೆ. ಜೆಡಿಎಸ್ ಕೂಡಾ ಮೀರಾ ಕುಮಾರ್ ಅವರನ್ನೇ ಬೆಂಬಲಿಸಿದ್ದರಿಂದ ವಿಪಕ್ಷಗಳ ಅಭ್ಯರ್ಥಿ ಪರ ಭರ್ಜರಿ ಮತ ಚಲಾವಣೆಯಾಗಿದೆ.

Karnataka supports Meira Kumar more than Kovind in President polls

ಇನ್ನು ರಾಮ್ ನಾಥ್ ಕೋವಿಂದ್ ಪರ ಕರ್ನಾಟಕದಲ್ಲಿ ಕೇವಲ 56 ಮತಗಳು ಚಲಾವಣೆಯಾಗಿದ್ದು ಮತಗಳ ಮೌಲ್ಯ 7,336 ಆಗಿದೆ. ಒಟ್ಟು 3 ಶಾಸಕರ ಮತಗಳು ಅಸಿಂಧುವಾಗಿವೆ. ಇನ್ನು ಜೆಡಿಎಸ್ ನ ವೈ.ಎಸ್.ವಿ ದತ್ತಾ ಹಾಗೂ ಚಲುವರಾಯಸ್ವಾಮಿ ಮತ ಚಲಾಯಿಸಿರಲಿಲ್ಲ.

ರೈತನ ಮಗ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ರೈತನ ಮಗ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್

Karnataka supports Meira Kumar more than Kovind in President polls

ಒಟ್ಟು ಶಾಸಕರು - 224

ಚಲಾವಣೆಯಾದ ಮತಗಳು - 222

ಪ್ರತೀ ಮತಗಳ ಮೌಲ್ಯ - 131

ಮೀರಾ ಕುಮಾರ್ ಪರ ಚಲಾವಣೆಯಾದ ಮತಗಳು -163, ಮೌಲ್ಯ21,353

ರಾಮ್ ನಾಥ್ ಕೋವಿಂದ್ ಪರ ಚಲಾವಣೆಯಾದ ಮತಗಳು - 56, ಮೌಲ್ಯ 7,336

ತಿರಸ್ಕೃತ ಮತಗಳು - 3, ಮೌಲ್ಯ 393

ಇನ್ನು ಕರ್ನಾಟಕಕ್ಕಿಂತ ಹೆಚ್ಚು ಪಶ್ಚಿಮ ಬಂಗಾಳದಲ್ಲಿ ಮೀರಾ ಕುಮಾರ್ ಪರ ಮತಚಲಾವಣೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ 41,223 ಮೌಲ್ಯದ ಮತಗಳು ಮೀರಾ ಪರ ಚಲಾವಣೆಯಾಗಿವೆ. ನಂತರದ ಸ್ಥಾನದಲ್ಲಿ ಕರ್ನಾಟಕ ಇದ್ದು ಮೂರನೇ ಸ್ಥಾನದಲ್ಲಿ ಕೇರಳ ಇದೆ. ಇಲ್ಲಿ 20,973 ಮೌಲ್ಯದ ಮತಗಳು ಮೀರಾ ಕುಮಾರ್ ಗೆ ಬಿದ್ದಿವೆ.

ಇನ್ನು ಬಿಜೆಪಿ ಪರ ಅತೀ ಹೆಚ್ಚಿನ 69,680 ಮೌಲ್ಯದ ಮತಗಳು ಉತ್ತರ ಪ್ರದೇಶವೊಂದರಲ್ಲೇ ಚಲಾವಣೆಯಾಗಿವೆ. ಇನ್ನು ಆಂಧ್ರ ಪ್ರದೇಶದಲ್ಲಿ ಒಂದೇ ಒಂದು ಮತಗಳು ಮೀರಾ ಕುಮಾರ್ ಪರವಾಗಿ ಬಿದ್ದಿಲ್ಲ. ಇಲ್ಲಿ ಎಲ್ಲಾ ಮತಗಳು ಕೋವಿಂದ್ ರಿಗೇ ಬಿದ್ದಿವೆ.

English summary
President Election Results 2017: 163 MLA’s of Karnataka casted vote for Meira Kumar and only 56 votes are casted to Ram Nath Kovind out of 224 MLA’s.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X