ಮಳೆ ಬರದೇ ಇದ್ದರೆ ಮುಗೀತು ಕಥೆ!

ಮಳೆ ಯಾಕ್ ಹಿಂಗೆ ಕೈ ಕೊಡ್ತಾ ಇದೆ ಗೊತ್ತಿಲ್ಲ ಗುರೂ.. ಆದ್ರೂ ಈಗ ಮಳೆ ಬೇಕೆ ಬೇಕಾಗುತ್ತೆ. ಮಳೆ ಬರದೇ ಇದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು ಗ್ಯಾರಂಟಿ... ಹಿಂಗೆಲ್ಲಾ ಜನ ಇದೀಗ, ಮಳೆ ಬರಲಿ ಅಂತಾ ಕಾಯುತ್ತಿದ್ದಾರೆ. ಆದ್ರೆ ಮಳೆ ಬರ್ತಾನೆ ಇಲ್ಲ, ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಕಳೆದ ತಿಂಗಳ ಅಂತ್ಯಕ್ಕೆ ಅಂದ್ರೆ ಫೆಬ್ರವರಿ ತಿಂಗಳ ಕೊನೆಗೆ ಕರ್ನಾಟಕದಲ್ಲಿ ಭರ್ಜರಿ ಮಳೆ ಬರಬೇಕಿತ್ತು. ಹೀಗಿದ್ದರೂ ಮಳೆ ಬರಲೇ ಇಲ್ಲ, ಹೀಗಾಗಿ ಕರ್ನಾಟಕದ ಪರಿಸ್ಥಿತಿ ಏನಾಗಿದೆ ಗೊತ್ತಾ?

ಎಲ್ಲೆಲ್ಲೂ ಬರೀ ಬಿಸಿಲೇ ಕಾಣುತ್ತಿದ್ದು ಹೊರ ಹೋದರೆ ಸಾಕು ಮೈ ಬೆವರಿನಿಂದ ಒದ್ದೆಯಾಗಿ ಜನರು ಒದ್ದಾಡುತ್ತಿದ್ದಾರೆ. ಹೀಗಾಗಿ ಮಳೆ ಬರಲಿ.. ಮಳೆ ಬರಲಿ.. ಅಂತಾ ಇದೀಗ ಜನ ಕೂಡ ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಕೈಮೀರಿ ಹೋದ ಇಂತಹ ಸಮಯದಲ್ಲೇ ದೇವರು ಒಂದಷ್ಟು ಕರುಣೆ ತೋರಿಸಿ ಮಳೆ ಬರಿಸುತ್ತಿರುವಂತೆ ಈಗ ಭಾಸವಾಗುತ್ತಿದೆ. ಆದರೂ ಕರ್ನಾಟಕದಲ್ಲಿ ಮಳೆಯ ಆರ್ಭಟ ಶುರುವಾಗಿಲ್ಲ. ಹೀಗಿದ್ದಾಗ ಕರ್ನಾಟಕದ ಜಲಾಶಯಗಳ ಪರಿಸ್ಥಿತಿ, ಏನಾಗಿದೆ ಗೊತ್ತಾ? ಈ ಘನಘೋರ ಪರಿಸ್ಥಿತಿಯ ಇಂಚಿಂಚು ಮಾಹಿತಿಗೆ ಮುಂದೆ ಓದಿ.

Karnataka State Suffering From Water Problem And Waiting For Rain

ಹನಿ ಹನಿ ನೀರಿಗೂ ಪರದಾಟ

ಮಳೆಗಾಗಿ ಭೂಮಿ ತಾಯಿ ಕಾದು ಕೂತಿದ್ದಾಳೆ ಮಳೆ ಬೀಳದೆ ಇದ್ರೆ ಸ್ಥಿತಿ ಕೂಡ ಕೈಮೀರಿ ಹೋಗಲಿದೆ ಪರಿಸ್ಥಿತಿ ಹೀಗೆ ಹದ್ದು ಮೀರಿ ಹೋಗಿರುವ ಸಮಯದಲ್ಲೇ, ಭರ್ಜರಿ ಸುದ್ದಿಯೊಂದು ಸಿಕ್ಕಿದೆ. ಅದು ಏನೆಂದರೆ ಕೆಲ ಪ್ರದೇಶದಲ್ಲಿ ಭರ್ಜರಿ ಮಳೆ ಬೀಳುವ ಎಲ್ಲಾ ಮುನ್ಸೂಚನೆ ಈಗ ಸಿಕ್ಕಿದೆ. ಹೀಗಿದ್ದರೂ ಕರ್ನಾಟಕದಲ್ಲಿ ಮಳೆ ಸುರಿಯಲು ಇನ್ನು ಕೆಲವು ದಿನಗಳ ಬೇಕಾಗಿದೆ. ಪರಿಸ್ಥಿತಿ ಭಾರಿ ಕಠಿಣವಾದ ಸಮಯದಲ್ಲೇ ಕನ್ನಡ ನಾಡಿನ ಡ್ಯಾಂಗಳು ಅಂದ್ರೆ, ಜಲಾಶಯಗಳು ಒಣಗಿ ಒಣಗಿ ಹೋಗುತ್ತಿವೆ. ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕರ್ನಾಟಕದ ಡ್ಯಾಂಗಳ ನೀರಿನ ಮಾಹಿತಿ

1) ಕೆಆರ್‌ಎಸ್ ​ ಜಲಾಶಯ: ಡ್ಯಾಂನಲ್ಲಿ 49 ಟಿಎಂಸಿ ಗರಿಷ್ಠ ಸಾಮರ್ಥ್ಯವಿದೆ ಈಗ ಜಲಾಶಯದಲ್ಲಿ 13.81 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ಸಮಯಕ್ಕೆ ಕೆಆರ್‌ಎಸ್ ​ ಜಲಾಶಯದಲ್ಲಿ 21.76 ಟಿಎಂಸಿ ನೀರು ಇತ್ತು.

2) ಕಬಿನಿ ಜಲಾಶಯ: ಕಾವೇರಿ ಕೊಳ್ಳದ ಕಬಿನಿ ಡ್ಯಾಂನಲ್ಲಿ 19.52 ಟಿಎಂಸಿ ಗರಿಷ್ಠ ನೀರು ಸಂಗ್ರಹ ಮಾಡಬಹುದು. ಆದರೆ ಈಗ 09.64 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ವೇಳೆಗೆ, ಕಬಿನಿ ಜಲಾಶಯದಲ್ಲಿ 07.51 ನೀರು ಸಂಗ್ರಹ ಇತ್ತು.

3) ಹೇಮಾವತಿ ಡ್ಯಾಂ: ಈ ನದಿಗೆ ಕಟ್ಟಿದ ಡ್ಯಾಂಗೆ ಕೂಡ ನೀರಿನ ಹರಿವು ಕಡಿಮೆಯಾಗಿದೆ. 37.10 ಟಿಎಂಸಿ ಸಾಮರ್ಥ್ಯದ ಹೇಮಾವತಿ ಜಲಾಶಯ ಈ ಬಾರಿ ಕೇವಲ 10 ಟಿಎಂಸಿ ನೀರನ್ನು ಹೊಂದಿದೆ. ಕಳೆದ ವರ್ಷ ಈ ಸಮಯಕ್ಕೆ 20.26 ಟಿಎಂಸಿ ನೀರು ಈ ಡ್ಯಾಂನಲ್ಲಿ ಇತ್ತು.

4) ತುಂಗಭದ್ರಾ ಜಲಾಶಯ: ತುಂಗಭದ್ರಾ ಡ್ಯಾಂ ಪೂರ್ತಿಯಾಗಿ ತುಂಬಿಲ್ಲ. ಗರಿಷ್ಠ 105 ಟಿಎಂಸಿ ಸಾಮರ್ಥ್ಯ ಇರುವ ತುಂಗಭದ್ರಾ ಡ್ಯಾಂನಲ್ಲಿ ಇದೀಗ ಕೇವಲ 5.14 ಟಿಎಂಸಿ ನೀರು ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ 10.37 ಟಿಎಂಸಿ ನೀರು ಇತ್ತು.

5) ಆಲಮಟ್ಟಿ ಡ್ಯಾಂ: ಆಲಮಟ್ಟಿ ಡ್ಯಾಂಗೆ ಈ ಬಾರಿ ಉತ್ತಮವಾಗಿ ನೀರು ಹರಿದು ಬಂದಿದೆ. ಇಲ್ಲಿಗೆ ಮಹಾರಾಷ್ಟ್ರದಿಂದ ನೀರು ಬರಬೇಕಿದೆ. ಆಲಮಟ್ಟಿ ಡ್ಯಾಂನ ಒಟ್ಟು ಸಾಮರ್ಥ್ಯ 123.08 ಟಿಎಂಸಿ, ಇದೀಗ 40.74 ಟಿಎಂಸಿ ಸಂಗ್ರಹವಾಗಿದೆ. ಆದ್ರೆ ಕಳೆದ ವರ್ಷ ಈ ಸಮಯಕ್ಕೆ 36.06 ಟಿಎಂಸಿ ನೀರು ಇತ್ತು.

ಕರ್ನಾಟಕದ ಜನರಿಗೆ ನೀರು ಅನ್ನೋದು ಚಿನ್ನಕ್ಕೆ ಸಮಾನ ಆಗಿದೆ. ದಕ್ಷಿಣ ಕರ್ನಾಟಕದಿಂದ ಹಿಡಿದು, ಉತ್ತರ ಕರ್ನಾಟಕದ ತನಕ. ಮಲೆನಾಡಿನ ಜಿಲ್ಲೆಗಳಿಂದ ಹಿಡಿದು, ಕರಾವಳಿಯ ಭಾಗದ ತನಕ ಎಲ್ಲೆಲ್ಲೂ ನೀರಿಗೆ ಭಾರಿ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಕೈಮೀರಿ ಹೋದ ಕಾರಣಕ್ಕೆ ಈಗ ಮಳೆ ಬೀಳಲೇಬೇಕು ಎನ್ನುವ ಪರಿಸ್ಥಿತಿ ಇದೆ. ಮತ್ತೊಂದು ಕಡೆ ಡ್ಯಾಂಗಳಲ್ಲಿ ಕೂಡ ನೀರು ಖಾಲಿ ಆಗಿ ಜಲಾಶಯಗಳು ಒಣಗಿ ಹೋಗುತ್ತಿವೆ. ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲಿ ಮಳೆ ಬೀಳಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಹಿನ್ನೆಲೆ ಇನ್ನು ಕೆಲವೇ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಕೂಡ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+