ಅನುಪಮಾ ರಾಜೀನಾಮೆ ಅಂಗೀಕರಿಸಿದ ಸರ್ಕಾರ

Written By:
Subscribe to Oneindia Kannada

ಬೆಂಗಳೂರು, ಜೂನ್ 09 : ಕೊನೆಗೂ ರಾಜ್ಯ ಸರ್ಕಾರ ಕೂಡ್ಲಿಗಿ ಡಿವೈಎಸ್ ಪಿ ಅನುಪಮಾ ಶೆಣೈ ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿದೆ. ಈ ಮೂಲಕ ಅನೇಕ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಹೈ ಡ್ರಾಮಾಕ್ಕೆ ತೆರೆ ಬಿದ್ದಿದೆ.

ರಾಜ್ಯ ಸರ್ಕಾರ ಅನುಪಮಾ ಅವರ ಮನವೊಲಿಕೆಗೆ ಮಾಡಿದ ಯತ್ನ ವಿಫಲವಾದ ಕಾರಣ ರಾಜೀನಾಮೆಯನ್ನು ಅಂಗೀಕಾರ ಮಾಡಿದೆ. ಶನಿವಾರ ಜೂನ್ 4 ರಂದು ಅನುಪಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.[ಅನುಪಮಾ ಶೆಣೈ ಯಾರು?]

anupama shenoy,

ರಾಜೀನಾಮೆ ನೀಡಿದ ನಂತರ ಅನುಪಮಾ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಗುರುವಾರ ಕಾಣಿಸಿಕೊಂಡ ಅನುಪಮಾ ಕೂಡ್ಲಿಗಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿದ್ದರು. ಫೇಸ್ ಬುಕ್ ಸ್ಟೇಟಸ್ ಬಗ್ಗೆ ನನಗೇನು ಗೊತ್ತಿಲ್ಲ. ಸರ್ಕಾರ ಬೇಕಾದರೆ ವಜಾ ಮಾಡಿಕೊಳ್ಳಲಿ ಎಂಬ ಮಾತುಗಳನ್ನು ಆಡಿದ್ದರು.[ಅನುಪಮಾ ಶೆಣೈಗೆ ನ್ಯಾಯ ಸಿಗಬೇಕಿದೆ? ಸರ್ಕಾರಕ್ಕೆ ಜನತೆ ಸವಾಲ್!]

anupama

ಮಾಧ್ಯಮದವರ ಮುಂದೆ ಕಾಣಿಸಿಕೊಂಡ ಅನುಪಮಾ ಸರ್ಕಾರ ಮತ್ತು ತಮ್ಮ ರಾಜೀನಾಮೆ ಬಗ್ಗೆ ಅನೇಕ ವಿಚಾರಗಳನ್ನು ತೆರೆದಿಡಲಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಏನನ್ನು ಹೇಳದೇ ಅನುಪಮಾ ಅನೇಕ ಪ್ರಶ್ನೆಗಳನ್ನು ಹಾಗೇ ಬಿಟ್ಟಿದ್ದಾರೆ.[ಕೂಡ್ಲಿಗಿಯಲ್ಲಿ ಕೂಲ್ ಆಗಿ ಶೆಣೈ ಕೇಳಿದ ಪ್ರಶ್ನೆ 'ಫೇಸ್ಬುಕ್ ಎಂದ್ರೇನು?']

ಅನುಪಮಾ ರಾಜೀನಾಮೆ ಹಿಂಪಡೆಯಬೇಕು ಎಂಬ ಕೂಗು ಜನರಿಂದ, ಸಾಮಾಜಿಕ ತಾಣಗಳಲ್ಲಿ ಕೇಳಿ ಬಂದಿತ್ತು. ಅಲ್ಲದೇ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ಗೃಹಮಂತ್ರಿ ಡಾ ಜಿ ಪರಮೇಶ್ವರ ಮಾತುಕತೆಗೂ ಯತ್ನಿಸಿದ್ದರು. ಇದೀಗ ಅನುಪಮಾ ಶೆಣೈ ಸ್ವತಂತ್ರ ಹಕ್ಕಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Finally Karnataka State Government Accept Anupama Shenoy resignation on 9 June 2016. After this acceptance of resignation many question not get particular answer.
Please Wait while comments are loading...