ಜೂನ್ 20ರಿಂದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ

Posted By:
Subscribe to Oneindia Kannada

ಬೆಂಗಳೂರು, ಮೇ 17 : 2016ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಜೂನ್ 20 ರಿಂದ 27ರ ತನಕ ಪೂರಕ ಪರೀಕ್ಷೆಗಳು ನಡೆಯಲಿವೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಮೇ 26 ಕೊನೆಯ ದಿನವಾಗಿದೆ.

'ಎಸ್ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳನ್ನು ಜೂನ್ 20 ರಿಂದ 27ರ ತನಕ ನಡೆಸಲಾಗುತ್ತದೆ' ಎಂದು ಫ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಸೋಮವಾರ ಹೇಳಿದ್ದಾರೆ. ಪೂರಕ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಳ್ಳಲು ಮೇ 25 ಕೊನೆಯ ದಿನವಾಗಿದೆ. [SSLC ಫಲಿತಾಂಶದ ಮುಖ್ಯಾಂಶಗಳು]

sslc

ಶುಲ್ಕದ ವಿವರಗಳು : ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಒಂದು ವಿಷಯಕ್ಕೆ 240 ರೂ., ಎರಡು ವಿಷಯಕ್ಕೆ 290 ರೂ., ಮೂರು ಅಥವಾ ಅದಕ್ಕಿಂತ ಹೆಚ್ಚು ವಿಷಯಕ್ಕೆ 390 ರೂ. ಶುಲ್ಕಗಳನ್ನು ಪಾವತಿ ಮಾಡಬೇಕು. ಶುಲ್ಕಗಳನ್ನು NEFT ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಾವತಿ ಮಾಡಬಹುದಾಗಿದೆ. [ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ]

ಮರು ಎಣಿಕೆ ವಿವರ : ವಿದ್ಯಾರ್ಥಿಗಳು ಎಲ್ಲ ವಿಷಯದ ಉತ್ತರ ಪತ್ರಿಕೆಯ ಮರುಎಣಿಕೆ ಹಾಗೂ ಛಾಯಾ ಪ್ರತಿಗಳನ್ನು ಪಡೆಯಲು ಮೇ 26 ರೊಳಗೆ ಅರ್ಜಿ ಸಲ್ಲಿಸಬೇಕು. ವಿದ್ಯಾರ್ಥಿಗಳು ಮರುಎಣಿಕೆ ಅಥವ ಛಾಯಾ ಪ್ರತಿ ಇವೆರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. [ಜಿಲ್ಲಾವಾರು ಫಲಿತಾಂಆಶ ಇಲ್ಲಿದೆ ನೋಡಿ]

ಶುಲ್ಕಗಳ ವಿವರಗಳು : ಮರು ಎಣಿಕೆ ಅಥವ ಛಾಯಾ ಪ್ರತಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಕರ್ನಾಟಕ 1 ಅಥವ ಬೆಂಗಳೂರು 1 ಕೇಂದ್ರಗಳ ಮೂಲಕ ಶುಲ್ಕಗಳನ್ನು ಪಾವತಿ ಮಾಡಬಹುದು. 1 ವಿಷಯದ ಮರುಎಣಿಕೆಗೆ 150 ರೂ., 1 ವಿಷಯದ ಛಾಯಾ ಪ್ರತಿಗೆ 300 ರೂ. ಹಾಗೂ ಒಂದು ವಿಷಯದ ಮರು ಮೌಲ್ಯಮಾಪನಕ್ಕೆ 700 ರೂ. ಶುಲ್ಕ ನಿಗದಿ ಪಡಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Secondary School Leaving Certificate (SSLC) supplementary examinations scheduled on June 20 and June 27, 2016.
Please Wait while comments are loading...