Get Updates
Get notified of breaking news, exclusive insights, and must-see stories!

SSLC ಪರೀಕ್ಷೆ ಮರುಮೌಲ್ಯಮಾಪನ ಫಲಿತಾಂಶ ಪ್ರಕಟ: ನೋಡುವುದು ಹೇಗೆ?

ಬೆಂಗಳೂರು, ಸೆಪ್ಟೆಂಬರ್ 5: ರಾಜ್ಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟವಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಿರೀಕ್ಷಿಸಿದಷ್ಟು ಅಂಕ ಬಾರದ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈಗ ಅದರ ಫಲಿತಾಂಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ.

Recommended Video

      ಭಾರತೀಯರನ್ನು ಅಪಹರಿಸಿದ China ಸೇನೆ , Arunachal pradeshದಲ್ಲಿ ಘಟನೆ | Oneindia Kannada

      ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆಯನ್ನು ಬಳಸಿ ವೆಬ್‌ಸೈಟ್‌ನಲ್ಲಿ ಎಸ್‌ಎಸ್‌ಎಲ್‌ಸಿ ಮರುಮೌಲ್ಯಮಾಪನದ ಅಂಕಗಳನ್ನು ನೋಡಬಹುದು. ಆಗಸ್ಟ್ 10ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿ ರಾಜ್ಯದಲ್ಲಿ ಒಟ್ಟಾರೆ ಶೇ 71.8ರಷ್ಟು ಫಲಿತಾಂಶ ಬಂದಿತ್ತು. 2019ರಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 73.7ರಷ್ಟು ಬಂದಿತ್ತು.

      ಫಲಿತಾಂಶದಲ್ಲಿ ಪಡೆದ ಅಂಕಗಳ ಬಗ್ಗೆ ತೃಪ್ತಿ ಹೊಂದದ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ನಕಲಿ ಪ್ರತಿಗಳನ್ನು ಪಡೆಯಲು ಹಾಗೂ ಮರುಮೌಲ್ಯಮಾಪನ ಮಾಡಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸ್ಕ್ಯಾನ್ ಪ್ರತಿಗಳಿಗೆ ಅರ್ಜಿ ಸಲ್ಲಿಸಿದವರು ಕೆಎಸ್‌ಇಇಬಿಯ ವೆಬ್‌ಸೈಟ್‌ನಲ್ಲಿ ಚಲನ್ ಸಂಖ್ಯೆ, ನೋಂದಣಿ ಸಂಖ್ಯೆಯನ್ನು ಹಾಗೂ ತಾವು ಅರ್ಜಿ ಸಲ್ಲಿಸಿದ್ದ ವಿಷಯದ ಹೆಸರು ಬಳಸಿ ಉತ್ತರ ಪತ್ರಿಕೆಯ ಬುಕ್‌ಲೆಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

       Karnataka SSLC Revaluation Result 2020 Announced. Here Is How To Check

      ಮರುಮೌಲ್ಯಮಾಪನ ಫಲಿತಾಂಶ ನೋಡುವುದು ಹೇಗೆ?

      * ಅಧಿಕೃತ ವೆಬ್‌ಸೈಟ್ www.kseeb.kar.nic.in ಪ್ರವೇಶಿಸಬೇಕು.

      * ಫಲಿತಾಂಶ ವಿಭಾಗದಲ್ಲಿ ಕ್ಲಿಕ್ ಮಾಡಿ, ಮರುಮೌಲ್ಯಮಾಪನ ಫಲಿತಾಂಶವನ್ನು ಆಯ್ದುಕೊಳ್ಳಬೇಕು.

      * ಅಲ್ಲಿ ಕೊಟ್ಟಿರುವ ಜಾಗದಲ್ಲಿ ಪರೀಕ್ಷೆಯ ಪ್ರವೇಶ ಪತ್ರದಲ್ಲಿರುವಂತೆ ನೋಂದಣಿ ಸಂಖ್ಯೆಯನ್ನು ದಾಖಲಿಸಬೇಕು.

      * Submit ಬಟನ್ ಕ್ಲಿಕ್ ಮಾಡಿದರೆ ಮರುಮೌಲ್ಯಮಾಪನದ ಫಲಿತಾಂಶ ಸಿಗಲಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+