• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಲಕರಿಗೆ ಸುರೇಶ್ ಕುಮಾರ್ ಭಾವನಾತ್ಮಕ ಮನವಿ ಏನಿದು?

|
Google Oneindia Kannada News

ಬೆಂಗಳೂರು, ಆ. 10: ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶದ ಬಳಿಕ ಮಲ್ಲೇಶ್ವರದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಚೇರಿಯಲ್ಲಿ ಶಿಕ್ಷಣ ಸಚಿವ ಸಚಿವ ಎಸ್. ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ.

   SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

   ಕೊರೊನಾ ವೈರಸ್‌ನಿಂದಾದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಲಾಗಿತ್ತು. ಜೊತೆಗೆ ಪರೀಕ್ಷೆ ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಒಂದೆಡೆ ಸೇರುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆಗಳು ತೀರ ಹೆಚ್ಚಾಗಿದೆ. ಪರೀಕ್ಷೆಗಿಂತ ಜೀವ ಮುಖ್ಯ ಎಂದು ಕೆಲವರು ಹೈಕೋರ್ಟ್‌ ಮೊರೆ ಹೋಗಿದ್ದರು. ಆದರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಮೂಲಕ ಬಹುದೊಡ್ಡ ಸವಾಲನ್ನು ಎದುರಿಸಿದ್ದ ಸಚಿವ ಸುರೇಶ್ ಕುಮಾರ್, ಇದೀಗ ವಿದ್ಯಾರ್ಥಿಗಳ ಪೋಷಕರಿಗೆ ಮಹತ್ವದ ಮನವಿ ಮಾಡಿಕೊಂಡಿದ್ದಾರೆ. ಏನದು ಸೂಚನೆ?

   ಎಸ್‌ಎಂಎಸ್‌ ಮೂಲಕ

   ಎಸ್‌ಎಂಎಸ್‌ ಮೂಲಕ

   ಎಸ್.ಎಸ್.ಎಲ್.ಸಿ. ಫಲಿತಾಂಶವು ಇಂದು ಮಧ್ಯಾಹ್ನ 3 ಗಂಟೆಯ ಬಳಿಕ ಶಿಕ್ಷಣ ಇಲಾಖೆಯ ಅಧಿಕೃತ ಜಾಲತಾಣದಲ್ಲಿ‌ ಲಭ್ಯವಾಗಲಿದೆ. ಜೊತೆಗೆ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಎಲ್ಲ ವಿದ್ಯಾರ್ಥಿಗಳ ನೋಂದಾಯಿತ‌ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್. ಮೂಲಕವೂ ಫಲಿತಾಂಶ ಉಚಿತವಾಗಿ ತಲುಪಲಿದೆ. ಎಸ್‌ಎಂಎಸ್‌ ಫಲಿತಾಂಶ ಪಡೆಯಲು ಮತ್ತೆ ಬೇರೆ ಯಾವುದೇ ಪ್ರಕ್ರಿಯೆ ಅಗತ್ಯವಿಲ್ಲ‌. ಉಳಿದಂತೆ ಇತರ ಮಾಹಿತಿಗೆ ಇಲಾಖೆ ಜಾಲತಾಣ ನೋಡಿ ಎಂದು ಸಚಿವ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

   ಎಸ್ಎಸ್ಎಲ್ ಸಿ ಫಲಿತಾಂಶ ತಿಳಿಯುವ ಬಗ್ಗೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿಎಸ್ಎಸ್ಎಲ್ ಸಿ ಫಲಿತಾಂಶ ತಿಳಿಯುವ ಬಗ್ಗೆ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಾಹಿತಿ

   ಇದರೊಂದಿಗೆ ಮತ್ತೊಂದು ಮನಹತ್ವ ಸೂಚನೆಯನ್ನು ಪಾಲಕರಿಗೆ ಸುರೇಶ್ ಕುಮಾರ್ ಕೊಟ್ಟಿದ್ದಾರೆ.

   ದೊಡ್ಡ ಸಾಧನೆ

   ದೊಡ್ಡ ಸಾಧನೆ

   ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುತ್ತದೆ. ತಮ್ಮ ಮೊಬೈಲಿಗೆ ಫಲಿತಾಂಶ ಬರುವುದರಿಂದ ಬೇರೆನೂ ಮಾಡಬೇಕಾಗಿಲ್ಲ. ಆದರೆ ಒಂದು ವಿಚಾರದ ಬಗ್ಗೆ ನಿಮ್ಮ ಗಮನವಿರಲಿ ಎಂದು ಪಾಲಕರಲ್ಲಿ ಸುರೇಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

   ಮನೆಯಿಂದ ಹೊರಗೆ ಬರಲು ಎಲ್ಲರೂ ಹೆದರುತ್ತಿದ್ದಾಗ, ಅಂತಹ ವಾತಾವರಣದಲ್ಲಿ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆದಿರುವುದೇ ದೊಡ್ಡ ಸಾಧನೆ ಎಂಬುದು ತಮಗೆ ತಿಳಿದಿರಲಿ.
   ತಮ್ಮ ಮಕ್ಕಳ ಫಲಿತಾಂಶ ಎಷ್ಟೇ ಆಗಿರಲಿ ಅವರಿಗೆ ಹೇಳುವಾಗ ನಿಧಾನವಾಗಿ ಪ್ರೀತಿಯಿಂದ ತಿಳಿಸಿ. ಗಳಿಸಿದ ಅಂಕಗಳಿಗೆ ತೃಪ್ತಿ ಪಡುವಂತೆ ಮನವೊಲಿಸಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬಿ ಎಂದು ಸುರೇಶ್ ಕುಮಾರ್ ಅವರು ಭಾವುಕ ಮನವಿಯನ್ನು ಮಾಡಿಕೊಂಡಿದ್ದಾರೆ.

   ಇದನ್ನು ಮಾಡಬೇಡಿ

   ಇದನ್ನು ಮಾಡಬೇಡಿ

   ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಯಾವತ್ತೂ ಹೋಲಿಕೆ ಮಾಡಬೇಡಿ. ಅದು ಈ ಪರೀಕ್ಷಾ ಫಲಿತಾಂಶದಲ್ಲಂತೂ ದಯವಿಟ್ಟು ಹೋಲಿಕೆ ಮಾಡಲು ಹೋಗಬೇಡಿ. ಬೇರೆಯವರೊಂದಿಗೆ ಹೋಲಿಕೆ ಮಾಡಿ ನೋವಾಗುವಂತೆ ಮಾಡಬೇಡಿ.

   ಅವರು ಯಾವ ಕೋರ್ಸ್‌ನ್ನು ಆಯ್ಕೆ ಮಾಡಿದ್ದರೂ, ಆ ಕೋರ್ಸಿಗೆ ಸೇರಿಸಿ. ಮುಂದೆ ಚೆನ್ನಾಗಿ ಓದಲು ಹೇಳಿ. ಹಾಗೂ ಒಂದು ವೇಳೆ ಅವರ ನಿರೀಕ್ಷೆಗಿಂತ ಯಾವುದಾದರೂ ವಿಷಯದಲ್ಲಿ ಕಡಿಮೆ ಅಂಕ ಬಂದಲ್ಲಿ, ಮರು ಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅವಕಾಶವಿದೆ. ಮಗು ಮನೆಯ ಬೆಳಕು ಆ ಬೆಳಕು ಸದಾ ಪ್ರಜ್ವಲಿಸಲಿ ಎಂಬುದೇ ನಮ್ಮೆಲ್ಲರ ಆಶಯ ಎಂದು ಸುರೇಶಕುಮಾರ್ ಮನವಿ ಮಾಡಿಕೊಂಡಿದ್ದಾರೆ.

   ಧೈರ್ಯವಾಗಿ ಪರೀಕ್ಷೆ ಎದುರಿಸಿರುವ ಮಕ್ಕಳು ಜೀವನ ಪರೀಕ್ಷೆಯಲ್ಲಿಯೂ ಪಾಸ್‌ ಆಗುತ್ತಾರೆ. ಅವರ ಫಲಿತಾಂಶ ಏನೇ ಆಗಿದ್ದರೂ ಒತ್ತಡ ಬೇಡ. ಕೊರೊನಾ ವೈರಸ್‌ ಸಂಕಷ್ಟದಲ್ಲಿ ಪರೀಕ್ಷೆ ಬರೆದವರು ಜೀವನದಲ್ಲಿ ಗೆಲ್ಲುತ್ತಾರೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

   ಕೋವಿಡ್‌ಗೆ ಸವಾಲು

   ಕೋವಿಡ್‌ಗೆ ಸವಾಲು

   ಕೊರೊನಾ ವೈರಸ್ ಸೃಷ್ಟಿಸಿದ್ದ ಆತಂಕದಿಂದ ಕೆಲವು ವೈದ್ಯರೇ ತಮ್ಮ ವೃತ್ತಿಯಿಂದ ಹಿಂದಕ್ಕೆ ಸರಿದಿದ್ದರು. ಅಂತಹ ಸವಾಲಿನ ಸಮಯಲ್ಲಿ ರಾಜ್ಯದಲ್ಲಿ ಜೂನ್ 25 ರಿಂದ ಜುಲೈ 3ನೇ ತಾರಿಖಿನ ವರೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಮಾರು 7.5 ಲಕ್ಷ ವಿದ್ಯಾಥಿಗಳು ಬರೆದಿದ್ದರು.

   ಅವರಲ್ಲಿ 7,43,477 ಸಾಮಾನ್ಯ ವಿದ್ಯಾರ್ಥಿಗಳು ಹಾಗೂ 20,857 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಂಟೈನ್ಮೆಂಟ್ ಪ್ರದೇಶಗಳ 3,911 ವಿದ್ಯಾರ್ಥಿಗಳೂ ಪರೀಕ್ಷೆ ಬರೆಯುವ ಮೂಲಕ ಕೋವಿಡ್‌ಗೆ ಸವಾಲು ಹಾಕಿದ್ದರು.

   ಕೊರೊನಾ ವೈರಸ್ ಇಲ್ಲದೆ, ಇತರ ಅನಾರೋಗ್ಯ ಕಾರಣಗಳಿಂದ 863 ವಿದ್ಯಾರ್ಥಿಗಳು ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆದಿದ್ದರು. ಒಬ್ಬೇ ಒಬ್ಬ ವಿದ್ಯಾರ್ಥಿ ಕಾಪಿ ಮಾಡುವುದು ಸೇರಿದಂತೆ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿಲ್ಲದಿರುವುದು ಈ ಸಲದ ವಿಶೇಷ.

   English summary
   The much awaited SSLC exam result will be announced today. The results will be officially announced today at 3pm. After the result, the Minister of Education Suresh Kumar will address press conference at the Karnataka Secondary Education Examination Board Office in Malleshwara, Bengaluru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X