ಎಸ್‌ಎಸ್‌ಎಲ್‌ಸಿ ಫಲಿತಾಂಶ ಆನ್‌ಲೈನ್‌ನಲ್ಲಿ ಲಭ್ಯ

Posted By:
Subscribe to Oneindia Kannada

ಬೆಂಗಳೂರು, ಮೇ 16 : 2016ನೇ ಸಾಲಿನ ಎಸ್‌ಎಸ್ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇ 79.16 ಫಲಿತಾಂಶ ಬಂದಿದೆ. ಸೋಮವಾರ ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ಶಾಲೆಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಸೋಮವಾರ ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಮಲ್ಲೇಶ್ವರಂನಲ್ಲಿರುವ ಎಸ್ಎಸ್ಎಲ್‌ಸಿ ಬೋರ್ಡ್‌ನಲ್ಲಿ ಫಲಿತಾಂಶವನ್ನು ಪ್ರಕಟಿಸಿದರು. ಈ ಬಾರಿ ಒಟ್ಟಾರೆ ಶೇ 79.16 ಫಲಿತಾಂಶ ಬಂದಿದ್ದು, ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. [ಸರ್ಕಾರಿ ವೆಬ್ ಸೈಟ್ ನಲ್ಲಿ ಮಾತ್ರ ಫಲಿತಾಂಶ]

 kimmane rathnakar

ಫಲಿತಾಂಶದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ಬಳ್ಳಾರಿ ಕೊನೆಯ ಸ್ಥಾನವನ್ನು ಪಡೆದಿದೆ.
625 ಕ್ಕೆ 625 ಅಂಕ ಪಡೆದಿರುವ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೂರ್ಣಪ್ರಜ್ಞ ಶಾಲೆಯ ಎಸ್. ರಂಜನ್ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾನೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ ಈ ವೆಬ್ ಸೈಟ್‌ಗಳಲ್ಲಿ ಲಭ್ಯವಿದೆ. www.sslc.kar.nic.in /
www.karresults.nic.in

ಜಿಲ್ಲೆಗಳ ಫಲಿತಾಂಶ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಶೇ 89.63ರಷ್ಟು ಫಲಿತಾಂಶ ಪಡೆದಿದ್ದು ಮೊದಲ ಸ್ಥಾನಗಳಿಸಿದೆ. ಉಡುಪಿ ಜಿಲ್ಲೆ 89.52 ರಷ್ಟು ಫಲಿತಾಂಶ ಪಡೆದಿದ್ದು 2ನೇ ಸ್ಥಾನ ಪಡೆದಿದೆ. ಶೇ 88.01 ರಷ್ಟು ಫಲಿತಾಂಶ ಪಡೆದ ಮಂಗಳೂರು 3ನೇ ಸ್ಥಾನ ಪಡೆದಿದೆ. ಬಳ್ಳಾರಿ ಜಿಲ್ಲೆ ಶೇ 56.68ರಷ್ಟು ಫಲಿತಾಂಶ ಪಡೆದಿದ್ದು ಕೊನೆಯ ಸ್ಥಾನ ಪಡೆದಿದೆ.


ಜೂನ್ 20 ರಿಂದ 27 ಪೂರಕ ಪರೀಕ್ಷೆಗಳು ನಡೆಯಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Secondary education Examination Board (KSEEB) announced SSLC board examination 2016 results on Monday, May 16.
Please Wait while comments are loading...