ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕಟಕಟಾ.. 24 ಗಂಟೆಗಳಲ್ಲೇ 197 ಕೋಟಿ ರೂಪಾಯಿ ಮದ್ಯ ಮಾರಾಟ!

|
Google Oneindia Kannada News

ಬೆಂಗಳೂರು, ಮೇ.06: ನೊವೆಲ್ ಕೊರೊನಾ ವೈರಸ್ ಮತ್ತು ಭಾರತ ಲಾಕ್ ಡೌನ್ ನಡುವೆ ಮದ್ಯ ಮಾರಾಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡಿದ್ದೇ ತಡ ಮದ್ಯಪ್ರಿಯರು ಎಣ್ಣೆ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ಮಂಗಳವಾರ ಒಂದೇ ದಿನ ಕರ್ನಾಟಕದಲ್ಲಿ 197 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ. ಲಾಕ್ ಡೌನ್ ಮುನ್ನ ರಾಜ್ಯದಲ್ಲಿ ಸರಾಸರಿ 90 ರಿಂದ 95 ಕೋಟಿ ರೂಪಾಯಿ ಮದ್ಯ ಮಾರಾಟವಾಗುತ್ತಿತ್ತು.

ಮೊದಲ ದಿನವೇ ದಾಖಲೆ ಮದ್ಯ ಮಾರಾಟ, ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿದ ಮದ್ಯ ವ್ಯಸನಿಗಳುಮೊದಲ ದಿನವೇ ದಾಖಲೆ ಮದ್ಯ ಮಾರಾಟ, ಸರ್ಕಾರಕ್ಕೆ ಆರ್ಥಿಕ ಶಕ್ತಿ ತುಂಬಿದ ಮದ್ಯ ವ್ಯಸನಿಗಳು

2020-21ರ ಪ್ರಸಕ್ತ ಸಾಲಿನಲ್ಲಿ ಅಬಕಾರಿ ಇಲಾಖೆಯು ಬರೋಬ್ಬರಿ 26,440 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಮಂಗಳವಾರ ಒಂದೇ ದಿನ 197 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು ಹೊಸ ದಾಖಲೆ ಬರೆದಿದೆ.

24 ಗಂಟೆಗಳಲ್ಲೇ ಕೋಟ್ಯಂತರ ರೂ. ಮದ್ಯ ಸೇಲ್

24 ಗಂಟೆಗಳಲ್ಲೇ ಕೋಟ್ಯಂತರ ರೂ. ಮದ್ಯ ಸೇಲ್

ಮಂಗಳವಾರ ಒಂದೇ ದಿನ ಭಾರತದಲ್ಲಿ ತಯಾರಿಸಿದ 4.21 ಲಕ್ಷ ಬಾಕ್ಸ್ ಕೇಸಸ್ ಮದ್ಯವು ಮಾರಾಟವಾಗಿದೆ. 36.37 ಲಕ್ಷ ಲೀಟರ್ ಭಾರತೀಯ ಮದ್ಯವು ಸೇಲ್ ಆಗಿದ್ದು, ಇದರ ಮೊತ್ತ ಬರೋಬ್ಬರಿ 182 ಕೋಟಿ ರೂಪಾಯಿ ಆಗಿದೆ. ಅಲ್ಲದೇ 7.02 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದ್ದು, ಅದರ ಮೌಲ್ಯ 15 ಕೋಟಿ ಎನ್ನಲಾಗಿದೆ.

ಒಂದು ಬಾರಿ ಎಷ್ಟು ಮದ್ಯ ಖರೀದಿಸಬಹುದು?

ಒಂದು ಬಾರಿ ಎಷ್ಟು ಮದ್ಯ ಖರೀದಿಸಬಹುದು?

ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರವು ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಒಂದು ಬಾರಿಗೆ ಒಬ್ಬ ವ್ಯಕ್ತಿಗೆ ಮೂರು ಬಾಟಲ್ ಆಲ್ಕೋಹಾಲ್ ಹಾಗೂ 650 ಎಂಎಲ್ ನ ಆರು ಬಿಯರ್ ಬಾಟಲ್ ಗಳನ್ನು ಖರೀದಿಸುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾತ್ರ ಮದ್ಯದ ಅಂಗಡಿಗಳನ್ನು ತೆರೆಯಲು ಸರ್ಕಾರವು ಅನುಮತಿ ನೀಡಿದೆ.

ಮದ್ಯದ ಸ್ಟಾಕ್ ಖಾಲಿ ಆಗುತ್ತೆ ಎಂಬ ಆತಂಕ ಬೇಕಿಲ್ಲ

ಮದ್ಯದ ಸ್ಟಾಕ್ ಖಾಲಿ ಆಗುತ್ತೆ ಎಂಬ ಆತಂಕ ಬೇಕಿಲ್ಲ

ರಾಜ್ಯದಲ್ಲಿ ಎಂಎಸ್ಐಎಲ್, ಸಿಎಲ್-2 ಹಾಗೂ ಸಿಎಲ್-11 ಪರವಾನಗಿ ಹೊಂದಿರುವ ಮದ್ಯದ ಅಂಗಡಿಗಳಿಗೆ ಮಾತ್ರ ಮದ್ಯ ಮಾರಾಟ ಮಾಡುವುದಕ್ಕೆ ಅನುಮತಿ ನೀಡಲಾಗಿದೆ. ಮೊದಲ ದಿನವಾಗಿದ್ದ ಸೋಮವಾರ ರಾಜ್ಯದ ಹಲವೆಡೆ ಮದ್ಯವೆಲ್ಲ ಖಾಲಿಯಾಗಿ ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಆದರೆ ರಾಜ್ಯದಲ್ಲಿ ಮದ್ಯದ ದಾಸ್ತಾನು ಸಾಕಷ್ಟಿದೆ. ಮದ್ಯ ಖಾಲಿಯಾಗುತ್ತೆ ಎಂಬ ಯಾವುದೇ ಆತಂಕ ಬೇಕಿಲ್ಲ ಎಂದು ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ.

ಸೋಮವಾರ 45 ಕೋಟಿ ರೂಪಾಯಿ ಮದ್ಯ ಮಾರಾಟ

ಸೋಮವಾರ 45 ಕೋಟಿ ರೂಪಾಯಿ ಮದ್ಯ ಮಾರಾಟ

ಕಳೆದ ಒಂದೂವರೆ ತಿಂಗಳ ಬಳಿಕ ಆರಂಭವಾದ ಮದ್ಯದ ಅಂಗಡಿಗಳಿಗೆ ಭರ್ಜರಿ ವ್ಯಾಪಾರ ಆಗುತ್ತಿದೆ. ಸೋಮವಾರ ಒಂದೇ ದಿನದಲ್ಲಿ ಒಟ್ಟು 3.9 ಲಕ್ಷ ಲೀಟರ್ ಬಿಯರ್, 8.5 ಲಕ್ಷ ಲೀಟರ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಇಂದು ಮಾರಾಟವಾಗಿರುವ ಒಟ್ಟು 12.4 ಲಕ್ಷ ಲೀಟರ್‌ ಮದ್ಯದ ಮೌಲ್ಯ 45 ಕೋಟಿ ರೂಪಾಯಿ ಎಂದು ಅಬಕಾರಿ ಇಲಾಖೆ ಆಯುಕ್ತರು ಮಾಹಿತಿ ನೀಡಿದ್ದರು. ಇದೀಗ ಎರಡು ದಿನಗಳಲ್ಲೇ 242 ಕೋಟಿ ರೂಪಾಯಿ ಮದ್ಯ ಸೇಲ್ ಆಗಿದೆ.

English summary
Karnataka Sells Liquor Worth ₹197 Crore on Day 2 of Re-Opening of Shops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X