ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲಾರದಲ್ಲಿ ಕರ್ನಾಟಕದ ಮೊದಲ ಆನೆ ಆರೈಕೆ ಕೇಂದ್ರ ಆರಂಭ

|
Google Oneindia Kannada News

ಕೋಲಾರ, ಡಿಸೆಂಬರ್‌ 30: ಬೆಂಗಳೂರಿನಿಂದ 55 ಕಿಮೀ ದೂರದ ಕೋಲಾರ ಸಮೀಪದ ಕಾಜಿಕಲ್ಲಹಳ್ಳಿ ಗ್ರಾಮದಲ್ಲಿ ಕರ್ನಾಟಕದ ಮೊಟ್ಟಮೊದಲ ಆನೆಗಳ ಆರೈಕೆ ಕೇಂದ್ರ ಆರಂಭವಾಗಿದೆ.

ಬೆಂಗಳೂರು ಮೂಲದ ಎನ್‌ಜಿಒ ವನ್ಯಜೀವಿ ಪಾರುಗಾಣಿಕಾ ಮತ್ತು ಪುನರ್ವಸತಿ ಕೇಂದ್ರದ ಸಹಯೋಗದೊಂದಿಗೆ ಅರಣ್ಯ ಇಲಾಖೆಯು ಸ್ಥಾಪಿಸಿರುವ ಕೋಲಾರ ಕೇಂದ್ರವು 20 ಎಕರೆಗಳಷ್ಟು ವಿಸ್ತಾರವಾಗಿದೆ. ಈ ಕ್ಯಾಂಪಸ್‌ನಲ್ಲಿ ನಿರ್ಗತಿಕ, ವಯಸ್ಸಾದ, ರೋಗಪೀಡಿತ ಮತ್ತು ಗಾಯಗೊಂಡ ಆನೆಗಳನ್ನು ನೋಡಿಕೊಳ್ಳಲಾಗುತ್ತದೆ. ಬೆಂಗಳೂರು ಚೆನ್ನೈ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವ ಈ ಕೇಂದ್ರದಲ್ಲಿ ಪ್ರಸ್ತುತ ನಾಲ್ಕು ಹೆಣ್ಣು ಆನೆಗಳನ್ನು ನೋಡಿಕೊಳ್ಲಲಾಗಿತ್ತಿದೆ ಎಂದು ಟಿಒಐ ವರದಿ ಮಾಡಿದೆ.

ಸರ್ಕಾರಕ್ಕೆ ಸೆಡ್ಡು: ಕಾಡಾನೆ ಓಡಾಡುವ ಜಾಗದಲ್ಲಿ 20 ಅಡಿ ಕಂದಕ ತೆಗೆದ ರೈತರುಸರ್ಕಾರಕ್ಕೆ ಸೆಡ್ಡು: ಕಾಡಾನೆ ಓಡಾಡುವ ಜಾಗದಲ್ಲಿ 20 ಅಡಿ ಕಂದಕ ತೆಗೆದ ರೈತರು

ಈ ಕೇಂದ್ರದಲ್ಲಿ ಗಾಯಗೊಂಡ ಮತ್ತು ರೋಗಗ್ರಸ್ತ ಆನೆಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಚೇತರಿಸಿಕೊಳ್ಳಲು ಮತ್ತು ಮತ್ತೆ ಸಕ್ರಿಯವಾಗಿ ಮರಳಲು ಅನುವು ಮಾಡಿಕೊಡುವ ಪರಿಸರವನ್ನು ಒದಗಿಸಲಾಗುವುದು ಎಂದು ಕೋಲಾರ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿ ಏಳುಕೊಂಡಲು ಹೇಳಿದರು. ಧಾರ್ಮಿಕ ಸ್ಥಳಗಳಿಗೆ ನೀಡಲಾದ ಅನೇಕ ಆನೆಗಳು ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತವೆ. ಏಕೆಂದರೆ ಅವುಗಳನ್ನು ಹೆಚ್ಚು ಗಂಟೆಗಳ ಕಾಲ ನಿಲ್ಲುವಂತೆ ಮಾಡಲಾಗುತ್ತದೆ ಮತ್ತು ಸಾಕಷ್ಟು ಬಾಳೆಹಣ್ಣುಗಳು ಮತ್ತು ಭಕ್ತರು ನೀಡುವ ಇತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ ಎಂದರು.

Karnatakas first elephant care center opens in Kolar

ಇಲ್ಲಿಗೆ ಬರುವ ಆನೆಗಳು ಸ್ಥೂಲಕಾಯತೆ, ಜೀರ್ಣಕಾರಿ ಅಸ್ವಸ್ಥತೆಗಳು, ಸಂಧಿವಾತ ಮತ್ತು ಕಾಲುಗಳಲ್ಲಿ ಊತಕ್ಕೆ ಗುರಿಯಾಗುತ್ತವೆ. ಕೆಲವೊಮ್ಮೆ, ಈ ಆನೆಗಳನ್ನು ಅವುಗಳ ಮಾಲೀಕರು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವರಿಗೆ ಆರೈಕೆ ಮತ್ತು ಗಮನವನ್ನು ನೀಡುವ ಉದ್ದೇಶದಿಂದ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದಕ್ಕೆ 1.5 ಕೋಟಿ ವೆಚ್ಚವಾಗಿದೆ ಎಂದು ಏಳುಕೊಂಡಲು ಹೇಳಿದರು.

Karnatakas first elephant care center opens in Kolar

ಸೆಪ್ಟೆಂಬರ್‌ನಲ್ಲಿ ಲಕ್ಷ್ಮೀಪುರ ಮೀಸಲು ಅರಣ್ಯದಲ್ಲಿ ಈ ಸೌಲಭ್ಯ ಬಂದಿದೆ ಎಂದು ಡಬ್ಲ್ಯುಆರ್‌ಆರ್‌ಸಿಯ ಕೇಂದ್ರದ ಉಸ್ತುವಾರಿ ಸುಪರ್ಣಾ ಗಂಗೂಲಿ ಹೇಳಿದರು. ಈ ಪೈಕಿ ಮೂರು ಆನೆಗಳು ನಂಜನಗೂಡು, ತೂತುಕುಡಿ ಮತ್ತು ಬೆಂಗಳೂರಿನಿಂದ ಬಂದಿದ್ದು, ನಾಲ್ಕನೆಯದು ಗೋವಾದಿಂದ ಇತ್ತೀಚೆಗೆ ಬಂದಿವೆ. ದಿನಕ್ಕೆರಡು ಬಾರಿ ಸ್ನಾನ ಮಾಡಿಸಿ ರಾಗಿ, ಭತ್ತ, ಹಸಿರು ಹುಲ್ಲು, ಹಣ್ಣು ಸೇರಿದಂತೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಕಾಳುಮೆಣಸು, ಜೀರಿಗೆ, ನುಗ್ಗೆಸೊಪ್ಪು ಸೇರಿದಂತೆ ದಿನಕ್ಕೆರಡು ಬಾರಿ ರಾಗಿ ಮುದ್ದೆ ತಯಾರಿಸುವ ಆಧುನಿಕ ಅಡುಗೆ ಮನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

English summary
Karnataka's first elephant care center has started in Kajikallahalli village near Kolar, 55 km from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X