ಮ್ಯಾಗಿ ಮೇಲಿನ ನಿಷೇಧ ತೆರವು ಸದ್ಯಕ್ಕಿಲ್ಲ: ಖಾದರ್
ಬೆಂಗಳೂರು, ಅ. 08: ನೆಸ್ಲೆ ‘ಮ್ಯಾಗಿ' ನೂಡಲ್ಸ್‌ನಲ್ಲಿ ನಿಗದಿತ ಪ್ರಮಾಣದಲ್ಲೇ ರಾಸಾಯನಿಕ ಅಂಶವಿರುವುದು ರಾಜ್ಯದ ಪ್ರಯೋಗಾಲಯದ ವರದಿಯಿಂದ ಗೊತ್ತಾಗಿದೆ. ಅದರೆ, ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತೊಮ್ಮೆ ಪರೀಕ್ಷೆ ನಡೆಸಿ ವರದಿ ಪಡೆದ ಮೇಲೆ ನಿಷೇಧ ತೆರವು ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಮ್ದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.[ಆಟಾ ನೂಡಲ್ಸ್ ಪೈಪೋಟಿ ಎದುರಿಸುತ್ತಾ ಮ್ಯಾಗಿ ?]
ಕೇಂದ್ರ ಸರಕಾರ ಹಾಗೂ ಎಫ್ ಎಸ್ ಎಸ್ ಎ ಐ ನಿರ್ದೇಶನದ ಮೇರೆಗೆ ರಾಜ್ಯದಲ್ಲಿ ‘ಮ್ಯಾಗಿ' ನೂಡಲ್ಸ್ ಮಾರಾಟ ನಿಷೇಧಿಸಲಾಗಿದೆ. ಆದರೆ, ಈ ಬಗ್ಗೆ ಮತ್ತೊಮ್ಮೆ ಹೊರ ರಾಜ್ಯದ ಪ್ರಯೋಗಾಲಯದಿಂದ ವರದಿ ಪಡೆದ ಬಳಿಕ ‘ಮ್ಯಾಗಿ' ಮೇಲಿನ ನಿಷೇಧ ತೆರವುಗೊಳಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ಮ್ಯಾಗಿ ಸ್ಯಾಂಪಲ್ ಗಳನ್ನು ಕೇಂದ್ರ ಆಹಾರ ಪ್ರಯೋಗಾಲಯ(ಸಿಎಫ್ ಎಲ್) ಕೋಲ್ಕತ್ತಾಕ್ಕೆ ಕಳಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದರು.[ಬಾಂಬೆ ಹೈಕೋರ್ಟ್ ನಿಂದ ಮ್ಯಾಗಿ ನಿಷೇಧ ತೆರವು]
‘ಮ್ಯಾಗಿ' ಉತ್ಪಾದನೆಗೆ ಬಳಸುವ ಕಚ್ಚಾ ಸಾಮಗ್ರಿಗಳ ಮಿಶ್ರಣದಲ್ಲಿನ ಬದಲಾವಣೆ ಹಿನ್ನೆಲೆಯಲ್ಲಿ ರಾಸಾಯನಿಕ ಅಂಶ ಇರುವುದು ಗೊತ್ತಾಗಿದೆ ಎಂದು ನೆಸ್ಲೆ ಕಂಪನಿ ಸ್ಪಷ್ಟನೆ ನೀಡಿದೆ. ಕೋಲ್ಕತ್ತಾದ ಪ್ರಯೋಗಾಲಯದಲ್ಲಿ ಮ್ಯಾಗಿ ನೂಡಲ್ಸ್ ಪರೀಕ್ಷೆ ವರದಿ ಬಂದ ಬಳಿಕ ನಿಷೇಧ ಮುಂದುವರಿಕೆ ಅಥವಾ ನಿಷೇಧ ತೆರವುಗೊಳಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಖಾದರ್ ಸ್ಪಷ್ಟಪಡಿಸಿದರು.[ಸರ್ಕಾರದ ಗದಾ ಪ್ರಹಾರಕ್ಕೆ ತತ್ತರಿಸಿದ ನೆಸ್ಲೆ ಕಂಪನಿ]
ಮೊದಲ ಪರೀಕ್ಷೆಯಲ್ಲಿ ಅಲ್ಯೂಮಿನಿಯಂ(0.119ppm), ಸೀಸ (2.6 ppm) ಹಾಗೂ ಎಂ ಎಸ್ ಜಿ ಅಂಶ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದು ಪತ್ತೆಯಾಗಿತ್ತು. ಈಗ ಬೆಂಗಳೂರು ಗ್ರಾಮಾಂತರ, ಗದಗ ಸೇರಿದಂತೆ ಹಲವೆಡೆಗಳಿಂದ ಸ್ಯಾಂಪಲ್ ಸಂಗ್ರಹಿಸಿ ಕೋಲ್ಕತ್ತಾಕ್ಕೆ ಕಳಿಸಲಾಗಿದೆ ಎಂದು ಸಚಿವ ಖಾದರ್ ವಿವರಿಸಿದರು.