ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿರುವ ರಾಧಿಕಾ ಯಾರು?
Recommended Video

ಬೆಂಗಳೂರು, ಮೇ 22: ಕರ್ನಾಟಕದ ರಾಜಕೀಯದಲ್ಲಿ ಏನೇನೋ ಬದಲಾವಣೆಯಾಗಿ ಹದಿನೈದು ದಿನದಲ್ಲಿ ಮೂವರು ಸಿಎಂ ಗಳನ್ನು ಕಾಣುವಂತಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವವರೇ ಬೇರೆ! ಕಳೆದೊಂದು ವಾರದಿಂದ ಕನ್ನಡದ ಪ್ರಖ್ಯಾತ ನಟಿ ರಾಧಿಕಾ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ರಾಧಿಕಾ ಈಗ ಸುದ್ದಿಯಾಗುತ್ತಿರುವುದಾದರೂ ಯಾಕೆ?
2000 ನೇ ಇಸವಿಯಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ರಾಧಿಕಾ 'ನಿನಗಾಗಿ' ಚಿತ್ರದಿಂದ ಕನ್ನಡಿಗರ ಮನಗೆದ್ದವರು. 2010 ರವರೆಗೂ ಅಷ್ಟೊಂದು ಸುದ್ದಿಯಲ್ಲಿಲ್ಲದ ರಾಧಿಕಾ, ಇದ್ದಕ್ಕಿದ್ದಂತೆ ಸುದ್ದಿಯಾದರು. "ಕರ್ನಾಟಕದ ಪ್ರಭಾವಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿಯೊಬ್ಬರೊಂದಿಗೆ ತನಗೆ 2006 ರಲ್ಲಿ ಮದುವೆಯಾಗಿದೆ. ತಮಗೊಬ್ಬ ಮಗಳೂ ಇದ್ದಾಳೆ" ಎಂಬ ಶಾಕಿಂಗ್ ನ್ಯೂಸ್ ಅನ್ನು ರಾಧಿಕಾ ನೀಡಿದ್ದರು. ನಂತರ ಎಚ್ ಡಿ ಕುಮಾರಸ್ವಾಮಿ ಮತ್ತು ರಾಧಿಕಾ ಜೊತೆಗಿರುವ ಚಿತ್ರಗಳು ವೃತ್ತಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.

ಇದೀಗ ಕಾಂಗ್ರೆಸ್ ಪಕ್ಷ ತನ್ನ ಬೆಂಬಲ ಜೆಡಿಎಸ್ ಗೆ ಎಂದು ಘಂಟಾಘೋಷವಾಗಿ ಘೋಷಿಸುತ್ತಿದ್ದಂತೆಯೇ ಜೆಡಿಎಸ್ ಪಾಳೇಯದಲ್ಲಿ ಚಟುವಟಿಕೆ ಗರಿಗೆದರಿದೆ. ಹೀಗಿರುವಾಗ ಒಂದಷ್ಟು ಕಿಲಾಡಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರಾಧಿಕಾ ಅವರನ್ನು ಟ್ರೋಲ್ ಮಾಡುವುದಕ್ಕೆ ತೊಡಗಿದ್ದಾರೆ. ಈ ಜೋಡಿ ತಮಗೆ ಮದುವೆಯಾಗಿದೆ ಎಂದು ಎಲ್ಲಿಯೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎಂಬುದು ಉಲ್ಲೇಖಿಸಬೇಕಾದ ಸಂಗತಿ.

ಬಿ ಎಸ್ ವೈ ಗೆ ಧನ್ಯವಾದ!
ಕರ್ನಾಟಕದ ರಾಜಕೀಯ ಬೆಳವಣಿಗೆಯ ನಂತರ ಇಂಥದೊಂದು ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. 'ನನ್ನ ಮಾಂಗಲ್ಯ ಉಳಿಸಿದ ಯಡಿಯೂರಪ್ಪನವರಿಗೆ ಧನ್ಯವಾದಗಳು' ಎಂದು ರಾಧಿಕಾ ಕಣ್ಣೀರಿಟ್ಟು ಹೇಳುತ್ತಿರುವ ಚಿತ್ರ ಅದು.

ರಾಧಿಕಾ ಕ್ಯಾಂಟೀನ್
ಇಂದಿರಾ ಕ್ಯಾಂಟೀನ್ ಅಲ್ಲ, ರಾಧಿಕಾ ಕ್ಯಾಂಟೀನ್. ಕರ್ನಾಟಕದಲ್ಲಿ ಜನಪ್ರಿಯತೆಗಳಿಸಿರುವ ಇಂದಿರಾ ಕ್ಯಾಂಟೀನ್ ಇನ್ನು ಮೇಲೆ ರಾಧಿಕಾ ಕ್ಯಾಂಟೀನ್ ಆಗಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಲೇವಡಿ ಮಾಡಲಾಗಿದೆ.
ಸಖತ್ ಖುಷಿಯಾದ ರಾಧಿಕಾ
ಕರ್ನಾಟಕದ ರಾಜಕೀಯ ಬೆಳವಣಿಗೆಯ ಕುರಿತು ಸಖತ್ ಖುಷಿಯಾಗಿರುವ ರಾಧಿಕಾ, ಎಚ್ ಡಿ ಕೆ ಮುಖ್ಯಮಂತ್ರಿಯಾಗುತ್ತಿರುವ ಸುದ್ದಿ ಕೇಳಿ ಕುಣಿದಾಡಿದ್ದು ಹೀಗೆ ಎಂದು ರಾಧಾಕೃಷ್ಣ ಜೆ ರೆಡ್ಡಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ಇವು ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಅಭಿಪ್ರಾಯಗಳಷ್ಟೆ!
ಇವು ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಅಭಿಪ್ರಾಯಗಳಷ್ಟೆ!aಇದ್ದಕ್ಕಿದ್ದಂತೆ ರಾಧಿಕಾ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದು, ಆ ಟ್ರೋಲ್ ಗಳ ಕುರಿತಷ್ಟೇ ಇಲ್ಲಿ ವಿವರಣೆ ನೀಡಿದ್ದೇವೆ. ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನದ ಕುರಿತು ಅಪಹಾಸ್ಯ ಮಾಡುವ ಉದ್ದೇಶದಿಂದಲ್ಲ.












Click it and Unblock the Notifications