Karnataka Cabinet List: ದೆಹಲಿ ತಲುಪಿದ ಸಂಭಾವ್ಯ ಪಟ್ಟಿ; ನಿಮ್ಮ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ! ಇಲ್ಲಿದೆ ಫೈನಲ್ ಲಿಸ್ಟ್
ಬೆಂಗಳೂರು, ಮೇ 16: ರಾಜ್ಯದಲ್ಲಿ ಭರ್ಜರಿಗೆ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಾಳಯದಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರ ದೊಡ್ಡ ಕಗ್ಗಂಟಾಗಿದೆ. ಈಗಾಗಲೇ ಸಿಎಂ ಆಯ್ಕೆ ವಿಚಾರ ದೆಹಲಿ ಅಂಗಳವನ್ನ ತಲುಪಿದ್ದು, ಇಂದು(ಮಂಗಳವಾರ) ರಾತ್ರಿಯೊಳಗೆ ರಾಜ್ಯದ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಹೈಕಮಾಂಡ್ ನಾಯಕರು ಸ್ಪಷ್ಟಪಡಿಸಲಿದ್ದಾರೆ.
ಹಲವು ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆಯ ಜೊತೆ ಜೊತೆಗೆ ಲೋಕಸಭಾ ಚುನಾವಣಾ ಹಿನ್ನಲೆ ಸಮರ್ಥ ಸಂಪುಟ ರಚನೆಗೆ ಹೈಕಮಾಂಡ್ ಮುಂದಾಗಿದೆ. ಈಗಾಗಲೇ ಮುಖ್ಯಮಂತ್ರಿ ಆಯ್ಕೆಯ ಮಾತ್ರವಲ್ಲದೆ ನೂತನ ಸಚಿವರ ಆಯ್ಕೆ ಕೂಡ ಹೈಕಮಾಂಡ್ ನಡೆಸಿದ್ದು, ರಾಜ್ಯದಿಂದ ಸಂಪುಟಕ್ಕೆ ಸೇರುವ ಸಂಭಾವ್ಯ ಮಂತ್ರಿಗಳ ಪಟ್ಟಿಯನ್ನ ಹೈಕಮಾಂಡ್ ಗೆ ತಲುಪಿಸಲಾಗಿದೆ.

ಲೋಕಸಭಾ ಚುನಾವಣೆಯ ಮೇಲೆ ಕಣ್ಣೀಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಜಿಲ್ಲಾವಾರು ಹಾಗೂ ಜಾತಿ, ಸಮುದಾಯವಾರು ಲೆಕ್ಕಾಚಾರದ ಮೇಲೆ ಮಂತ್ರಿಗಳನ್ನಾಗಿ ಮಾಡಲು ಕಾಂಗ್ರೆಸ್ ಚಿಂತನೆಯನ್ನ ನಡೆಸಿದ್ದು, ಅದರಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ಸುರ್ಜೇವಾಲ ತಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ
ಯಾವ ಜಿಲ್ಲೆಯಲ್ಲಿ ಯಾರಿಗೆ ಮಂತ್ರಿ ಭಾಗ್ಯ?
ಬೆಂಗಳೂರು ನಗರ
1. ಕೆ.ಜೆ. ಜಾರ್ಜ್
2. ರಾಮಲಿಂಗಾರೆಡ್ಡಿ
3. ಕೃಷ್ಣಬೈರೇಗೌಡ
4. ಎಂ.ಕೃಷ್ಣಪ್ಪ
5. ದಿನೇಶ್ ಗುಂಡೂರಾವ್
6. ಜಮೀರ್ ಅಹಮ್ಮದ್
7. ರಿಜ್ವಾನ್ ಹರ್ಷದ್

ಬೆಳಗಾವಿ ಜಿಲ್ಲೆ
1. ಲಕ್ಷ್ಮಣ್ ಸವದಿ
2. ಲಕ್ಷ್ಮೀ ಹೆಬ್ಬಾಳ್ವರ್
3. ಸತೀಶ್ ಜಾರಕಿಹೊಳಿ
ಬಾಗಲಕೋಟೆ ಜಿಲ್ಲೆ
1. ಆರ್.ಬಿ. ತಿಮ್ಮಾಪುರ್.
ವಿಜಯಪುರ ಜಿಲ್ಲೆ
1. ಎಂ.ಬಿ. ಪಾಟೀಲ್
2. ಶಿವಾನಂದ ಪಾಟೀಲ್
ಕಲಬುರಗಿ ಜಿಲ್ಲೆ
1. ಪ್ರಿಯಾಂಕ್ ಖರ್ಗೆ
2. ಅಜಯ್ ಸಿಂಗ್
ಬೀದರ್ ಜಿಲ್ಲೆ
1. ಈಶ್ವರ್ ಖಂಡ್ರೆ
ಕೊಪ್ಪಳ ಜಿಲ್ಲೆ
1. ಬಸವರಾಜ್ ರಾಯರೆಡ್ಡಿ
ಗದಗ ಜಿಲ್ಲೆ
1. ಹೆಚ್.ಕೆ. ಪಾಟೀಲ್
ಧಾರವಾಡ ಜಿಲ್ಲೆ
1. ಜಗದೀಶ್ ಶೆಟ್ಟರ್
ಉತ್ತರ ಕನ್ನಡ ಜಿಲ್ಲೆ
1. ಆರ್ ವಿ ದೇಶಪಾಂಡೆ
ಹಾವೇರಿ ಜಿಲ್ಲೆ
1. ರುದ್ರಪ್ಪ ಲಮಾಣಿ
ಬಳ್ಳಾರಿ ಜಿಲ್ಲೆ
1. ನಾಗೇಂದ್ರ
ದಾವಣಗೆರೆ ಜಿಲ್ಲೆ
1. ಎಸ್.ಎಸ್ ಮಲ್ಲಿಕಾರ್ಜುನ್
ಶಿವಮೊಗ್ಗ ಜಿಲ್ಲೆ
1. ಮಧುಬಂಗಾರಪ್ಪ
ಚಿಕ್ಕಮಗಳೂರು ಜಿಲ್ಲೆ
1. ಟಿ.ಡಿ. ರಾಜೇಗೌಡ
ತುಮಕೂರು ಜಿಲ್ಲೆ
1. ಡಾ. ಪರಮೇಶ್ವರ್
2. ಕೆ.ಎನ್. ರಾಜಣ್ಣ
ಮಂಡ್ಯ ಜಿಲ್ಲೆ
1. ಎನ್. ಚೆಲುವರಾಯಸ್ವಾಮಿ
ದಕ್ಷಿಣ ಕನ್ನಡ ಜಿಲ್ಲೆ
1. ಯು.ಟಿ. ಖಾದರ್
ಮೈಸೂರು ಜಿಲ್ಲೆ
1. ಎಚ್.ಸಿ. ಮಹದೇವಪ್ಪ
ಚಾಮರಾಜನಗರ ಜಿಲ್ಲೆ
1. ಪುಟ್ಟರಂಗಶೆಟ್ಟಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ
1. ಕೆ.ಎಚ್. ಮುನಿಯಪ್ಪ
ವಿಧಾನ ಪರಿಷತ್ತಿನಿಂದ ಸಂಪುಟ ಸೇರಲಿರುವ ಸಂಭಾವ್ಯ ಅಭ್ಯರ್ಥಿಗಳು
1. ಬಿ.ಕೆ. ಹರಿಪ್ರಸಾದ್
2. ಸಲೀಂಮ್ ಅಹಮದ್












Click it and Unblock the Notifications