ಬಿಗ್ ನ್ಯೂಸ್; ಕ್ವಾರಂಟೈನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ
ಬೆಂಗಳೂರು, ಮೇ 15 : ವಿದೇಶ ಅಥವ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದರೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕು. ಸರ್ಕಾರ ಈಗ ಕ್ವಾರಂಟೈನ್ ನಿಯಮಗಳನ್ನು ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ.
ಬೇರೆ ರಾಜ್ಯ ಅಥವ ವಿದೇಶದಿಂದ ಯಾವುದೇ ಸಾರಿಗೆ ವ್ಯವಸ್ಥೆ ಮೂಲಕ ಆಗಮಿಸಿದರೂ 14 ದಿನಗಳ ಕ್ವಾರಂಟೈನ್ ಕಡ್ಡಾಯವಾಗಿದೆ. ರಾಜ್ಯಕ್ಕೆ ಬರುತ್ತಿದ್ದಂತೆ ಆರೋಗ್ಯ ತಪಾಸಣೆ ನಡೆಸಿ ಕ್ವಾರಂಟೈನ್‌ಗೆ ಕಳಿಸಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರ ಅನ್ವಯ ಕೆಲವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ಸಿಗಲಿದೆ. ಈ ಕುರಿತ ಆದೇಶ ಬಿಡುಗಡೆ ಮಾಡಲಾಗಿದೆ.

ಬೇರೆ ರಾಜ್ಯ ಅಥವ ವಿದೇಶದಿಂದ ಕರ್ನಾಟಕ್ಕೆ ಆಗಮಿಸಿದ ಜನರ ಪರೀಕ್ಷೆಯನ್ನು ಆರ್‌ಟಿ-ಪಿಸಿಎಆರ್ ವಿಧಾನದ ಮೂಲಕ ಮಾಡಲಾಗುತ್ತದೆ. ಆಗ ಪರೀಕ್ಷೆ ವರದಿ ನೆಗೆಟೀವ್ ಬಂದರೆ ಅವರಿಗೆ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗುತ್ತದೆ.
ಸರ್ಕಾರಿ ಕ್ವಾರಂಟೈನ್‌ನಿಂದ ವಿನಾಯಿತಿ ಸಿಕ್ಕರೂ ಅವರು ಕರ್ನಾಟಕಕ್ಕೆ ಆಗಮಿಸಿದ ದಿನಾಂಕದಿಂದ ಹಿಡಿದು 14 ದಿನಗಳ ತನಕ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು. ಹೀಗೆ ಅಂತರ ರಾಜ್ಯ, ವಿದೇಶದಿಂದ ಬರುವ ಪ್ರಯಾಣಿಕರ ಕ್ವಾರಂಟೈನ್ ನಿಯಮಾವಳಿ ಸಡಿಲಿಕೆ ಮಾಡಲಾಗಿದೆ.
ಯಾರಿಗೆ ವಿನಾಯಿತಿ? : ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, 80 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು, ಗಂಭೀರ ರೋಗದಿಂದ ಬಳಲುತ್ತಿರುವವರು (ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಕಿಡ್ನಿ ಸಂಬಂಧಿತ ಕಾಯಿಲೆ, ಸ್ಟ್ರೋಕ್).
ಇಂತಹ ವರ್ಗದಡಿ ಬರುವವರಿಗೆ ಸರ್ಕಾರಿ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೆ, ಕಡ್ಡಾಯ ಕ್ವಾರಂಟೈನ್ ನಿಯಮ ರಾಜ್ಯದಲ್ಲಿ ಜಾರಿಯಲ್ಲಿ ಇರಲಿದೆ.












Click it and Unblock the Notifications