Ration Card: ಫಲಾನುಭವಿಗಳಿಗೆ ಶಾಕ್..! ರಾಜ್ಯದಲ್ಲಿ 2023ರಿಂದ ರದ್ದಾದ ಪಡಿತರ ಚೀಟಿಗಳು & ಕಾರಣಗಳು?
Karnataka Ration Cards Big Updates: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಕ್ಕಿಯೋಜನೆಯಡಿ ಹೆಚ್ಚುವರಿ 05 ಕೆಜಿ ಅಕ್ಕಿ ವಿತರಣೆ ಘೋಷಿಸಿತು. ಅದಾದ ಬಳಿಕ ಪಡಿತರ ಚೀಟಿಯಲ್ಲಿ ಅರ್ಹರು, ಅನರ್ಹರು ಯಾರೆಂದು ಪತ್ತೆ ಕಾರ್ಯ ಪಡೆಯಿತು. ಅಲ್ಲಿಂದ ಈವರೆಗೆ ಲಕ್ಷಾಂತರ ಅನರ್ಹ ಪಡಿತರನ್ನು ಗುರುತಿಸಲಾಗಿದೆ. 2023ರಿಂದ ಈವರೆಗೆ ರೇಷನ್ ಕಾರ್ಡ್ ರದ್ದು, ಎಪಿಲ್, ಅಂತೋದಯ, ಬಿಪಿಎಲ್ ಕಾರ್ಡ್‌ನಲ್ಲಿ ಬದಲಾವಣೆ ಆಯಿತು. ಏನೆಲ್ಲ ಬದಲಾವಣೆ ಆಯಿತು? ಒಟ್ಟು ಪಡಿತರ ಚೀಟಿದಾರರು ಮತ್ತು ರದ್ದುಗೊಂಡ ರೇಷನ್ ಕಾರ್ಡ್ ವಿವರ ಇಲ್ಲಿದೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಪಡಿತರ ಚೀಟಿಗಳ ವಿಚಾರದಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ವಿಪಕ್ಷಗಳು ವಿರೋಧಿಸಿದ್ದು, ಬಡ ಪಡಿತರ ಪರ ಬ್ಯಾಟ್ ಬೀಸಿದ್ದರು. 2024ರ ಅಂಕಿ ಅಂಶಗಳ ಪ್ರಕಾರ, 1.51 ಕೋಟಿ ಪಡಿತರ ಚೀಟಿಗಳಿವೆ. ಇದರಿಂದ ಒಟ್ಟು 4.35 ಕೋಟಿ ಫಲಾನುಭವಿಗಳು ದವಸ, ಧಾನ್ಯದ ಸವಲತ್ತು ಪಡೆದಿದ್ದಾರೆ. ಅದೇ ವರ್ಷ 13 ಲಕ್ಷಕ್ಕೂ ಅಧಿಕ ಅನರ್ಹರನ್ನು ಪತ್ತೆ ಮಾಡಿದ್ದ ಅಧಿಕಾರಿಗಳು 3.64 ಲಕ್ಷ ಕಾರ್ಡ್‌ಗಳನ್ನು ರದ್ದುಗೊಳಿಸಿದ್ದರು. ಅದರಲ್ಲಿ ಸರ್ಕಾರಿ ನೌಕರರ 2900ಕ್ಕೂ ಅಧಿಕ ಕಾರ್ಡ್‌ಗಳು ಇವೆ.

ಇತ್ತೀಚೆಗೆ ಸರ್ಕಾರ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸುವ ಜೊತೆಗೆ ಅರ್ಹರನ್ನು ಪತ್ತೆ ಮಾಡಿ ಅವರಿಗೆ ಎಪಿಎಲ್ (APL) ಕಾರ್ಡ್ ನೀಡುವ ಅಥವಾ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸುವ ಪ್ರಕ್ರಿಯೆ ಆರಂಭಿಸಿದೆ. 2023ರಿಂದ 2025ರ ನವೆಂಬರ್ ವರೆಗೆ ಲಕ್ಷಾಂತರ ಅನರ್ಹರನ್ನು ಪತ್ತೆ ಮಾಡಿದ್ದು, ಅವರ ರೇಷನ್ ಕಾರ್ಡ್ ರದ್ದುಗೊಳಿಸಳಾಗಿದೆ. ಹಲವರ ಕಾರ್ಡ್‌ಗಳನ್ನು ಎಪಿಎಲ್ ಆಗಿ ಬದಲಾಯಿಸಲು ಸರ್ಕಾರ ಮುಂದಾಗಿದೆ. ಈ ಕಾರ್ಯ ಪ್ರಗತಿಯಲ್ಲಿದೆ ಎಂದು ಆಹಾರ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಬೆಂಗಳೂರಲ್ಲೇ ಲಕ್ಷಾಂತರ ರೇಷನ್ ಕಾರ್ಡ್ ರದ್ದು..!
ಬಡತನ ರೇಖೆಯಿಂದ ಕೆಳಗೆ ಇರುವ ಅರ್ಹರಿಗೆ BPL Card ನೀಡಲಾಗುತ್ತಿದೆ. ಆದರೆ ಅನರ್ಹರು ನಕಲಿ ದಾಖಲೆ ನೀಡಿ BPL Card ಪಡೆದಿರುವುದು ಸಾಬೀತಾಗಿದೆ. ಹೀಗಾಗಿ ಸರ್ಕಾರ ಅಂತವರ ಪತ್ತೆ ಮಾಡಿ ಪಡಿತರ ರದ್ದು ಶಾಕ್ ನೀಡಿದೆ. ಬೆಂಗಳೂರು ಮಹಾನಗರ ಒಂದರಲ್ಲಿಯೇ ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳು ರದ್ದಾಗಲಿವೆ ಅಂತಲೂ ಹೇಳಲಾಗುತ್ತಿದೆ.
ಸರ್ಕಾರದ ರದ್ದು ನಡೆಗೆ ವಿರೋಧಿಸಿದ ಅನ್ನ ಭಾಗ್ಯ ಫಲಾನುಭವಿಗಳು ಮತ್ತೊಮ್ಮೆ ಪರಿಶೀಲಿಸಿ ಕ್ರಮ ಜರುಗಿಸುವಂತೆ ಕೋರಿದ್ದಾರೆ. ರಾಜಾಜಿನಗರ ವ್ಯಾಪ್ತಿಯಲ್ಲೇ ಬರೋಬ್ಬರಿ 13 ಸಾವಿರಕ್ಕೂ ಅಧಿಕ ಕಾರ್ಡ್ ರದ್ದಾಗಿದೆ.
ರೇಷನ್ ಕಾರ್ಡ್ ರದ್ದಿಗೆ ಕಾರಣಗಳೇನು?
ಪಡಿತರ ಚೀಟಿಗಳನ್ನು (ವಿಶೇಷವಾಗಿ ಬಿಪಿಎಲ್ ಕಾರ್ಡ್‌ಗಳನ್ನು) ರದ್ದು ಮಾಡಲು ಅಥವಾ ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲು ಮುಖ್ಯ ಕಾರಣಗಳಲ್ಲಿ ಪ್ರಮುಖ ಕಾರಣ ಅನರ್ಹತೆ. ಅವುಗಳ ವಿವರ ಮುಂದಿದೆ.
* ಆದಾಯ ಮಿತಿ ಉಲ್ಲಂಘನೆ: ಬಿಪಿಎಲ್ ಕಾರ್ಡ್ ಅನ್ನು ವಾರ್ಷಿಕ ಆದಾಯ ಮಿತಿ 1.20 ಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬಕ್ಕೆ ನೀಡಲಾಗುತ್ತದೆ.
* ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿದಾರರು ಆಗಿದ್ದರೆ ಅವರ ಅರ್ಹರಲ್ಲ ಎಂದು ನಿಯಮ ಇದೆ. ಈ ನಿಯಮ ವ್ಯಾಪ್ತಿಗೆ ಒಳಪಡದವರೂ ರೇಷನ್ ಕಾರ್ಡ್ ಪಡೆದಿದ್ದನ್ನು ರದ್ದುಗೊಳಿಸಲಾಗಿದೆ.
* ಆದಾಯ ತೆರಿಗೆ/ ಜಿಎಸ್‌ಟಿ (GST) ಪಾವತಿಸುವವರು ಅನರ್ಹರು.
* ಹೆಚ್ಚುವರಿ ಆಸ್ತಿ ಹೊಂದಿರುವುದು ಅಂದರೆ, 3 ಹೆಕ್ಟೇರ್‌ಗಿಂತ (ಸುಮಾರು 7.4 ಎಕರೆ) ಹೆಚ್ಚಿನ ಕೃಷಿ ಭೂಮಿ ಹೊಂದಿದವರು ಕಾರ್ಡ್ ಹೊಂದಿದ್ದರೆ ಅಂಥಹ ಕಾರ್ಡ್‌ಗಳನ್ನು ರದ್ದುಗೊಳಿಸಲಾಗುತ್ತಿದೆ.
* ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣ ಸ್ವಂತ ಪಕ್ಕಾ ಮನೆ ಇದ್ದವರ ರೇಷನ್ ಕಾರ್ಡ್ ರದ್ದು.
* ವಾಹನಗಳ ಮಾಲೀಕತ್ವ, ವಾಣಿಜ್ಯೇತರ ವಾಹನಗಳನ್ನು ಹೊಂದಿದ್ದು, ಪಡಿತರ ಚೀಟಿ ಹೊಂದಿದ್ದರೆ ಅವುಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸಲಾಗಿದೆ.
* ಆರು ಸತತ ತಿಂಗಳುಗಳ ಕಾಲ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯದೇ ಇರುವ ಪಡಿತರ ಚೀಟಿಗಳ ವಿರುದ್ಧ ಕ್ರಮ.
* ಆಧಾರ್ ಜೋಡಣೆ, ಇ-ಕೆವೈಸಿ (e-KYC) ಯಲ್ಲಿನ ದೋಷಗಳು, ಮರಣ ಅಥವಾ ಶಾಶ್ವತ ವಲಸೆ ಹೋಗಿರುವ ಫಲಾನುಭವಿಗಳ ರೇಷನ್ ಕಾರ್ಡ್‌ಗಳ ಪತ್ತೆ ಮಾಡಿ ಸೂಕ್ತ ಕ್ರಮ
ಅನ್ನಭಾಗ್ಯ ಯೋಜನೆ ಉದ್ದೇಶವೇನು?
ಅನ್ನಭಾಗ್ಯ ಯೋಜನೆಯಡಿ ಸರ್ಕಾರ 5 ಕೆಜಿ ಅಕ್ಕಿ ಪೂರೈಸುತ್ತಿದೆ. ಭರವಸೆಯಂತೆ ಹೆಚ್ಚುವರಿ 5 ಕೆಜಿ ಅಕ್ಕಿಗೆ ಬದಲಾಗಿ 170 ರೂಪಾಯಿ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿತ್ತು. ಇತ್ತೀಚೆಗೆ ಹೆಚ್ಚುವರಿ ಅಕ್ಕಿಗೆ ನಗದು ಬದಲಾಗಿ ಇಂದಿರಾ ಆಹಾರ ಕಿಟ್ ವಿತರಣೆಗೆ ನಿರ್ಧರಿಸಲಾಗಿದೆ. ಅನರ್ಹರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ತಡೆದು, ನಿಜವಾದ ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರಿ ಯೋಜನೆ ತಲುಪಿಸುವ ಉದ್ದೇಶ ಸರ್ಕಾರ ಹೊಂದಿದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಅವರು ಸ್ಪಷ್ಟಪಡಿಸಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
Karnataka Weather: ಕಲಬುರಗಿಯಲ್ಲಿ 41ಡಿಸೆ ತಾಪಮಾನ, ಉಷ್ಣಅಲೆ ಎಚ್ಚರಿಕೆ, ಕೆಲವೆಡೆ ಮಳೆ ಸಾಧ್ಯತೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್












Click it and Unblock the Notifications