2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Posted By: Gururaj
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 30 : 2017ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಪ್ರಸಿದ್ಧ ಗಾಯಕ ಕೆ.ಜೆ.ಯೇಸುದಾಸ್ ಸೇರಿದಂತೆ 62 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ನವೆಂಬರ್ 1ರಂದು ಸಂಜೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ವಿದೇಶದಲ್ಲೂ ಕನ್ನಡದ ಬೊಂಬೆಗಳ ಸೊಬಗು ತೋರಿದ ಅನುಪಮಾ ಹೊಸಕೆರೆ

kj yesudas

ಗಾಯಕ ಕೆ.ಜೆ.ಯೇಸುದಾದ್, ಹೆಚ್.ಎನ್.ನಾಗಮೋಹನ ದಾಸ್, ಡಾ.ವೈದೇಹಿ, ಡಿ.ಎಸ್.ನಾಗಭೂಷಣ, ಮುಖ್ಯಮಂತ್ರಿ ಚಂದ್ರು ಸೇರಿದಂತೆ 62 ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ....

ರಾಜ್ಯೋತ್ಸವಕ್ಕೆ 'ಸ್ವಲ್ಪ ಕನ್ನಡ ಬರುತ್ತೆ' ವಾಟ್ಸ್ ಅಪ್ ಗ್ರೂಪ್

ಕ್ಷೇತ್ರ ಹೆಸರು ಜಿಲ್ಲೆ
ನ್ಯಾಯಾಂಗ ಹೆಚ್.ಎನ್.ನಾಗಮೋಹನ ದಾಸ್ ಕೋಲಾರ
ಸಾಹಿತ್ಯ ಡಾ.ಬಸವರಾಜ ಸಬರದ ಕಲಬುರಗಿ

ಡಾ.ವೈದೇಹಿ ಉಡುಪಿ

ಮಾಹೆರ್ ಮನ್ಸೂರ್ ತುಮಕೂರು

ಡಿ.ಎಸ್.ನಾಗಭೂಷಣ ಶಿವಮೊಗ್ಗ
ಸಿನಿಮಾ-ಕಿರುತೆರೆ ಡಾ.ಕೆ.ಜೆ.ಯೇಸುದಾಸ್ ಚೆನ್ನೈ

ಕಾಂಚನ ಬೆಂಗಳೂರು

ಮುಖ್ಯಮಂತ್ರಿ ಚಂದ್ರು ಬೆಂಗಳೂರು

ಹಾಸನ ರಘು ರಾಮನಗರ
ಸಂಗೀತ-ನೃತ್ಯ ವಿದೂಷಿ ಲಲಿತ.ಜೆ.ರಾವ್ (ಹಿಂದೂಸ್ತಾನಿ ಸಂಗೀತ) ಬೆಂಗಳೂರು

ಪಂ.ರಾಜಪ್ರಭು ಧೋತ್ರೆ (ಅಭಂಗ ಗಾಯನ) ಬೆಳಗಾವಿ

ರಾಜೇಂದ್ರ ಸಿಂಗ್ ಪವಾರ್ (ಹಾರ್ಮೋನಿಯಂ) ಬೀದರ್

ವೀರೇಶ ಕಿತ್ತೂರ (ಸುಗಮ ಸಂಗೀತ) ಗದಗ

ಉಳ್ಳಾಲ ಮೋಹನ ಕುಮಾರ್ (ನೃತ್ಯ) ದಕ್ಷಿಣ ಕನ್ನಡ
ಜಾನಪದ ತಂಬೂರಿ ಜವರಯ್ಯ (ತತ್ವಪದ) ಮಂಡ್ಯ

ಶಾವಮ್ಮ (ಲಂಬಾಣಿ ನೃತ್ಯ ) ಕೊಪ್ಪಳ

ಗೊರವರ ಮೈಲಾರಪ್ಪ (ಗೊರವರ ಕುಣಿತ) ಚಿತ್ರದುರ್ಗ

ತಾಯಮ್ಮ (ಸೋಬಾನೆ ಪದ) ಚಿಕ್ಕಮಗಳೂರು

ಮಾನಪ್ಪ ಈರಪ್ಪ ಲೋಹಾರ (ಪುರವಂತಿಕೆ) ಬಾಗಲಕೋಟೆ

ಕೃಷ್ಣಪ್ಪ ಗೋವಿಂದಪ್ಪ ಪುರಂದರ ( ಡೊಳ್ಳಿನ ಪದ) ಹಾವೇರಿ

ಡೆಂಗೆಮ್ಮ ಕರಡಿಗುಡ್ಡ (ಜಾನಪದ ಗಾಯನ) ರಾಯಚೂರು
ಯಕ್ಷಗಾನ-ಬಯಲಾಟ ಶಿವರಾಮ ಜೋಗಿ (ತೆಂಕುತಿಟ್ಟು) ದಕ್ಷಿಣ ಕನ್ನಡ

ಬಳ್ಕೂರು ಕೃಷ್ಣಯಾಜಿ (ಬಡಗುತಿಟ್ಟು) ಉತ್ತರ ಕನ್ನಡ

ಕೆ.ಪಂಪಾವತಿ (ಬಯಲಾಟ) ಬಳ್ಳಾರಿ

ಈಶ್ವರವ್ವ ಹುಚ್ಚವ್ವ ಮಾದರ (ಬಯಲಾಟ) ವಿಜಯಪುರ
ಸಮಾಜ ಸೇವೆ ಮೀರಾ ನಾಯಕ್ ಮೈಸೂರು

ಡಾ.ರವೀಂದ್ರನಾಥ ಶಾನುಭಾಗ್ ಉಡುಪಿ

ಲೆಫ್ಟಿನೆಂಟ್ ಜನರಲ್ ರಮೇಶ್ ಹಲ್ಗಲಿ ಬಾಗಲಕೋಟೆ
ವಿಜ್ಞಾನ-ತಂತ್ರಜ್ಞಾನ ಡಾ.ಎಂ.ಆರ್.ಶ್ರೀನಿವಾಸನ್ (ಅಣುಶಕ್ತಿ ಸಂಶೋಧನೆ) ಬೆಂಗಳೂರು

ಡಾ.ಮುನಿವೆಂಕಟಪ್ಪ ನಂಜಪ್ಪ (ಸಸ್ಯಶಾಸ್ತ್ರ ಸಂಶೋಧನೆ) ಕೋಲಾರ
ವೈದ್ಯಕೀಯ ಡಾ.ಲೀಲಾವತಿ ದೇವದಾಸ್ ಬೆಂಗಳೂರು
ಕ್ರೀಡೆ ಶೇಖರ್ ನಾಯಕ್ (ಅಂಧರ ಕ್ರಿಕೆಟ್ ) ಶಿವಮೊಗ್ಗ

ವಿ.ಆರ್.ರಘುನಾಥ್ (ಹಾಕಿ) ಕೊಡಗು

ಸಹನಾ ಕುಮಾರಿ (ಎತ್ತರ ಜಿಗಿತ) ದಕ್ಷಿಣ ಕನ್ನಡ
ಶಿಕ್ಷಣ ಡಾ.ಪಿ.ಶ್ಯಾಮರಾಜು ಬೆಂಗಳೂರು
ಇಂಜಿನಿಯರಿಂಗ್ ಬಿ.ಎ.ರೆಡ್ಡಿ ಬೆಳಗಾವಿ
ಹೊರನಾಡು ರೋನಾಲ್ಡ್ ಕೊಲಾಸೋ ದುಬೈ
ಸಂಘ ಸಂಸ್ಥೆ ನಾಗನೂರು ವಚನ ಅಧ್ಯಯನ ಕೇಂದ್ರ ಹಾಗೂ ಪ್ರಕಾಶನ ಬೆಳಗಾವಿ
ಸಂಕೀರ್ಣ ರಾಮಚಂದ್ರ ಗುಹಾ (ಇತಿಹಾಸಕಾರ-ಚಿಂತಕ) ಬೆಂಗಳೂರು

ಎಸ್.ಸಯ್ಯದ್ ಅಹಮದ್ (ಪರ್ಷಿಯನ್ ಭಾಷಾ ತಜ್ಞ) ಬೆಂಗಳೂರು

ಎಚ್.ಬಿ.ಮಂಜುನಾಥ್ (ವ್ಯಂಗ್ಯಚಿತ್ರ) ದಾವಣಗೆರೆ

ಡಾ.ಪಿ.ಕೆ.ರಾಜಶೇಖರ್ (ಜಾನಪದ ತಜ್ಞ) ಮೈಸೂರು

ಪ್ರೊ.ಬಿ.ಗಂಗಾಧರಮೂರ್ತಿ (ಕಲೆ-ಶಿಕ್ಷಣ) ಚಿಕ್ಕಬಳ್ಳಾಪುರ
ಚಿತ್ರಕಲೆ-ಶಿಲ್ಪಕಲೆ ಜಿ.ಎಲ್.ಎನ್. ಸಿಂಹ (ಚಿತ್ರಕಲೆ) ಮೈಸೂರು

ಶಾಣಮ್ಮ ಮ್ಯಾಗೇರಿ (ಕೌದಿ ಕಲೆ) ಯಾದಗಿರಿ

ಹೊನ್ನಪ್ಪಾಚಾರ್ಯ ( ಶಿಲ್ಪ ಕಲೆ) ಬೆಂಗಳೂರು

ಮನೋಹರ ಕೆ.ಪತ್ತಾರ (ಚಿತ್ರ-ಶಿಲ್ಪ) ವಿಜಯಪುರ
ಕೃಷಿ-ಪರಿಸರ ಡಾ.ಬಿಸಲಯ್ಯ ಚಾಮರಾಜನಗರ

ಅಬ್ದುಲ್ ಖಾದರ ಇಮಾಮ ಸಾಬ ಧಾರವಾಡ

ಎಸ್.ಎಂ.ಕೃಷ್ಣಪ್ಪ ಬೆಂಗಳೂರು ಗ್ರಾಮಾಂತರ

ಸಿ.ಯತಿರಾಜು ತುಮಕೂರು
ಮಾಧ್ಯಮ ಕುಸುಮಾ ಶಾನುಭಾಗ್ ಕೊಡಗು

ಎ.ಸಿ.ರಾಜಶೇಖರ್ ರಾಮನಗರ

ವಿಠ್ಠಪ್ಪ ಗೋರಂಟ್ಲಿ ಕೊಪ್ಪಳ

ರಾಮದೇವ ರಾಕೆ ಮಂಡ್ಯ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government announced the list of 62 Rajyotsava award winners for the year 2017 on Monday, October 30th evening. 2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ