ಉತ್ತರ ಕರ್ನಾಟಕದ ರೊಟ್ಟಿ ಚನ್ನ, ದಕ್ಷಿಣದ ಮುದ್ದೆಯೂ ಚನ್ನ... ಪಿಜ್ಜಾ & ಬರ್ಗರ್ ಬಿಟ್ಟು... Karnataka Rajyotsava
ಕನ್ನಡ ನಾಡು ಹಲವು ಸಂಸ್ಕೃತಿಗಳು ಒಗ್ಗೂಡಿ ಆಗಿರುವ ಪ್ರದೇಶ. ಕನ್ನಡ ನೆಲದಲ್ಲಿ ನೂರಾರು ರೀತಿಯ ಸಂಸ್ಕೃತಿಗಳು ಇದ್ದು, ಕರ್ನಾಟಕ ತನ್ನದೇ ಆದ ವಿಶೇಷ ಆಹಾರಗಳನ್ನ ಕೂಡ ಹೊಂದಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಫೇಮಸ್ ಆಗಿದ್ದರೆ & ದಕ್ಷಿಣದಲ್ಲಿ ರಾಗಿ ಮುದ್ದೆ ಸಖತ್ ಫೇಮಸ್. ಹೀಗೆ ಈ ಎರಡೂ ಆಹಾರಗಳು ದೇಹಕ್ಕೆ ತುಂಬಾ ಉಪಯುಕ್ತವಾಗಿವೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಕೂಡ ಜೋಳದ ರೊಟ್ಟಿ ಹಾಗೂ ರಾಗಿ ಮುದ್ದೆ ತಿಂದು ಭಾರಿ ಗಟ್ಟಿಮುಟ್ಟಾಗಿ ಇದ್ದರು. ಆದರೆ ಈಗ ಪಿಜ್ಜಾ & ಬರ್ಗರ್ ಕಾಟ ಜೋರಾಗಿದೆ...
ಜಗತ್ತಿನ ಎಲ್ಲಾ ಭಾಷೆಗಳ ರಾಣಿ 'ಕನ್ನಡ', ಹೀಗಾಗಿ ಕನ್ನಡವನ್ನ ಜಗತ್ತಿನ ಸುಂದರ ಭಾಷೆ ಎಂದು ಕರೆಯುತ್ತಾರೆ. ಹಾಗೇ ಕನ್ನಡ ಭಾಷೆಗೆ 5000 ವರ್ಷ ಇತಿಹಾಸ ಕೂಡ ಇದ್ದು, ಕರ್ನಾಟಕ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕನ್ನಡ ಭಾಷೆಯನ್ನು ಕೋಟಿ ಕೋಟಿ ಜನರು ಕಲಿಯುತ್ತಿದ್ದಾರೆ. ಇದರ ಜೊತೆಗೆ ಮತ್ತೊಂದು ವಿಶೇಷತೆ ಕೂಡ ಇದೆ, ಅದು ಏನೆಂದರೆ ನಮ್ಮ ಕನ್ನಡ ನಾಡಿನಲ್ಲಿ ವಿಶೇಷ ಆಹಾರಗಳು ಕೂಡ ಇವೆ. ಹಾಗಾದ್ರೆ ಯಾವೆಲ್ಲಾ ಆಹಾರಗಳು ಫೇಮಸ್?

ಉತ್ತರ ಕರ್ನಾಟಕದ ರೊಟ್ಟಿ & ದಕ್ಷಿಣದ ಮುದ್ದೆ...
ಹೌದು, ಮೊದಲೇ ಹೇಳಿದಂತೆ ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ ಫೇಮಸ್ ಆಗಿದ್ದರೆ & ದಕ್ಷಿಣದಲ್ಲಿ ರಾಗಿ ಮುದ್ದೆ ಬಳಕೆ ಹೆಚ್ಚು. ಹೀಗೆ ಎರಡೂ ಧಾನ್ಯಗಳು ದೇಹಕ್ಕೆ ಶಕ್ತಿ ನೀಡುವುದು ಹಾಗೂ ನಮ್ಮ ದೇಹದ ಕಲ್ಮಶಗಳನ್ನು ಹೊರಗೆ ಹಾಕುವ ಕೆಲಸ ಮಾಡುತ್ತವೆ. ಹೀಗಾಗಿ ಕನ್ನಡ ನಾಡಿನ ಜನರು ಹೆಚ್ಚಾಗಿ ಈ ಎರಡೂ ಧಾನ್ಯ ಬಳಕೆ ಮಾಡುತ್ತಾರೆ. ಆದರೆ ಆಧುನಿಕ ಕಾಲದಲ್ಲಿ ಭಾರಿ ದೊಡ್ಡ ಎಡವಟ್ಟು ಆಗುತ್ತಿದ್ದು, ಪಿಜ್ಜಾ & ಬರ್ಗರ್ ಸೇರಿದಂತೆ ಫಾಸ್ಟ್ ಫುಡ್ ಹಾವಳಿಯೇ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ...












Click it and Unblock the Notifications