ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಷತ್, ರಾಜ್ಯಸಭೆ ಕಣದಲ್ಲಿ ಕರೋಡ್ ಪತಿಗಳು

|
Google Oneindia Kannada News

ಬೆಂಗಳೂರು, ಜೂ.9 : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳು ಕರೋಡ್ ಪತಿಗಳಾಗಿದ್ದಾರೆ. ಆದರೆ, ಕಾಂಗ್ರೆಸ್ ನಿಂದ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜಯಮ್ಮ ಬಾಲರಾಜ್ ಮಾತ್ರ ಲಕ್ಷಾಧೀಶೆಯಾಗಿದ್ದಾರೆ.

ರಾಜ್ಯಸಭೆ ಚುನಾವಣೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕುಪೇಂದ್ರ ರೆಡ್ಡಿ ಅವರು 456 ಕೋಟಿ ಒಡೆಯರು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಭಾಕರ ಬಿ.ಕೋರೆ 36.77 ಕೋಟಿ ರೂ. ಒಡೆಯರಾಗಿದ್ದಾರೆ. ಸೋಮವಾರ ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್ ಮತ್ತು ರಾಜೀವ್ ಗೌಡ ನಾಪತ್ರ ಸಲ್ಲಿಸಿದ್ದಾರೆ. [ರಾಜ್ಯಸಭೆಗೆ ಸದಸ್ಯರನ್ನು ಹೇಗೆ ಆಯ್ಕೆ ಮಾಡಲಾಗುತ್ತದೆ?]

ಇನ್ನು ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರ ಆಸ್ತಿ ಮೌಲ್ಯ 7.16 ಕೋಟಿ ರೂಪಾಯಿಗಳು. ಜೆಡಿಎಸ್ ಮತ್ತು ಬಿಜೆಪಿ ಬೆಂಬಲದೊಂದಿಗೆ ಪರಿಷತ್ ಪ್ರವೇಶಿಸಲು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಯು.ಬಿ.ಮಲ್ಲಿಕಾರ್ಜುನ ಅವರು 287.88 ಕೋಟಿ ರೂ. ಒಡೆಯರು. ಟ.ಎ.ಶರವಣ 20 ಕೋಟಿ ಒಡೆಯರಾಗಿದ್ದರೆ, ಬೋಸರಾಜ್ ಅವರು 6 ಕೋಟಿ ಆಸ್ತಿ ಹೊಂದಿದ್ದಾರೆ. ಎಲ್ಲಾ ಅಭ್ಯರ್ಥಿಗಳ ಆಸ್ತಿ ವಿವರಗಳು ಇಲ್ಲಿವೆ.

ಟಿ.ಎ.ಶರವಣ ಬಳಿ 20 ಕೋಟಿ ಆಸ್ತಿ

ಟಿ.ಎ.ಶರವಣ ಬಳಿ 20 ಕೋಟಿ ಆಸ್ತಿ

ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಟಿ.ಎ.ಶರವಣ ಅವರು ಒಟ್ಟು ಆಸ್ತಿ 19.93 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ.

* ಶರವಣ 6.31 ಕೋಟಿ ರೂ. ಚರಾಸ್ತಿ, 5.60 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
* ಪತ್ನಿ ಶೀಲಾದೇವಿ 3.22 ಕೋಟಿ ರೂ. ಚರಾಸ್ತಿ, 4.80 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
* ಶ್ರೀ ಸಾಯಿ ಗೋಲ್ಡ್‌ ಪ್ರೊಡಕ್ಷನ್‌, ಶ್ರೀ ಸಾಯಿ ಪ್ರಾಪರ್ಟಿಸ್‌, ಶ್ರೀ ಸಾಯಿ ಲ್ಯಾಂಡ್‌ ಡೆವಲಪರ್, ಶ್ರೀ ಸಾಯಿ ಗೋಲ್ಡ್‌ ಪ್ಯಾಲೇಸ್‌ನಲ್ಲಿ ಶರವಣ ಅವರು ಪಾಲುದಾರಿಕೆ ಹೊಂದಿದ್ದಾರೆ.

ಜಯಮ್ಮ ಅವರು ಕೋಟ್ಯಾಧಿಪತಿಗಳಲ್ಲ

ಜಯಮ್ಮ ಅವರು ಕೋಟ್ಯಾಧಿಪತಿಗಳಲ್ಲ

ವಿಧಾನಪರಿಷತ್ತಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸದಸ್ಯೆ ಜಯಮ್ಮ ಬಾಲರಾಜ್ ಅವರು ಕೋಟ್ಯಾಧಿಪತಿಗಳಲ್ಲ. ಜಯಮ್ಮ ಅವರು, 3.75 ಲಕ್ಷ ಚರಾಸ್ತಿ ಹೊಂದಿದ್ದು, ಸ್ಥಿರಾಸ್ತಿಯನ್ನು ಹೊಂದಿಲ್ಲ. ಪತಿ ಬಾಲರಾಜ್‌ ಅವರು 1 ಲಕ್ಷ ರೂ. ಚರಾಸ್ತಿ, 26 ಲಕ್ಷ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಜಯಮ್ಮ ಅವರು 70 ಸಾವಿರ ನಗದು, 200 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ ಆಭರಣ ಹೊಂದಿದ್ದಾರೆ. ಪತಿ ಬಾಲರಾಜ್‌ ಅವರು 1 ಲಕ್ಷ ರೂ. ನಗದು, ಚಿತ್ರದುರ್ಗದ ಚಳ್ಳಕೆರೆಯ ಗೊಲ್ಲರ ಹಟ್ಟಿಯಲ್ಲಿ 22 ಲಕ್ಷ ರೂ. ಮೌಲ್ಯದ 2 ನಿವೇಶನ ಹೊಂದಿದ್ದಾರೆ.

ಬೋಸರಾಜ್ 6 ಕೋಟಿ ಒಡೆಯರು

ಬೋಸರಾಜ್ 6 ಕೋಟಿ ಒಡೆಯರು

ವಿಧಾನಪರಿಷತ್‌ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎನ್‌.ಎಸ್‌.ಬೋಸರಾಜ್‌ ಅವರು 9.99 ಲಕ್ಷ ರೂ. ಚರಾಸ್ತಿ, 5.10 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

* ಪತ್ನಿ ಕೃಷ್ಣದೇವಿ ಅವರ ಹೆಸರಿನಲ್ಲಿ 20.97 ಲಕ್ಷ ರೂ. ಚರಾಸ್ತಿ, 1.10 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಇಬ್ಬರೂ 28 ಲಕ್ಷ ರೂ. ಸಾಲ ಪಡೆದಿದ್ದಾರೆ.
* ಮಾನ್ವಿ, ಕಾತರಕಿ, ಬೆಂಗಳೂರು, ತಮಿಳುನಾಡು, ರಾಯಚೂರಿನಲ್ಲಿ ಬೋಸರಾಜ್‌ ಕೃಷಿ ಜಮೀನು ಹಾಗೂ ಮನೆಗಳನ್ನು ಹೊಂದಿದ್ದಾರೆ. ಪತ್ನಿ ಬಳಿ ರಾಜ್ಯದ ವಿವಿಧೆಡೆ ಕೃಷಿ ಭೂಮಿ ಹಾಗೂ 621 ಗ್ರಾಂ ಚಿನ್ನವಿದೆ.

ಬಿಕೆ ಹರಿಪ್ರಸಾದ್ 6 ಕೋಟಿ ಆಸ್ತಿ ಒಡೆಯರು

ಬಿಕೆ ಹರಿಪ್ರಸಾದ್ 6 ಕೋಟಿ ಆಸ್ತಿ ಒಡೆಯರು

ರಾಜ್ಯಸಭೆಗೆ ಮರುಆಯ್ಕೆ ಬಯಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್‌ ಅವರು 3.19 ಕೋಟಿ ರೂ. ಹಾಗೂ ಪತ್ನಿ ಉಷಾ 2.62 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂದು ನಾಮಪತ್ರ ಸಲ್ಲಿಸುವಾಗ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

* ಹರಿಪ್ರಸಾದ್‌ 19.88 ಲಕ್ಷ ರೂ. ಚರಾಸ್ತಿ, 3 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
* ಆರ್‌ಟಿ ನಗರದಲ್ಲಿ 3 ಕೋಟಿ ರೂ. ಮೊತ್ತದ 4 ಸಾವಿರ ಚದರಡಿ ವಾಣಿಜ್ಯ ನಿವೇಶನ ಹಾಗೂ ಸಂಕೀರ್ಣ ಹೊಂದಿದ್ದಾರೆ.
* ಪತ್ನಿ ಉಷಾ ಮಲ್ಲೇಶ್ವರಂನಲ್ಲಿ 2.2 ಕೋಟಿ ರೂ. ಮೌಲ್ಯದ 2700 ಚದರಡಿ ಮನೆ ಹೊಂದಿದ್ದಾರೆ.

ಡಾ.ಪರಮೇಶ್ವರ್ ಬಳಿ ಸಾಲವೇ ಹೆಚ್ಚು

ಡಾ.ಪರಮೇಶ್ವರ್ ಬಳಿ ಸಾಲವೇ ಹೆಚ್ಚು

ವಿಧಾನಷರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಬಳಿ ಆಸ್ತಿಗಿಂತ ಸಾಲವೇ ಹೆಚ್ಚಾಗಿದೆ.

*ಪರಮೇಶ್ವರ್ ಅವರು3.11 ಕೋಟಿ ರೂ.ಚರಾಸ್ತಿ, 4 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.

* ಪತ್ನಿ ಕೆ.ಪರಮೇಶ್ವರಿ ಅವರು 1.14 ಕೋಟಿ ರೂ.ಚರಾಸ್ತಿ, 4 ಕೋಟಿ ರೂ.ಸ್ಥಿರಾಸ್ತಿ ಹೊಂದಿದ್ದಾರೆ.

* ಇಬ್ಬರು ಒಟ್ಟಾಗಿ 7.17 ಕೋಟಿ ಸಾಲ ಪಡೆದಿದ್ದಾರೆ. ಪರಮೇಶ್ವರಿ ಅವರು ಪತಿಗೆ 71 ಲಕ್ಷ ರೂ. ಸಾಲ ನೀಡಿದ್ದಾರೆ.

ರಾಜೀವ್‌ ಗೌಡ ಆಸ್ತಿ 50 ಕೋಟಿ!

ರಾಜೀವ್‌ ಗೌಡ ಆಸ್ತಿ 50 ಕೋಟಿ!

ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಐಐಎಂ ಪ್ರಾಧ್ಯಾಪಕ ರಾಜೀವ್ ಗೌಡ ಅವರ ಆಸ್ತಿ 50 ಕೋಟಿ ಎಂದು ನಾಮಪತ್ರ ಸಲ್ಲಿಸುವಾಗ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ. ಇದರಲ್ಲಿ ರಾಜೀವ್‌ಗೌಡ ಅವರು 13.7 ಕೋಟಿ ರೂ. ಆಸ್ತಿ ಹಾಗೂ ಪತ್ನಿ ಶರ್ಮಿಳಾ ಅವರು 35.9 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

* ರಾಜೀವ್‌ಗೌಡ ಅವರು 1.54 ಕೋಟಿ ರೂ. ಚರಾಸ್ತಿ, 12.15 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ.
* ರಾಜಮಹಲ್‌ ವಿಲಾಸ ಬಡಾವಣೆಯಲ್ಲಿ 4 ಕೋಟಿ ರೂ. ಮೌಲ್ಯದ 4 ಸಾವಿರ ಚದರಡಿ ನಿವೇಶನ, ವರ್ತೂರಿನಲ್ಲಿ 8321 ಚದರಡಿ ನಿವೇಶನ, ಚರ್ಚ್‌ ಸ್ಟ್ರೀಟ್‌ನಲ್ಲಿ 3150 ಚದರಡಿ ವಾಣಿಜ್ಯ ನಿವೇಶದ ಪಾಲುದಾರಿಕೆ ಹೊಂದಿದ್ದಾರೆ.

ಕುಪೇಂದ್ರ ರೆಡ್ಡಿ 456 ಕೋಟಿ ಒಡೆಯ

ಕುಪೇಂದ್ರ ರೆಡ್ಡಿ 456 ಕೋಟಿ ಒಡೆಯ

ರಾಜ್ಯಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಡಿ. ಕುಪೇಂದ್ರ ರೆಡ್ಡಿ ಅವರ ಒಟ್ಟು ಆಸ್ತಿ 456.72 ಕೋಟಿ ರೂ. ತಮ್ಮ ಹೆಸರಲ್ಲಿ 126.90 ಕೋಟಿ ರೂ. ಚರಾಸ್ತಿ ಹಾಗೂ 217.12 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ನಾಮಪತ್ರದ ಅವರು ಆಸ್ತಿ ವಿವರ ಸಲ್ಲಿಸಿದ್ದಾರೆ.

* ಕುಪೇಂದ್ರ ರೆಡ್ಡಿ ಅವರ ಪತ್ನಿ ಪುಷ್ಪಾವತಿ ಹೆಸರಲ್ಲಿ 4.02 ಕೋಟಿ ರೂ. ಚರಾಸ್ತಿ ಹಾಗೂ ನೂರು ಕೋಟಿ ರೂ.ನಷ್ಟು ಸ್ಥಿರಾಸ್ತಿ ಇದೆ. ಮಕ್ಕಳಾದ ಗಾಯತ್ರಿ, ಲಿಖೀತಾ ಮತ್ತು ಶಿರೀಷ್‌ ಹೆಸರಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಸೇರಿ ಕ್ರಮವಾಗಿ 4.85 ಕೋಟಿ ರೂ., 21.31 ಕೋಟಿ ಹಾಗೂ 1.85 ಕೋಟಿ ಮೌಲ್ಯದ ಆಸ್ತಿ ಇದೆ.

* ಕುಪೇಂದ್ರ ರೆಡ್ಡಿ ಅವರ ಹೆಸರಲ್ಲಿ ವಿವಿಧ ಬ್ಯಾಂಕ್‌ ಗಳಲ್ಲಿ 91.76 ಕೋಟಿ ಹಾಗೂ ಪತ್ನಿ ಪುಷ್ಪಾವತಿ ಹೆಸರಲ್ಲಿ 5.72 ಕೋಟಿ ಸಾಲ ಇದೆ.

 ಕೆ.ಎಸ್.ಈಶ್ವರಪ್ಪ ಆಸ್ತಿ ವಿವರಗಳು ಇಲ್ಲಿವೆ

ಕೆ.ಎಸ್.ಈಶ್ವರಪ್ಪ ಆಸ್ತಿ ವಿವರಗಳು ಇಲ್ಲಿವೆ

ವಿಧಾನಸಭೆಯಿಂದ ವಿಧಾನಪರಿಷತ್ತಿನಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಒಟ್ಟು ಆಸ್ತಿ ಮೌಲ್ಯ 7.16 ಕೋಟಿ ರೂ. ಎಂದು ನಾಮಪತ್ರ ಸಲ್ಲಿಸುವಾಗ ತಿಳಿಸಿದ್ದಾರೆ.

* ಈಶ್ವರಪ್ಪ ಅವರು 1.18 ಕೋಟಿ ರೂ. ಮೌಲ್ಯದ ಚರ ಹಾಗೂ 5.98 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿಯಲ್ಲಿ 2.03 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿ ಇದ್ದು, ಅದರ ಅಭಿವೃದ್ಧಿಗೆ 72 ಲಕ್ಷ ರೂ. ವೆಚ್ಚ ಮಾಡಿದ್ದಾರೆ.

* ಅದೇ ರೀತಿ 20 ಲಕ್ಷ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ತಮಗಿದೆ ಎಂದು ಈಶ್ವರಪ್ಪ ಅಫಿಡೆವಿಟ್ ಸಲ್ಲಿಸಿದ್ದಾರೆ. ಈಶ್ವರಪ್ಪ 55.98 ಲಕ್ಷ ರೂ. ಸಾಲ ಮಾಡಿದ್ದು, 66.50 ಲಕ್ಷ ರೂ.ವನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಾಗಿದೆ.

* ಕೆ.ಎಸ್.ಈಶ್ವರಪ್ಪ ಅವರ ಪತ್ನಿ 2.06 ಕೋಟಿ ಆಸ್ತಿ ಒಡೆಯರಾಗಿದ್ದು 1.91 ಕೋಟಿ ರೂ. ಚರ ಮತ್ತು 14.62 ಲಕ್ಷ ರೂ. ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. 63.59 ಲಕ್ಷ ರೂ. ಸಾಲವನ್ನು ಇವರ ಕಟ್ಟಬೇಕಾಗಿದ್ದು, ಸರ್ಕಾರಕ್ಕೆ 4.21 ಲಕ್ಷ ರೂ. ಬಾಕಿ ಕಟ್ಟಬೇಕಾಗಿದೆ.

ಪ್ರಭಾಕರ ಕೋರೆ ಅವರಿಗಿಂತ ಪತ್ನಿ ಶ್ರೀಮಂತೆ

ಪ್ರಭಾಕರ ಕೋರೆ ಅವರಿಗಿಂತ ಪತ್ನಿ ಶ್ರೀಮಂತೆ

ಬಿಜೆಪಿ ಅಭ್ಯರ್ಥಿಯಾಗಿ ರಾಜ್ಯಸಭೆಗೆ ಮರು ಆಯ್ಕೆ ಬಯಸಿರುವ ಪ್ರಭಾಕರ ಕೋರೆ ಅವರು ಅವರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ಕೋರೆ ಮತ್ತು ಅವರ ಪತ್ನಿ ಸೇರಿ ಒಟ್ಟು 36.77 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ.

* ಪ್ರಭಾಕರ ಬಿ. ಕೋರೆ ಹೆಸರಲ್ಲಿ 17.41 ಕೋಟಿ ಸ್ಥಿರ ಮತ್ತು ಚರ ಆಸ್ತಿ ಇದ್ದರೆ, ಅವರ ಪತ್ನಿ ಆಶಾ ಪಿ. ಕೋರೆ ಹೆಸರಲ್ಲಿ 19.36 ಕೋಟಿ ರೂ. ಆಸ್ತಿ ಇದೆ.

* ಪ್ರಮಾಣ ಪ್ರತ್ರದ ಪ್ರಕಾರ ಕೋರೆ ಹೆಸರಲ್ಲಿ 10.18 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. 82.45 ಲಕ್ಷ ರೂ. ಸ್ಥಿರಾಸ್ತಿ ಇದ್ದು, ಅದರ ಅಭಿವೃದ್ಧಿಗೆ 42 ಲಕ್ಷ ರೂ. ವೆಚ್ಚ ಮಾಡಿದ್ದಾರೆ. 4.06 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಮತ್ತು 1.93 ಕೋಟಿ ಮೌಲ್ಯದ ಇತರೆ ಆಸ್ತಿ ಹೊಂದಿದ್ದಾರೆ. ಅಲ್ಲದೆ 5.03 ಕೋಟಿ ರೂ. ಸಾಲ ಮಾಡಿದ್ದಾರೆ. ಬ್ಯಾಂಕ್‌ ಖಾತೆಯಲ್ಲಿ 24.35 ಲಕ್ಷ ರೂ. ಇದೆ.

* ಆಶಾ ಕೋರೆ ಅವರು 7.74 ಕೋಟಿ ರೂ. ಮೌಲ್ಯದ ಚರಾಸ್ತಿ, 1.82 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇದರ ಅಭಿವೃದ್ಧಿಗೆ 40 ಲಕ್ಷ ರೂ. ವೆಚ್ಚ ಮಾಡಿದ್ದಾರೆ. 9.04 ಕೋಟಿ ರೂ. ಸ್ವಯಾರ್ಜಿತ ಆಸ್ತಿ ಇದ್ದು, ಇತರೆ ಆಸ್ತಿ ಮೌಲ್ಯ 35 ಲಕ್ಷ ರೂ ಆಗಿದೆ. ಬ್ಯಾಂಕ್‌ ಖಾತೆಯಲ್ಲಿ 55.90 ಲಕ್ಷ ರೂ. ಇದೆ.

ಯು.ಬಿ.ಮಲ್ಲಿಕಾರ್ಜುನ ಬಳಿ 287.88 ಕೋಟಿ ಆಸ್ತಿ

ಯು.ಬಿ.ಮಲ್ಲಿಕಾರ್ಜುನ ಬಳಿ 287.88 ಕೋಟಿ ಆಸ್ತಿ

ಬಿಜೆಪಿ ಮತ್ತು ಜೆಡಿಎಸ್ ಬೆಂಬಲದೊಂದಿಗೆ ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಯು.ಬಿ.ಮಲ್ಲಿಕಾರ್ಜುನ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 287.88 ಕೋಟಿ ರೂ. ಎಂದು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

* ಪ್ರಮಾಣ ಪತ್ರದ ಪ್ರಕಾರ ಮಲ್ಲಿಕಾರ್ಜುನ ಹೆಸರಿನಲ್ಲಿ 261.12 ಕೋಟಿ ರೂ., ಪತ್ನಿ ಗೌರಿ ಮಲ್ಲಿಕಾರ್ಜುನ ಹೆಸರಿನಲ್ಲಿ 26.82 ಕೋಟಿ ರೂ., ಮಕ್ಕಳಾದ ಲಾಸ್ಯ ಡಿ.ಎಂ. ಹೆಸರಿನಲ್ಲಿ 84.64 ಲಕ್ಷ ರೂ. ಹಾಗೂ ನಿತ್ಯಾ ಡಿ.ಎಂ. ಹೆಸರಿನಲ್ಲಿ 84.27 ಲಕ್ಷ ರೂ. ಮೌಲ್ಯದ ಆಸ್ತಿ ಇದೆ.

* ಮಲ್ಲಿಕಾರ್ಜುನ ಅವರ ಹೆಸರಿನಲ್ಲಿ 84.59 ಕೋಟಿ ಮೌಲ್ಯದ ಚರಾಸ್ತಿ, 177.62 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಬ್ಯಾಂಕ್‌ ಖಾತೆಯಲ್ಲಿ 1.31 ಕೋಟಿ ಇದೆ. ಅಲ್ಲದೆ, 63.82 ಕೋಟಿ ಸಾಲವಿದೆ.

* ಪತ್ನಿ ಗೌರಿ ಮಲ್ಲಿಕಾರ್ಜುನ ಹೆಸರಿನಲ್ಲಿ 1.69 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 25.82 ಕೋಟಿ ಮೌಲ್ಯದ ಸ್ಥಿರಾಸ್ತಿ ಇದ್ದು, ಬ್ಯಾಂಕ್‌ ಖಾತೆಯಲ್ಲಿ 5.07 ಲಕ್ಷ ರೂ ಇದೆ. ಇವರ ಹೆಸರಿನಲ್ಲೂ 2.65 ಲಕ್ಷ ರೂ. ಸಾಲವಿದೆ.

English summary
Janata Dal(S) candidate Kupendra Reddy, BJP candidate Prabhakar Kore, KS Eshwarappa and D.U.Mallikarjuna field nomination for Legislative Council and Rajya Sabha polls. Here is a candidates assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X