Karnataka Rains: ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ಕೆಲವೇ ಕ್ಷಣಗಳಲ್ಲಿ ಸುರಿಯಲಿದೆ ಅಬ್ಬರದ ಮಳೆ: IMD ಎಚ್ಚರಿಕೆ ಸಂದೇಶ
Karnataka Rains: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟ ಮುಂದುವರೆಸಿ ಅನಾಹುತಗಳನ್ನೇ ಸೃಷ್ಟಿಸಿದ್ದಾನೆ. ಇನ್ನೂ ಕೆಲವೆಡೆ ಸಾಧಾರಣ ಮಳೆಯಾಗುತ್ತಿದ್ದು, ಇದರಿಂದ ರೈತರು ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಗಿದೆ. ಅಲ್ಲದೆ, ಕೆಲ ಕಡೆಗಳಲ್ಲಿ ಅದೇ ಆಡಿದ್ದ ಆಟ ಎಂಬಂತೆ ಬಿಸಿಲಿ ವಾತಾವರಣ ಮುಂದುವರೆದಿದೆ. ಇನ್ನು ಇಂದು (ಜೂನ್ 29) ಕೆಲವೇ ಕ್ಷಣಗಳಲ್ಲಿ ರಾಜ್ಯದ ಈ ಭಾಗಗಳಲ್ಲಿ ಮಾತ್ರ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ರಾಜ್ಯ ರಾಜಧಾನಿ ಬೆಂಗಳೂರು ಆಗಾಗ ಬಿಡುಗು ಕೊಟ್ಟು ಮಳೆರಾಯ ಆರ್ಭಟಿಸುತ್ತಿದ್ದಾನೆ. ಇನ್ನು ಇಂದು (ಜೂನ್ 29) ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಭಾರೀ ಮಳೆ ಸುರಿಯಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗೆಯೇ ಇನ್ನುಳಿದ ಹಲವು ಜಿಲ್ಲೆಗಳಲ್ಲೂ ಮಳೆರಾಯನ ಆರ್ಭಟಿಸಲಿದ್ದಾನೆ ಎಂದು ತಿಳಿಸಿದೆ.

ಈಗಾಗಲೇ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ಆರ್ಭಟಿಸುತ್ತಲೇ ಇದ್ದಾನೆ. ಹಾಗೆಯೇ ಇದು ಸಹ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.
ಇಂದು (ಜೂನ್ 29) ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗಿನಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದ್ದು, ಈ ಜಿಲ್ಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಹಾಗೆಯೇ ಬೆಳಗಾವಿ, ಧಾರವಾಡ, ಕೋಲಾರ, ಕಲಬುರಗಿ, ಬಾಗಲಕೋಟೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನು ದಕ್ಷಿಣ ಕನ್ನಡ ಕರಾವಳಿಯಾದ ಮುಲ್ಕಿಯಿಂದ ಮಂಗಳೂರು, ಉಡುಪಿ ಕರಾವಳಿಯ ಬೈಂದೂರಿನಿಂದ ಕಾಪುವರೆಗೆ, ಉತ್ತರ ಕನ್ನಡ ಕರಾವಳಿಯ ಮಾಜಾಳಿಯಿಂದ ಭಟ್ಕಳದವರೆಗೆ ಬಿರುಗಾಳಿ ಸಹಿತ ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಈ ಭಾಗದ ಮೀನುಗಾರರಿಗೆ ಮುಂಜಾಗ್ರತಾ ಕ್ರಮವಾಗಿ ಆಳ ಸಮುದ್ರಕ್ಕೆ ಇಳಿಯಂದತೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಜೂನ್ 28ರಂದು ದಕ್ಷಿಣ ಕನ್ನಡದ ಮೂಲ್ಕಿ 30 ಸೆಂಟಿ ಮೀಟರ್, ಉಡುಪಿ 21, ಕೊಡಗಿನ ಭಾಗಮಂಡಲದಲ್ಲಿ 21, ಮಂಗಳೂರು 17, ಮಣಿ, ಕಾರ್ಕಳ, ಆಗುಂಬೆಯಲ್ಲಿ ತಲಾ 17 ಸೆಂಟಿ ಮೀಟರ್, ಪಣಂಬೂರು, ಬೆಳ್ತಂಗಡಿ, ಹೊನ್ನಾವರ , ಉತ್ತರ ಕನ್ನಡ, ಧರ್ಮಸ್ಥಳದಲ್ಲಿ ತಲಾ 15 ಸೆಂ.ಮೀ., ಶಿರಾಲಿ, ಕೋಟ, ಉಪ್ಪಿನಂಗಡಿ, ಕೊಟ್ಟಿಗೆಹಾರ, ನಾಪೋಕ್ಲುವಿನಲ್ಲಿ ತಲಾ 14 ಸೆಂ.ಮೀ., ಪೊನ್ನಂಪೇಟೆಯಲ್ಲಿ 13 ಸೆಂಟಿ ಮೀಟರ್ ಮಳೆ ಬಿದ್ದಿದೆ.
ಹಾಗೆಯೇ ಪುತ್ತೂರು, ಕೊಲ್ಲೂರು, ಸುಳ್ಯ, ಮೂರ್ನಾಡು, ವಿರಾಜಪೇಟೆಯಲ್ಲಿ ತಲಾ 11 ಸೆಂ.ಮೀ., ಮಂಕಿ, ಕಳಸ, ಶೃಂಗೇರಿ, ಕುಂದಾಪುರದಲ್ಲಿ ತಲಾ 9 ಸೆಂ ಮೀಟರ್, ಕುಮಟಾ, ಅಂಕೋಲಾದಲ್ಲಿ ತಲಾ 8 ಸೆಂಟು ಮೀಟರ್ ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.
ಕುಶಾಲನಗರ, ಯಲ್ಲಾಪುರ, ಬಾಳೆ ಹೊನ್ನೂರು, ಹುಂಚದಕಟ್ಟೆ, ಸರಗೂರು, ಮುಂಡಗೋಡದಲ್ಲಿ ತಲಾ 2 ಸೆಂ.ಮೀ. ಮಳೆಯಾದರೆ, ಉತ್ತರ ಕನ್ನಡದ ಬನವಾಸಿ, ಹಳಿಯಾಳ, ಶಿವಮೊಗ್ಗದ ತ್ಯಾಗರ್ತಿ, ಹಾಸನ, ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ, ಚಿಕ್ಕಮಗಳೂರಿನ ಎನ್‌ಆರ್‌ಪುರ, ನಂಜನಗೂಡು, ಮೈಸೂರಿನಲ್ಲಿ ತಲಾ 1 ಸೆಂ.ಮೀಟರ್‌ನಷ್ಟು ಮಳೆ ಬಿದ್ದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಭಾರೀ ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ದೊಡ್ಡ ದೊಡ್ಡ ಅನಾಹುತಗಳೇ ಸೃಷ್ಟಿಯಾಗಿವೆ. ಇನ್ನು ಹವಾಮಾನ ಇಲಾಖೆ ಮಾಹಿತಿ ಪ್ರಕಾರಣ ಮಳೆರಾಯನ ಆರ್ಭಟ ಹೀಗೆ ಮುಂದುವರೆದರೆ, ಇನ್ನೂ ಏನೆಲ್ಲಾ ಅನಾಹುತಗಳು ಕಾದಿದೆಯೋ ಎನ್ನುವ ಆತಂಕ ಈ ಭಾಗದ ಜನರ ಆತಂಕವಾಗಿದೆ.












Click it and Unblock the Notifications