Karnataka Rains: ಕೆಲವೇ ಕ್ಷಣಗಳಲ್ಲಿ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Karnataka Rains: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇದೀಗ ಮಳೆರಾಯನ ಆರ್ಭಟ ಕಡಿಮೆಯಾದರೂ ಕೂಡ ಪ್ರವಾಹ ಮಾತ್ರ ತಗ್ಗುತ್ತಿಲ್ಲ. ಹಲವೆಡೆ ಮಾತ್ರ ಭಾರೀ ಮಳೆಯಾಗುತ್ತುದ್ದು, ಅವಾಂತರಗಳೇ ಸೃಷ್ಟಿಯಾಗುತ್ತಿವೆ. ಅದರಲ್ಲೂ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಸೇರಿದಂತೆ ಹಲವೆಡೆ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಇಂದು (ಆಗಸ್ಟ್ 05) ಇನ್ನೂ ಕೆಲವೇ ಕ್ಷಣಗಳಲ್ಲಿ ಬಿರುಗಾಳಿ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ.
ಈಗಾಗಲೇ ಕೇರಳದ ವಯನಾಡಿನಲ್ಲಿ ನಡೆದ ಭೂಕುಸಿತದಲ್ಲಿ ದೊಡ್ಡ ದೊಡ್ಡ ಅವಾಂತರಗಳೇ ನಡೆದಿದ್ದು, ಇದರಲ್ಲಿ ಸಿಲುಕಿ ರಾಜ್ಯದ ಹಲವರು ಸಾವನ್ನಪ್ಪಿರುವ ಘಟನೆಗಳು ನಡೆದಿದೆ. ಇದೀಗ ಮತ್ತೆ ಈ ಭಾಗದಲ್ಲಿ ಮಳೆ ಮುಂದುವರೆದಿದ್ದು, ಇದರ ಪ್ರಭಾವ ರಾಜ್ಯದ ಕೊಡಗು, ಮೈಸೂರು ಜಿಲ್ಲೆಗಳ ಮೇಲೆ ಬೀರಲಿದೆ ಎಂದು ಹವಾಮಾನ ತಜ್ಞರು ಹೇಳುವ ಮಾತಾಗಿದೆ.

ಪ್ರಕೃತಿ ಮುನಿಸಿಕೊಂಡರೆ ಏನೆಲ್ಲ ಅನಾಹುತಗಳು ಸಂಭವಿಸುತ್ತವೆ ಎನ್ನುವುದಕ್ಕೆ ಕೇರಳದಲ್ಲಿ ನಡೆದ ಈ ಭೀಕರ ದುರಂತವೇ ಕಾರಣವಾಗಿದೆ. ಇನ್ನು ರಾಜ್ಯದ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ ಜಿಲ್ಲೆಗಳಲ್ಲೂ ಕೂಡ ಗುಡ್ಡ ಕುಸಿದು ಅವಾಂತರಗಳೇ ನಡೆದಿವೆ.
ಹಾಗೆಯೇ ಇನ್ನೂ ಕೆಲವೇ ಕ್ಷಣಗಳಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆ ಮುಂದುವರೆಯಲಿದೆ ಎನ್ನುವ ಮುನ್ಸೂಚನೆ ಇದೆ. ಇನ್ನು ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೀದರ್, ಕೊಪ್ಪಳ, ಧಾರವಾಡ ಸೇರಿದಂತೆ ಹಲವೆಡೆ ಸಾಧಾರಣ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ.
ವಾಣಿ ವಿಲಾಸ ಸಾಗರಕ್ಕೆ ಭದ್ರಾ ಡ್ಯಾಂ ನೀರು: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸುವ ಕಾರ್ಯ ಭಾನುವಾರ (ಆಗಸ್ಟ್ 04) ರಾತ್ರಿ 8:30ರ ಸಮಯಕ್ಕೆ ಆರಂಭಗೊಂಡಿದೆ. ಹಾಗಾದರೆ ಎಷ್ಟು ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭದ್ರಾ ಜಲಾಶಯದಿಂದ ವಿವಿ ಸಾಗರ ಡ್ಯಾಂಗೆ ಪ್ರತಿದಿನ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಬೆಟ್ಟದ ತಾವರೆಕೆರೆ ಲಿಫ್ಟ್ ಮೂಲಕ ವೈ ಜಂಕ್ಷನ್ ಕಾಲುವೆ ಮೂಲಕ ನೀರು ವೇದಾವತಿ ನದಿ ಸೇರಿಕೊಂಡು ವಿವಿ ಸಾಗರ ಡ್ಯಾಂ ತಲುಪಲಿದೆ. ಡ್ಯಾಂನಿಂದ 2 ಟಿಎಂಸಿ ನೀರನ್ನು ಸುಮಾರು ಮೂರು ತಿಂಗಳುಗಳ ಕಾಲ ಈ ಕಾಲುವೆ ಮೂಲಕ ವಿವಿ ಸಾಗರ ಜಲಾಶಯ ಸೇರಲಿದೆ.
ವಾಣಿ ವಿಲಾಸ ಜಲಾಶಯದಲ್ಲಿ ಪ್ರಸ್ತುತ ನೀರಿನ ಮಟ್ಟ 114.65 ಅಡಿ ಇದೆ. ಮೂರು ತಿಂಗಳುಗಳ ಕಾಲ ಭದ್ರಾ ನೀರು ಹರಿದು ಬಂದರೆ, ಜಲಾಶಯದ ನೀರಿನ ಮಟ್ಟ 120 ಅಡಿಗೆ ತಲುಪುವ ಸಾಧ್ಯತೆ ಇರುತ್ತದೆ. ಮತ್ತೊಂದು ಕಡೆ ಮಳೆ ಹೆಚ್ಚಾಗಿ ನೀರು ಹರಿದು ಬಂದು 130 ಅಡಿ ದಾಟಿದರೆ, ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. 89 ವರ್ಷಗಳ ಬಳಿಕ ಡ್ಯಾಂ 2022ರಲ್ಲಿ ಕೋಡಿ ಬಿದ್ದು ಇತಿಹಾಸ ನಿರ್ಮಿಸಿತ್ತು.
ಹಿರಿಯೂರಿನಿಂದ 20 ಕಿಲೋ ಮೀಟರ್ ದೂರದ ವಾಣಿವಿಲಾಸ ಪುರ ಬಳಿ ಕಟ್ಟಲಾಗಿರುವ ಮಾರಿಕಣಿವೆ ಜಲಾಶಯದ ಎತ್ತರ 50 ಮೀಟರ್, ಉದ್ದ 405 ಮೀಟರ್ ಇದೆ. ಇನ್ನು 135 (30 ಟಿಎಂಸಿ) ಅಡಿಗಳವರೆಗೆ ನೀರು ಸಂಗ್ರಹವಾಗುತ್ತದೆ. ಹಿರಿಯೂರು ತಾಲ್ಲೂಕಿನ ಸುಮಾರು 1/3 ರಷ್ಟು ರೈತರ ಕೃಷಿ ಚಟುವಟಿಕೆಗಳಿಗೆ ನೀರು ಹರಿಸಲಾಗುತ್ತದೆ.
(ಸುಮಾರು 12,000 ಹೆಕ್ಟೇರ್ ಪ್ರದೇಶ) ಜೊತೆಗೆ ಹಿರಿಯೂರು, ಚಳ್ಳಕೆರೆ ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗ ಇಲ್ಲದೆ, ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ. ಒಂದು ಬದಿಯಿಂದ ನೋಡಿದರೆ 'ಭಾರತದ ಭೂಪಟ'ವನ್ನು ಓಲುವ ದೃಶ್ಯ ಕಾಣುತ್ತದೆ.












Click it and Unblock the Notifications