Karnataka Rain: ಈ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಉತ್ತಮ ಮಳೆ ಸಾಧ್ಯತೆ
ಸೋಮವಾರ ರಾತ್ರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಿಂಚು -ಗುಡುಗು ಜೊತೆ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಅದು ವರದಿಯಲ್ಲಿ ತಿಳಿಸಿದೆ.
ರಾಜ್ಯದ ದಾವಣಗೆರೆ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚದುರಿದಂತೆ ಮಿಂಚು - ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್ 14ರಂದು ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಕಳೆದ 24 ಗಂಟೆಗಳಲ್ಲಿ ಹಾಸನ ಜಿಲ್ಲೆ, ಅರಸೀಕೆರೆ ತಾಲೂಕಿನ ಹಂದ್ರಾಳು ಎನ್ನುವಲ್ಲಿ 51.5 ಮಿಮೀ ಮಳೆಯಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮಳೆಬಿದ್ದ ಪ್ರದೇಶ ಎನಿಸಿಕೊಂಡಿದೆ.
ಈ ಪ್ರದೇಶದಲ್ಲಿ ಉತ್ತಮ ಮಳೆ
ಉಳಿದಂತೆ ಹಾಸನ ಜಿಲ್ಲೆಯ ಬೆಂಡೆಕೆರೆ, ಬಾಗಿವಾಲು, ಬಂಡೂರು, ಮುದುಡಿ, ಹಿರಿಸಾವೆ, ಎಂ.ಶಿವರ, ಬೆಳಗಿಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ಮಾದಪ್ಪಾಡಿ, ಶಿರತಾಡಿ, ಹೊಸಂಗಡಿ, ಕಾಶಿಪಟ್ಟಣ, ವೇಣೂರು, ಕಡಬ, ಕೆಮ್ರಾಜೆ, ನಾರಾವಿ, ಮಾರೋಡಿ, ಉಡುಪಿ ಜಿಲ್ಲೆಯ ನೀರೆ, ಕಾಂತಾವರ, ಮಡಮಕ್ಕಿ, ರೆಂಜಾಳ, ನಾಡಪಾಲು, ಕುಚ್ಚೂರು, ಕುಕ್ಕೆಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೋನಪ್ಪನ ಅಗ್ರಹಾರ, ದೊಡ್ಡತೊಗೂರು, ನೆರಳೂರು, ವೀರಸಂದ್ರ, ಹುಸ್ಕೂರು, ಶಾಂತಿಪುರ, ಚಂದಾಪುರ, ಹುಲಿಮಂಗಲ, ಮುತ್ತಾನಲ್ಲೂರು, ತುಮಕೂರು ಜಿಲ್ಲೆಯ ಜಿನ್ನಾಗರ, ಹೊನ್ನಮಚ್ಚನಹಳ್ಳಿ, ಹಳೆವೂರು, ನಿಡಸಾಲೆ, ಯಡಿಯೂರು, ಅಮೃತೂರಿನಲ್ಲಿ ಉತ್ತಮ ಮಳೆಯಾಗಿದೆ.
ಈ ಜಿಲ್ಲೆಗಳಲ್ಲಿ ಮಂಗಳವಾರ ಕೂಡ ಮಳೆ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಕೊಡಗು, ರಾಮನಗರ, ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ, ಹಾಸನ, ತುಮಕೂರು, ಬೆಳಗಾವಿ, ಬೀದರ್, ಮಂಡ್ಯ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕಲಬುರಗಿ, ವಿಜಯನಗರ, ಬಳ್ಳಾರಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾವೇರಿ, ರಾಯಚೂರು, ಬಾಗಲಕೋಟೆ, ಚಾಮರಾಜನಗರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications