Karnataka rain: ಈ ತಿಂಗಳಲ್ಲಿ ಅಧಿಕ ಮಳೆ ಕೊರತೆ ಎದುರಿಸಿದ ಜಿಲ್ಲೆಗಳಿವು, ಅಂಕಿ ಅಂಶಗಳ ವಿವರ ಹೀಗಿದೆ
ಕರ್ನಾಟಕ, ಆಗಸ್ಟ್, 31: ಜುಲೈ ತಿಂಗಳಿನಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಬ್ಬರದ ಮಳೆಯಾಗಿತ್ತು. ಆದರೆ ಆಗಸ್ಟ್ ತಿಂಗಳ ಆರಂಭದಿಂದ ಇಲ್ಲಿಯವರೆಗೂ ಮಳೆಯಿಲ್ಲದೇ ಬರೀ ಬಿಸಿಲಿನ ವಾತಾರಣವೇ ಮುಂದುವರೆದ ಪರಿಣಾಮ ರೈತರು ಬೆಳೆದ ಬೆಳೆಗಳೆಲ್ಲ ನೆಲಕಚ್ಚುತ್ತಿವೆ. ಅಲ್ಲದೆ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಗಿಂತಲೂ ಅಧಿಕ ಮಲೆ ಕೊರತೆ ಎದುರಿಸಿರುವ ಜಿಲ್ಲೆಗಳ ವಿವರವನ್ನು ಅಂಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ಗಮನಿಸಿ.
ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಕೊರತೆ?
1. ಬೀದರ್ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ 185 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 21 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇಕಡಾ 89ರಷ್ಟು ಮಳೆ ಕೊರತೆಯಾಗಿದೆ.
2. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 106 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 16 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇಕಡಾ 85ರಷ್ಟು ಮಳೆ ಕೊರತೆಯಾಗಿದೆ.

3. ಚಿತ್ರದುರ್ಗ ಜಿಲ್ಲೆಯಲ್ಲಿ 65 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 11 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇಕಡಾ 83ರಷ್ಟು ಮಳೆ ಕೊರತೆಯಾಗಿದೆ.
4. ಕೊಡಗು ಜಿಲ್ಲೆಯಲ್ಲಿ 560 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 100 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇಕಡಾ 82ರಷ್ಟು ಮಳೆ ಕೊರತೆಯಾಗಿದೆ.
5. ಶಿವಮೊಗ್ಗ ಜಿಲ್ಲೆಯಲ್ಲಿ 545 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 106 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇಕಡಾ 81ರಷ್ಟು ಮಳೆ ಕೊರತೆಯಾಗಿದೆ.
6. ಬೆಂಗಳೂರು ನಗರ 120 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 24 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇಕಡಾ 80ರಷ್ಟು ಮಳೆ ಕೊರತೆಯಾಗಿದೆ












Click it and Unblock the Notifications