Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಅಬ್ಬರದ ಮಳೆ! ಬೆಂಗಳೂರು ಫುಲ್‌ ಕೂಲ್‌ ಕೂಲ್‌

ಬೆಂಗಳೂರು, ಸೆಪ್ಟೆಂಬರ್‌ 05: ಕರ್ನಾಟಕದ ಹಲವು ಜಿಲ್ಲೆಯಲ್ಲಿ ಸೆಪ್ಟೆಂಬರ್‌ ತಿಂಗಳ ಆರಂಭದಿಂದಲೂ ಉತ್ತಮ ಮಳೆಯಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಹಾಗೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.

ಇನ್ನೂ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದ್ದು, ದಕ್ಷಿಣ ಒಳನಾಡು, ಉತ್ತರ ಒಳನಾಡು, ಮಧ್ಯ ಕರ್ನಾಟಕದ ಭಾಗಗಳಲ್ಲಿ ಸಾಧಾರಣವಾಗಿ ಮಳೆಯಾಗಲಿದೆ. ಅಲ್ಲದೇ ಮಂಗಳೂರು, ಉಡುಪಿ, ಉತ್ತರ ಕನ್ನಡದ ಕರಾವಳಿ ಭಾಗಗಳಲ್ಲಿ ವರುಣಾರ್ಭಟ ಜೋರಾಗಲಿದೆ. ಅಲ್ಲದೇ ಮುಂದಿನ ಎರಡೂ ದಿನವೂ ಮಳೆಯ ಮುನ್ಸೂಚನೆ ನೀಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ.

Karnataka Rain: Next four Days Heavy Rainfall Prediction

ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ದಕ್ಷಿಣ ಭಾಗ, ಉತ್ತರ ಕನ್ನಡದ ಪೂರ್ವಭಾಗ, ಧಾರವಾಡ, ಹಾವೇರಿ, ಗದಗ, ವಿಜಯನಗರ ಜಿಲ್ಲೆಗೆ ಸಾಧಾರಣ ಮಳೆಯಾಗಬಹುದು. ಮೈಸೂರು, ಚಾಮರಾಜನಗರ, ಮಂಡ್ಯ, ಚಿತ್ರದುರ್ಗ, ಬಳ್ಳಾರಿ, ಹುಬ್ಬಳ್ಳಿ ಧಾರವಾಡದ ಉತ್ತರ ಭಾಗ, ಬೆಳಗಾವಿ, ಬಾಗಲಕೋಟೆಗೆ ಹಗುರ ಮಳೆಯಾಗಲಿದೆ.

ಇನ್ನೂ ರಾಜ್ಯದಲ್ಲಿ ಮುಂದಿನ ಎರಡೂ ದಿನವೂ ಮಳೆ ಇರಲಿದೆ. ಬರದ ಛಾಯೆ ಆವರಿಸಿದ್ದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಕೊಂಚ ರೈತರಿಗೆ ನೆಮ್ಮದಿ ತಂದಂತಾಗಿದೆ.ಕರಾವಳಿ ಭಾಗದಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು. ಮಂಗಳವಾರ ಹಾಗೂ ಬುಧವಾರವೂ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ( IMD) ನೀಡಿದೆ. ಸದ್ಯ ಎರಡ್ಮೂರು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ಇದರಿಂದಾಗಿ ಕೊಂಚ ಪ್ರಮಾಣದಲ್ಲಿ ಚಳಿ ವಾತಾವರಣ ಕಂಡು ಬಂದಿದೆ.

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ದಿನವಿಡೀ ಮಳೆ ಸುರಿಯುತ್ತಿದ್ದು, ಕಲಬುರಗಿ, ಬೀದರ್‌ ಜಿಲ್ಲೆಗಳಲ್ಲಿ ಎಡಬಿಡದೇ ಮಳೆ ಸುರಿದಿದೆ. ಈ ಎರಡೂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿರುವ ಮಾಹಿತಿಯನ್ನ ಹವಮಾನ ಇಲಾಖೆ ಮಾಹಿತಿ ನೀಡಿದೆ. ಬೀದರ್‌ ನಗರ, ಕಲಬುರಗಿ ಜಿಲ್ಲೆಯ ಸುಲೇಪೇಟದಲ್ಲಿ ತಲಾ ಎಂಟು ಸೆ.ಮಿ. ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಏಳು ಸೆ.ಮಿ. ಮಳೆಯಾದ ವರದಿಯಾಗಿದೆ.

ಇನ್ನೂ ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆಯ ಅಥಣಿ, ಯಾದವಾಡ,ಸುತಗಟ್ಟಿ, ಮಟ್ಟಿಕೊಪ್ಪ, ರಾಯಬಾಗ, ಸಂಕೇಶ್ವರ ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಇಳಕಲ್‌, ಬಾದಾಮಿ, ಮಹಾಲಿಂಗಪುರ, ಬೀಳಗಿ, ಕೂಡಲಸಂಗಮ, ರಬಕವಿ, ಧಾರವಾಡ ಜಿಲ್ಲೆಯ ಅಣ್ಣಿಗೇರಿ, ಬಳ್ಳಾರಿ ಜಿಲ್ಲೆಯ ಕುರಗೋಡು, ಸಂಡೂರು, ಕಂಪ್ಲಿ. ಸಿರಗುಪ್ಪ, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು, ಮಾನ್ವಿ, ಮುದಗಲ್‌, ಯಾದಗಿರಿ ಜಿಲ್ಲೆಯ ಶಹಾಪುರ, ದಾವಣಗೆರೆ, ಹಾವೇರಿ, ಸವಣೂರಲ್ಲೂ ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+