Karnataka rain: ಮುಂಗಾರು ಆರಂಭದಲ್ಲೇ ಆರ್ಭಟಿಸುವ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಭಾರೀ ಮಳೆ
Karnataka Rain: ಮೇ ತಿಂಗಳ ಆರಂಭದಿಂದ ಸತತ ಮೂರು ವಾರಗಳ ಕಾಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿದ್ದು, ಇದೀಗ ಎಲ್ಲೋ ಕೆಲವೇ ಭಾಗಗಳಲ್ಲಿ ಮಳೆಯಾಗುತ್ತಿದೆ. ಇನ್ನುಳಿದ ಕಡೆಗಳಲ್ಲಿ ಮತ್ತೆ ಅದೇ ಆಡಿದ್ದೇ ಆಟ ಎನ್ನುವಂತೆ ಬಿಸಿಲಿನ ವಾತಾವರಣ ಮುಂದುವರೆಯುತ್ತಿದೆ. ಇದರ ನಡುವೆಯೂ ಇದೀಗ ರೆಮಲ್ ಚಂಡಮಾರುತದ ಪ್ರಭಾವ ಕಡಿಮೆಯಾಗಿದ್ದು, ಕರ್ನಾಟಕದಲ್ಲಿ ಮುಂಗಾರು ಆರ್ಭಟದ ಲಕ್ಷಣಗಳು ಕಂಡುಬರುತ್ತಿದ್ದು, ಈ ಜಿಲ್ಲೆಗಳಿಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದಲೂ ಮೋಡದ ವಾತಾವರಣ ನಿರ್ಮಾಣವಾಗಿ ಒಂದೊಂದು ಹನಿ ಬಿದ್ದು, ಮತ್ತೆ ಮಳೆರಾಯ ಮಾಯವಾಗುತ್ತಿದ್ದಾನೆ. ಇನ್ನು ಇಂದು (ಮೇ 28) ಬೆಳಗ್ಗೆಯಿಂದಲೂ ಮಧ್ಯಾಹ್ನದವರೆಗೂ ಬಿಸಿಲಿನ ವಾತಾವರಣ ಇದ್ದು ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ ಎನ್ನುವ ಮುನ್ಸೂಚನೆ ಇದೆ. ಹಾಗೆಯೇ ಜೂನ್ ಮೊದ ವಾರದಿಂದಲೇ ಈ ಜಿಲ್ಲೆಗಳಿಗೆ ಮುಂಗಾರು ಅಪ್ಪಳಿಸಲಿದೆ ಎನ್ನುವ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಇಂದು (ಮೇ 28) ದಕ್ಷಿಣ ಕರಾವಳಿ ಕರ್ನಾಟಕದ ಹಲವೆಡೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ನಾಳೆ (ಮೇ 29)ಯಿಂದ ಮಳೆಯ ಚಟುವಟಿಕೆ ಚುರುಕುಗೊಳ್ಳಲಿದೆ. ಮತ್ತೊಂದೆಡೆ ಕೊಡಗು ಜಿಲ್ಲೆಯ ಸುತ್ತಮುತ್ತ ಮುಂದಿನ 48 ಗಂಟೆಗಳಲ್ಲಿ ಮಳೆರಾಯನ ಆರ್ಭಟ ತೀವ್ರಗೊಳ್ಳಲಿದ ಎನ್ನುವ ಮುನ್ಸೂಚನೆ ಇದೆ.
ಮೇ 31ರಿಂದ ಜೂನ್ 4 ರವರೆಗೆ ಉತ್ತಮ ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿಯೂ ಉತ್ತಮ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಜೂನ್ ಮೊದಲ ವಾರದದಲ್ಲಿ ದಕ್ಷಿಣ ಕರಾವಳಿ ಉತ್ತಮ ಮಳೆಯಾಗಲಿದೆ. ಜೂನ್ 2ರ ನಂತರ ಉತ್ತರ ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.












Click it and Unblock the Notifications