Karnataka rain: ಇಂದು ಸಹ ರಾಜ್ಯದ ಹಲವೆಡೆ ಬಿರುಸು ಮಳೆ ಮುನ್ಸೂಚನೆ
ಕರ್ನಾಟಕ, ಆಗಸ್ಟ್, 20: ಆಗಸ್ಟ್ ತಿಂಗಳ ಆರಂಭದಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ರಾಜ್ಯದ ಜಲಾಶಯಗಳಲ್ಲಿ ನೀರಿಣ ಪ್ರಮಾಣ ಕುಸಿದಿದ್ದಲ್ಲದೆ, ಮುಂಗಾರು ನಂಬಿಕೊಂಡು ರೈತರು ಬೆಳೆದ ಬೆಳೆಗಳು ಒಳಗುವ ಹಂತದಲ್ಲಿದ್ದವು. ಆಗಸ್ಟ್ 19ರಂದು ಮತ್ತೆ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಕೃಪೆ ತೋರಿದ ಹಿನ್ನೆಲೆ ರೈತರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದಂತಾಗಿದೆ. ಹಾಗೆಯೆ ಇಂದು ಕೂಡ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜುಲೈ ತಿಂಗಳ ಮಧ್ಯದಲ್ಲಿ ಅಬ್ಬರದ ಮಳೆಯಾಗಿದ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ನದಿ, ಕೆರೆ, ಹಳ್ಳಗಳು ಅಪಾಯದ ಮಟ್ಟದಲ್ಲಿ ತುಂಬಿಹರಿದಿದ್ದವು. ಆದರೆ ಆಗಸ್ಟ್ ಆರಂಭದಲ್ಲಿ ಮಳೆ ಸದ್ದಡಗಿದ್ದು, ತಿಂಗಳ ಮಧ್ಯಭಾಗದಲ್ಲಿ ಮತ್ತೇ ಕೃಪೆ ತೋರಿದ್ದಾನೆ. ಇನ್ನು ಇಂದು ಕೂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯಯಿದೆ ಮುನ್ಸೂಚನೆ ಇದೆ.

ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿಯ ಹಲವೆಡೆ ಮುಂದಿನ 24 ಗಂಟೆಯಲ್ಲಿ 6.5 ಸೆಂಟಿ ಮೀಟರ್‌ಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಅಲ್ಲದೆ ಇನ್ನುಳಿದ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಹಾಗೆಯೇ ಈಗಾಗಲೇ ಇಂದು ಬೆಳಗ್ಗೆಯಿಂದಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆರಾಯ ಬಿರುಸು ಪಡೆದಿದ್ದಾನೆ ಎಂದು ತಿಳಿಸಿದೆ. ತೆಂಕ 138.5 ಮಿ.ಮೀ, ಪಡುಬಿದ್ರಿ, 130 ಮಿಲಿ ಮೀಟರ್, ಉಡುಪಿಯ ಬೆಳ್ಮಣ್, 124 ಮಿಲಿ ಮೀಟರ್, ಫಲಿಮಾರಿನಲ್ಲಿ 119.5 ಮಿಲಿ ಮೀಟರ್ ಮಳೆ ಬೀಳಲಿದೆ. ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಳವೂರಿನಲ್ಲಿ 122 ಮಿಲಿ ಮೀಟರ್ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನು ಇಂದು ಬೆಳಗ್ಗೆ ಎಲ್ಲೆಲ್ಲೆ ಎಷ್ಟು ಮಳೆ ಸುರಿದಿದೆ ಎಂದು ಗಮನಿಸುವುದಾದರೆ, ಉಡುಪಿ 138.5 ಮಿಲಿ ಮೀಟರ್, ದಕ್ಷಿಣ ಕನ್ನಡ 122 ಮಿಲಿ ಮೀಟರ್, ಉತ್ತರ ಕನ್ನಡ 59.5 ಮಿಲಿ ಮೀಟರ್, ಕೊಡಗು 44 ಮಿಲಿ ಮೀಟರ್, ಬೆಳಗಾವಿ 36.5 ಮಿಲಿ ಮೀಟರ್, ತುಮಕೂರು 35 ಮಿಲಿ ಮೀಟರ್, ಚಿಕ್ಕಮಗಳೂರು 32 ಮಿಲಿ ಮೀಟರ್, ಶಿವಮೊಗ್ಗ 31.5 ಮಿಲಿ ಮೀಟರ್, ಹಾಸನ 27ಮಿಲಿ ಮೀಟರ್, ಧಾರವಾಡ 27 ಮಿಲಿ ಮೀಟರ್, ದಾವಣಗೆರೆ ಜಿಲ್ಲೆಯಲ್ಲು 23.5ಮಿಲಿ ಮೀಟರ್ ಮಳೆಯಾಗಿದೆ ಎನ್ನುವ ಮಾಹಿತಿಯನ್ನು ರವಾಸಿದೆ.
ಕಳೆದ ಮೂರ್ನಾಲ್ಕು ವಾರಗಳಿಂದ ಮಳೆರಾಯ ತನ್ನ ಆರ್ಭಟವನ್ನೆ ನಿಲ್ಲಿಸಿದ ಪರಿಣಾಮ ಮುಂಗಾರು ನಂಬಿಕೊಂಡು ಬಿತ್ತನೆ ಮಾಡಿದ ಅನ್ನದಾತರದಲ್ಲಿ ಆತಂಕ ಮನೆಮಾಡಿತ್ತು. ಆದರೆ ಇದೀಗ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಮೈಸೂರು ಜಿಲ್ಲೆಗಳಲ್ಲಿ ಉತ್ತಮ ಮಳೆ ಸುರಿದಿದ್ದು, ಕೊಪ್ಪಳ, ಬೆಂಗಳೂರು, ದಾವಣಗೆರೆ ಜಿಲ್ಲೆಯ ಹಲವೆಡೆ ಸಾಧರಣ ಸಾಧಾರಣ ಮಳೆ ಬಿದ್ದಿದೆ ಎಂದು ತಿಳಿದುಬಂದಿದೆ.
ಅದರಲ್ಲೂ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆಗಸ್ಟ್ 18ರ ಸಂಜೆಯಿಂದಲೇ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಹೀಗೆ ದಿಢೀರ್ ಸುರಿದ ಮಳೆಯಿಂದಾಗಿ ತುಂಗಾ ನದಿಯಲ್ಲಿ ನೀರಿನ ಮಟ್ಟ ಸ್ವಲ್ಪ ಪ್ರಮಾಣದಲ್ಲು ಸುಧಾರಿಸಿದೆ. ಹಾಗೆಯೇ ಕರಾವಳಿಯ ಮೂರು ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಮುಂದಿನ 24 ಗಂಟೆಯಲ್ಲಿ 6.5 ಸೆಂಟಿ ಮೀಟರ್‌ಗೂ ಅಧಿಕ ಮಳೆ ಬೀಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.












Click it and Unblock the Notifications