ಇನ್ನೂ 48 ಗಂಟೆಗಳ ಕಾಲ ಮಳೆ, ಜಲಾಶಯದ ನೀರಿನ ಮಟ್ಟ
ಬೆಂಗಳೂರು, ಸೆಪ್ಟೆಂಬರ್ 20 : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಸ್ವಲ್ಪ ಮಟ್ಟಿಗೆ ತಗ್ಗಿದೆ. ಮುಂದಿನ 48 ಗಂಟೆಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. 2284 ಅಡಿ ಗರಿಷ್ಠ ಮಟ್ಟದ ಕಬಿನಿ ಜಲಾಶಯ ಭರ್ತಿಯಾಗಿದೆ. ಸೆಪ್ಟೆಂಬರ್ 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಮುಂದಿನ 48ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾಗಮಂಡಲದಲ್ಲಿ 12, ಸುಳ್ಯ, ಮಡಿಕೇರಿ, ನಾಪೋಕ್ಲುವಿನಲ್ಲಿ 7 ಸೆಂ.ಮೀ.ಮಳೆಯಾಗಿದೆ. ಸೋಮವಾರ ಪೇಟೆ, ಕಳಸ, ಕೊಟ್ಟಿಗೆಹಾರದಲ್ಲಿ 6 ಸೆಂ.ಮೀ., ಧರ್ಮಸ್ಥಳ, ಆಗುಂಬೆ, ಪಣಂಬೂರಿನಲ್ಲಿ 4 ಸೆಂ.ಮೀ.ಮಳೆಯಾಗಿದೆ. ಮಂಗಳೂರು, ಕಮ್ಮರಡಿ, ಲೋಂಡಾ, ಕಾರವಾರದಲ್ಲಿ 3 ಸೆಂ.ಮೀ.ಮಳೆಯಾಗಿದೆ.
| ಅಣೆಕಟ್ಟುಗಳು | ಗರಿಷ್ಠ ಮಟ್ಟ | ಇಂದಿನ ಮಟ್ಟ |
| ಲಿಂಗನಮಕ್ಕಿ | 1819.00 | 1796.65 |
| ಸುಪಾ | 1849.92 | 1793.50 |
| ವಾರಾಹಿ | 1949.50 | 1924.08 |
| ಹಾರಂಗಿ | 2859.00 | 2857.67 |
| ಹೇಮಾವತಿ | 2922.00 | 2886.87 |
| ಕೆಆರ್ ಎಸ್ | 124.80 | 102.45 |
| ಕಬಿನಿ | 2284.00 | 2282.5 |
| ಭದ್ರಾ | 2158.00 | 2137.41 |
| ತುಂಗಭದ್ರಾ | 1633.00 | 1624.72 |
| ಘಟಪ್ರಭಾ | 2175.00 | 2157.25 |
| ಮಲಪ್ರಭಾ | 2079.50 | 2056.60 |
| ಆಲಮಟ್ಟಿ | 1704.81 | 1704.82 |
| ನಾರಾಯಣಪುರ | 1615.00 | 1614.19 |












Click it and Unblock the Notifications