ನಿಮ್ಮ ಮಕ್ಕಳಿಗೆ ಜೀವ ರಕ್ಷಕ ಪೊಲಿಯೋ ಹನಿ ಹಾಕಿಸಿ

Subscribe to Oneindia Kannada

ಬೆಂಗಳೂರು, ಫೆಬ್ರವರಿ, 20: ಐದು ವರ್ಷದ ಒಳಗಿನ ಮಕ್ಕಳಿಗೆ ಪೊಲಿಯೋ ಹನಿ ಹಾಕಿಸಿದ್ದಾರಾ? ಹೌದು ಒಮ್ಮೆ ಹಾಕಿಸಿದ್ದೇವೆ. ಪರವಾಗಿಲ್ಲ ಇನ್ನೊಮ್ಮೆ ಹಾಕಿಸಿ. ರಾಜ್ಯಾದ್ಯಂತ ಫೆ.21ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಎಲ್ಲ ಮಕ್ಕಳಿಗೂ ಪೊಲಿಯೋ ಹನಿ ಹಾಕಿಸಲು ಆರೋಗ್ಯ ಇಲಾಖೆ ಮನವಿ ಮಾಡಿದೆ.

ರಾಜ್ಯದ 74.39 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಫೆಬ್ರವರಿ 21ರ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಪಲ್ಸ್ ಪೋಲಿಯೋ ಬೂತ್​ಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಯು ಟಿ ಖಾದಿರ್ ತಿಳಿಸಿದ್ದಾರೆ.[ಐಸಿಯು ಕೋಣೆಗೆ ವಿಧಿಸಿದ್ದ ಹೆಚ್ಚುವರಿ ತೆರಿಗೆ ನೀತಿ ಹಿಂದಕ್ಕೆ]

karnataka

ಲಸಿಕೆ ಕಾರ್ಯಕ್ರಮ ಮುಗಿದ ನಂತರ ಮುಂದಿನ ಮೂರು ದಿನ ಮನೆ ಮನೆಗೆ ಭೇಟಿ ನೀಡಿ ಬಿಟ್ಟು ಹೋದ ಮಕ್ಕಳಿಗೂ ಲಸಿಕೆ ಹಾಕಲಾಗುವುದು. ಆರೋಗ್ಯ ಇಲಾಖೆಯ ಇನ್ನಷ್ಟು ವಿಚಾರಗಳನ್ನು ಫೆಬ್ರವರಿ 22 ರಂದು ನಡೆಯಲಿರುವ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಎಲ್ಲಾ ಜಿಲ್ಲಾ ಆರೋಗ್ಯಕೇಂದ್ರಗಳಿಗೂ ಪೊಲಿಯೋ ಹನಿ ಕಾರ್ಯಕ್ರಮದ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಬಸ್ ನಿಲ್ದಾಣ ಮತ್ತು ಜನ ಜಂಗುಳಿ ಸೇರುವ ಪ್ರದೇಶದಲ್ಲೂ ಪೊಲಿಯೋ ಹನಿ ಹಾಕಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As part of the nation-wide Intensified Pulse Polio Campaign on February 21, the Karnataka, stepping into polio free year, has made all arrangements to conduct the campaign by specially establishing booths in all government hospitals / ICDS centres.
Please Wait while comments are loading...