ಏ 30 ಕ್ಕೆ ಚಿನ್ನದನಾಡಿಗೆ ಮೋದಿ ಭೇಟಿ; ಮೋದಿ ಮೂಲಕ ಕೈ ತೆನೆ ಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿಯ 10 ತಂತ್ರಗಳು

ಕೋಲಾರ,ಏಪ್ರಿಲ್29: ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಾವು ಜೋರಾಗಿದೆ. ವಿಧಾನಸಭಾ ಚುನಾವಣೆ ರಣರಂಗ ಸಜ್ಜಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಹಲವು ತಂತ್ರ ಹಾಗೂ ಪ್ರತಿತಂತ್ರಗಳನ್ನ ನಡೆಸುತ್ತಿದೆ.

ಆಡಳಿತರೂಢ ಬಿಜೆಪಿಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ಹೈಕಮಾಂಡ್‌ ನಾಯಕರ ಮೂಲಕ ಜನರನ್ನ ಬಿಜೆಪಿಯತ್ತ ಸೆಳೆಯಲು ಹಲವು ತಂತ್ರಗಾರಿಕೆಯನ್ನ ನಡೆಸಿದ್ದಾರೆ. ಚುನಾವಣೆಗೆ ದಿನಗಣನೆ ಶುರುವಾಗಿದು, ಬಿಜೆಪಿ ಹೈಕಮಾಂಡ್‌ ನಾಯಕರು ರಾಜ್ಯದಲ್ಲೇ ಪ್ರಚಾರವನ್ನ ನಡೆಸುತ್ತಿದ್ದು, ನಾಳೆ(ಏಪ್ರಿಲ್‌ 30) ಪ್ರಧಾನಿ ನರೇಂದ್ರ ಮೋದಿ ಚಿನ್ನದ ನಾಡು ಕೋಲಾರಕ್ಕೆ ಭೇಟಿ ನೀಡಿಲಿದ್ದಾರೆ.

Karnataka Polls: Prime Minister Narendra Modi will visits Kolar on April 30

ಪ್ರತಿ ಬಾರಿಯೂ ಕಾಂಗ್ರೆಸ್‌ ನವರ ಟೀಕೆಯನ್ನ ಅಸ್ತ್ರವನ್ನಾಗಿ ಮಾಡಿಕೊಳ್ಳುವ ಜಾಣ್ಮೆಯನ್ನ ಹೊಂದಿರುವ ಮೋದಿ ರಾಜ್ಯದಲ್ಲಿ ಕಮಲ ಅರಳಿಸಲು ಪಣತೊಟ್ಟಿದ್ದಾರೆ. ಈ ಬಾರಿ ಕರ್ನಾಟಕದ ವಿಜಯಮಾಲೆ ತಮ್ಮ ಕೊರಳಿಗೆ ಬೀಳಬೇಕೆಂದು ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್ ರಣತಂತ್ರ ರೂಪಿಸಿವೆ.

ಇತ್ತ ಪ್ರಧಾನಿ ನರೇಂದ ಮೋದಿ ಅವರ ವರ್ಚಸ್ಸಿನ ಮೂಲಕ ರಾಜ್ಯದಲ್ಲಿ ಕಮಲ ಅರಳಿಸಲು ಬಿಜೆಪಿ ರಾಜ್ಯ ಘಟಕ ಸಿದ್ದತೆಯನ್ನ ನಡೆಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ನಾಳೆ (ಏ.30) ಚಿನ್ನದನಾಡು ಬಯಲುಸೀಮೆ ಕೋಲಾರ ಜಿಲ್ಲೆಗೆ ಎರಡನೇ ಬಾರಿಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನರನ್ನ ಸೇರಿಸಿ ಬೃಹತ್ ಸಮಾವೇಶ ಮಾಡಿ ಕನಿಷ್ಠ 8 ಕ್ಷೇತ್ರ ಗೆಲ್ಲುವ ಮಾಸ್ಟರ್‌ ಪ್ಲಾನ್‌ ಬಿಜೆಪಿ ನಡೆಸಿದೆ.

Karnataka Polls: Prime Minister Narendra Modi will visits Kolar on April 30

ಇನ್ನೂಜೆಡಿಎಸ್ ಹಾಗೂ ಕಾಂಗ್ರೆಸ್​​ ಭದ್ರಕೋಟೆ ಛಿದ್ರ ಮಾಡುವುದು ಬಿಜೆಪಿಯ ತಂತ್ರಗಾರಿಕೆಯನ್ನ ನಡೆಸಿದ್ದು, ಕೋಲಾರ 6, ಚಿಕ್ಕಬಳ್ಳಾಪುರ 5, ಬೆಂಗಳೂರು ಗ್ರಾಮಾಂತರ 4 ಸೇರಿ ಒಟ್ಟು 15 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಬಿಜೆಪಿ ಪ್ಲಾನ್ ಮಾಡಿದೆ

ಬಿಜೆಪಿ ನಡೆಸಿದ 10 ತಂತ್ರಗಳೇನು?

1.ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಗೆ ತರಕಾರಿ ಹಣ್ಣುಗಳನ್ನು ಸರಬರಾಜು ಮಾಡಲು ಅಂತರಾಷ್ಟ್ರೀಯ ಮಾರುಕಟ್ಟೆ ಅಭಿವೃದ್ಧಿ ಅಥವಾ ಹೊಸ‌ ರೈಲು ಮಾರ್ಗದ ಭರವಸೆ ನೀಡುವ ಸಾಧ್ಯತೆ ಇದೆ. ಈ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತರ ಸಮಸ್ಯೆಗಳಿಗೆ ನೆರವಾಗುವ ಭರವಸೆಯನ್ನ ನೀಡುವ ಮೂಲಕ ರೈತ ಸಮುದಾಯವನ್ನ ಸೆಳೆಯುವ ತಂತ್ರವನ್ನ ಬಿಜೆಪಿ ನಡೆಸಿದೆ.

2. ಚಿನ್ನದ ನಾಡು ಕೋಲಾರ ಜಿಲ್ಲೆಯಲ್ಲಿ ಕಲಮ ಅರಳಿಸಲು, ಕೆಜಿಎಫ್ ಚಿನ್ನದ ಗಣಿ ಪುನರಾರಂಭ, ಕೆಜಿಎಫ್ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಸೇರಿದಂತೆ ಮಹತ್ವದ ಘೋಷಣೆ ಸಾಧ್ಯತೆ ಈ ಮೂಲಕ ಆ ಭಾಗದ ಜನರನ್ನು ಸೆಳೆಯುವ ಪ್ಲಾನ್ ಮಾಡಿದ್ದು, ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಭರವಸೆ ನೀಡುವುದರಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿದ್ದು, ಯುವ ಸಮುದಾಯವನ್ನ ಸೆಳೆಯುವ ಪ್ಲಾನ್‌ ನಡೆಸಿದೆ.

3. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನ ಬಗಹರಿಸುವ ನಿಟ್ಟಿನಲ್ಲಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕೆಲವೊಂದು ಮಹತ್ವದ ಆಶ್ವಾಸನೆ ನೀಡುವ ಸಾಧ್ಯತೆ ಹೆಚ್ಚಾಗಿದೆ.

4. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನ ಭದ್ರಕೋಟೆಯಾಗಿದ್ದು, ಶತಾಯಗತಾಯ ಈ ಬಾರಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಕನಿಷ್ಠ 6-8 ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ತಂತ್ರಗಾರಿಕೆಯನ್ನ ಹಾಕಿಕೊಂಡಿದ್ದು, ಮೋದಿ ಭೇಟಿಯಿಂದ ಬಿಜೆಪಿ ಪಕ್ಷವನ್ನ ಈ ಭಾಗದಲ್ಲಿ ಭದ್ರಮಾಡಿಕೊಳ್ಳಲು ರಾಜ್ಯ ಬಿಜೆಪಿ ಘಟಕ ಪ್ಲಾನ್‌ ನಡೆಸಿದೆ.

5. ಹಿಂದುತ್ವ ಹಾಗೂ ಭಾವನಾತ್ಮಕ ವಿಚಾರಗಳ ಮೇಲೆ ಕಣ್ಣೀಟ್ಟಿರುವ ರಾಜ್ಯ ಬಿಜೆಪಿ ಪ್ರಧಾನಿ ಮೋದಿಯವರ ಪ್ರಚಾರದಿಂದ ಹೆಚ್ಚು ಮತಗಳ ಕ್ರೋಢೀಕರಿಸುವುದು ಪ್ರಮುಖವಾಗಿ ಹಿಂದೂ ಮತಗಳ ಕ್ರೋಢೀಕರಣದ ಮೇಲೆ ಬಿಜೆಪಿ ಕಣ್ಣೀಟಿದೆ.

6. ಆಡಳಿತರೂಢ ಬಿಜೆಪಿಗೆ ಚಿನ್ನದನಾಡು ಕೋಲಾರದಲ್ಲಿ ಈ ಬಾರಿ ಕಮಲ ಅರಳಿಸಲು ಭರ್ಜರಿ ತಯಾರಿಯನ್ನ ನಡೆಸಿದ್ದು, ಮೋದಿ ಆಗಮನದ ಮೂಲಕ ಕೋಲಾರದಲ್ಲಿ ಬಿಜೆಪಿ ಸಂಘಟನೆಯನ್ನ ಭದ್ರಪಡಿಸಿಕೊಳ್ಳಲು ಬಿಜೆಪಿ ರಾಜ್ಯ ಘಟಕ ಚಿಂತನೆಯನ್ನ ನಡೆಸಿದೆ.

7. ವಿಧಾನಸಭಾ ಚುನಾವಣೆ ಮಾತ್ರವಲ್ಲದೆ 2024 ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಕಳೆದ ಬಾರಿ ಗೆದ್ದಿರುವ ಎರಡು ಲೋಕಸಭಾ ಸ್ಥಾನಗಳನ್ನು ಈ ಬಾರಿ ಉಳಿಸಿಕೊಳ್ಳಲು, ಈ ಭಾಗದಲ್ಲಿ ಒಂದಷ್ಟು ಶಾಸಕರನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ಹೀಗಾಗಿ ಮೋದಿ ಆಗಮನದಿಂದ ಯುವ ಸಮುದಾಯನ್ನ ಸೆಳೆಯುವ ಚಿಂತನೆ ನಡೆಸಿದೆ.

8. ಬಿಇಎಂಎಲ್ ಖಾಸಗೀಕರಣ ಹಿಂಪಡೆಯುವ ಮೂಲಕ ಮತದಾರರನ್ನ ಸೆಳೆಯುವ ಚಿಂತನೆ ಬಿಜೆಪಿ ನಡೆಸಿದೆ.

9. ನದಿ ಜೋಡಣೆ ಮೂಲಕ ಬಯಲು ಸೀಮೆ ಹಸಿರಾಗಿಸಿ ಜನರನ್ನ ಹಸನಾಗಿಸುವ ಸಾಧ್ಯತೆ.

10. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗದಲ್ಲಿ ಕಮಲ ಅರಳಿಸುವುದು ಬಿಜೆಪಿಗೆ ಅನಿವಾರ್ಯವಾಗಿದ್ದು, ಅಮೃತ ಸರೋವರ, ಜಲ ಜೀವನ್‌ನಂತಹ ಕೇಂದ್ರದ ಅಭಿವೃದ್ದಿ ಯೋಜನೆಗಳಲ್ಲಿ ವಿಶೇಷ ಆದ್ಯತೆ‌ ನೀಡಿದ್ದ ಜಿಲ್ಲೆಯಲ್ಲಿ ಬಿಜೆಪಿ ಪರವಾದ ಅಲೆ ನಿರ್ಮಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+