Karnataka Elections: ಬಿಜೆಪಿಯ ಅಶೋಕ್‌ರನ್ನು ಸೋಲಿಸಲು ಡಿಕೆ ಸಹೋದರರಿಂದ ‘ಅನಕ’ ಪ್ಲ್ಯಾನ್‌- ಏನಿದು ಹೊಸ ತಂತ್ರ?

ಬೆಂಗಳೂರು, ಏಪ್ರಿಲ್‌ 15: ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( DK Shivakumar ) ವಿರುದ್ಧ ಕಂದಾಯ ಸಚಿವ ಹಾಗೂ ಬಿಜೆಪಿ ( BJP ) ಶಾಸಕ ಆರ್ ಅಶೋಕ್‌ ( R Ashok ) ಕಣಕ್ಕಿಳಿದಿದ್ದಾರೆ. ಅವರ ತವರು ಕ್ಷೇತ್ರವಾದ ಬೆಂಗಳೂರಿನ ಪದ್ಮನಾಭನಗರದಲ್ಲಿ ಅಶೋಕ್‌ ಅವರನ್ನು ಸೋಲಿಸಲು ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ರಣತಂತ್ರ ರೂಪಿಸಿದ್ದಾರೆ.

ಪದ್ಮನಾಭನಗರದ ಟಿಕೆಟ್‌ ಅನ್ನು ಕಾಂಗ್ರೆಸ್‌ ಘೋಷಿಸಿಲ್ಲ. ಅಲ್ಲಿ ಪ್ರಬಲ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಕೈ ಪಾಳಯ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಅಕೋಶ್‌ ಅವರನ್ನು ಸೋಲಿಸಲು ಡಿಕೆ ಬ್ರದರ್ಸ್‌ 'ಅನಕ' ಯೋಜನೆಯನ್ನು ರೂಪಿಸಿದ್ದಾರೆ.

Karnataka polls: DK Shivakumar and DK Suresh Made ‘Anaka’ plan to defeat R Ashok- What is strategy?

ಅಲ್ಪಸಂಖ್ಯಾತ ( ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ), ನಾಯ್ಡುಗಳು ( ತೆಲುಗು ಮಾತನಾಡುವ ಜನಸಂಖ್ಯೆ ) ಮತ್ತು ಕನಕಪುರ ನಿವಾಸಿಗಳನ್ನು ಒಳಗೊಂಡ ಮತದಾರರನ್ನು ಸೆಳೆಯಲು ಡಿಕೆ ಬ್ರದರ್ಸ್‌ ಪ್ಲ್ಯಾನ್‌ ಮಾಡಿದ್ದಾರೆ. ಯೋಜನೆಗೆ 'ಅನಕ' ಎಂದು ಕರೆಯಲಾಗುತ್ತಿದೆ.

ಈ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ರಘುನಾಥ್ ನಾಯ್ಡು, 'ಪದ್ಮನಾಭನಗರದಲ್ಲಿ ಒಟ್ಟು 70,000 ತೆಲುಗು ಮಾತನಾಡುವವರು ಇದ್ದಾರೆ. ಅದರಲ್ಲಿ 35,000 ನಾಯ್ಡುಗಳಿದ್ದಾರೆ. ಅಲ್ಲದೆ, 36,000 ಅಲ್ಪಸಂಖ್ಯಾತರು ಮತ್ತು 15,000 ಕ್ಕೂ ಹೆಚ್ಚು ಕನಕಪುರ ನಿವಾಸಿಗಳು ಈ ಕ್ಷೇತ್ರದಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.

ಪದ್ಮನಾಭನಗರದಲ್ಲಿ ತೆಲುಗು ಭಾಷಿಕ ಮತದಾರರ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರ ನಿಜವಾದ ಆಯ್ಕೆಯೇ ನಾನು ಎಂದು ರಘುನಾಥ್ ನಾಯ್ಡು ಹೇಳಿದ್ದಾರೆ.

Karnataka polls: DK Shivakumar and DK Suresh Made ‘Anaka’ plan to defeat R Ashok- What is strategy?

ಜಯನಗರ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎನ್‌ ಆರ್‌ ರಮೇಶ್‌ಗೆ ಟಿಕೆಟ್ ನಿರಾಕರಿಸಿದ್ದಕ್ಕೆ ಅವರ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ. ಜಯನಗರ ವಿಧಾನಸಭಾ ಕ್ಷೇತ್ರದಿಂದ ರಮೇಶ್‌ಗೆ ಟಿಕೆಟ್‌ ಸಿಗದಿರುವ ಹಿಂದೆ ಅಶೋಕ್‌ ಅವರ ಕೈವಾಡವಿದೆ ಎಂದು ಶಂಕಿಸಲಾಗಿದ್ದು, ಜೆಡಿಎಸ್‌ಗೆ ಸೇರಿ ಅಶೋಕ್ ವಿರುದ್ಧ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.

ದಕ್ಷಿಣ ಬೆಂಗಳೂರಿನಲ್ಲಿ ನೂರಾರು ಮುಖಂಡರನ್ನು ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ. ಇದು ಅಶೋಕ್‌ ಅವರಿಗೆ ಆಘಾತವನ್ನು ಉಂಟು ಮಾಡಲಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ಗೆ 141 ಸ್ಥಾನಗಳು: ಡಿಕೆಶಿ ಭವಿಷ್ಯ

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 141 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕೇವಲ 65-70 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದ್ದಾರೆ.

ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು 166 ಅಭ್ಯರ್ಥಿಗಳ ಕಾಂಗ್ರೆಸ್ ಮೊದಲ ಪಟ್ಟಿಯೊಂದಿಗೆ ಹೋಲಿಸಿದ ಶಿವಕುಮಾರ್, ಶೀಘ್ರದಲ್ಲೇ ಸಾವಿರಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ತಿಳಿಸಿದ್ದಾರೆ.

'ಅತೃಪ್ತ' ಬಿಜೆಪಿ ನಾಯಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂದು ಕೇಳಿದಾಗ, ಬಿಜೆಪಿಯ ಹಲವಾರು ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವ ಕಾರಣ ಪ್ರಸ್ತುತ ಯಾರೊಂದಿಗೂ ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.

ತಮ್ಮ ಕಿರಿಯ ಸಹೋದರ ಹಾಗೂ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಕಂದಾಯ ಸಚಿವ ಆರ್.ಅಶೋಕ ವಿರುದ್ಧ ಸ್ಪರ್ಧಿಸುವುದಿಲ್ಲ ಎಂದು ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಯು ಅಶೋಕ ಅವರನ್ನು ಪದ್ಮನಾಭನಗರ ಮತ್ತು ಕನಕಪುರ ಕ್ಷೇತ್ರದಿಂದ ಕಣಕ್ಕಿಳಿಸಿದ್ದು, ಅವರು ಶಿವಕುಮಾರ್ ಅವರನ್ನು ಎದುರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+