Karnataka Polls 2023: ಕೇವಲ ಎರಡೇ ಗಂಟೆಯಲ್ಲಿ ಶೇ.8.26ರಷ್ಟು ಮತದಾನ, ವಿವರ

ಬೆಂಗಳೂರು, ಮೇ 10: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು (ಮೇ 10) ಬೆಳಗ್ಗೆ 7ಗಂಟೆಯಿಂದ ಆರಂಭವಾಗಿದೆ. ಅಲ್ಲಿಂದ 9 ಗಂಟೆವರೆಗೆ ಕೇವಲ ಎರಡು ಗಂಟೆಯಲ್ಲಿ ರಾಜ್ಯಾದ್ಯಂತ ಶೇಕಡಾ 8.26 ರಷ್ಟು ಮತದಾನ ನಡೆದಿದೆ. ಈ ಮೂಲಕ ಮತದಾನ ನಿರೀಕ್ಷಿತ ಪ್ರಮಾಣದ ವೇಗದಲ್ಲಿ ಸಾಗುತ್ತಿದೆ ಎಂದು ತಿಳಿದು ಬಂದಿದೆ.

ಬೆಳಗ್ಗೆಯಿಂದ 7ಗಂಟೆಗೆ ಮತದಾರ ಪ್ರಭುಗಳು ತಮ್ಮ ಹತ್ತಿರದ ಮತಗಟ್ಟೆಗೆ ತೆರಳಿ ಅತ್ಯುತ್ಸಾಹದಿಂದ ಮತದಾನ ಮಾಡಿದ್ದು ಕಂಡು ಬಂತು. ವಿಶೇಷವೆಂದರೆ ಮತದಾನ ಆರಂಭವಾದ ಒಂದು ಗಂಟೆಯಲ್ಲಿ ಸುಮಾರು 11ಸಾವಿರ ಯುವ ಮತದಾರರು ಹಾಗೂ 15ಸಾವಿರದಷ್ಟು ಹಿರಿಯ ನಾಗರಿಕರು ಹತ್ತಿರ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಈ ಮೂಲಕ ವೃದ್ಧರು ಇನ್ನಿತರರಿಗೆ ಮತದಾನ ಮಾಡುವಂತೆ ಪ್ರೇರೆಪಿಸಿದ್ದಾರೆ.

karnataka elections

ರಾಜಕೀಯ ನಾಯಕರು, ನಟ-ನಟಿಯರು, ವೃದ್ಧರು, ಹೊಸ ಮತದಾರರು ಹಾಗೂ ಸಾರ್ವಜನಿಕರು ಸೇರಿದಂತೆ ಮತದಾನ ಮಾಡಿದ್ದಾರೆ. ಇದರಿಂದ ಕೇವಲ ಎರಡೇ ಗಂಟೆಯಲ್ಲಿ ಶೇಕಡಾ 8.26 ರಷ್ಟು ಮತದಾನ ವಾಗಿದೆ. ಇದೇ ರೀತಿಯ ಬಿರುಸಿನ ಮತದಾನ ಮುಂದುವರಿದೇ ಆದಷ್ಟು ಬೇಗ ಮತದಾನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಜನರಿಗೆ ಮಳೆಯ ಭಯ ಸಹ ಇದೆ. ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಿದೆ. ಇದರ ಪರಿಣಾಮವಾಗಿ ಸಹ ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಬಂದು ಜನರು ಮತ ಚಲಾಯಿಸಿದ್ದಾರೆ.

karnataka elections

ವಧುವಿನ ನಡೆಗೆ ಪ್ರಶಂಸೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಮಾಕೋನಹಳ್ಳಿಯಲ್ಲಿ ಮತದಾನ ಮಾಡಿ ನಂತರ ಮಧುಮಗಳು ಹಸೆ ಮಣೆ ಏರಿದ ಅಪರೂಪದ ಹಾಗೂ ಸ್ಪೂರ್ತಿದಾಯಕ ಘಟನೆ ನಡೆದಿದೆ. ಮತದಾನ ನಮ್ಮ ಹಕ್ಕು ಎಂದು ಅರಿತಿರುವ ಆ ಮಧುಮಗಳು (ವಧು) ಹಸೆಮಣೆಗೂ ಮುನ್ನ ತಮ್ಮ ಜವಾಬ್ದಾರಿ ಮೆರೆದಿದ್ದಾರೆ. ಮದುವೆ ಸಂದರ್ಭದಲ್ಲೂ ಮತದಾನ ಮಾಡುವ ಮೂಲಕ ಅವರು ಮಾದರಿಯಾಗಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ರಾಜರಾಜೇಶ್ವರಿ ನಗರದ ಮತಗಟ್ಟೆಗೆ ತೆರಳಿದ ನಟ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಮತದಾನ ಮಾಡಿದರು. ಅಭಿವೃದ್ಧಿ ಮಾಡಿದವರಿಗೆ ಮತ ನೀಡಿ. ಮತದಾನ ಮಾಡಿದರೆ ನಿಮ್ಮ ಸ್ಥಳದಲ್ಲಿ ಅಭಿವೃದ್ಧಿ ಆಗದಿದ್ದರೆ ಕೇಳಬಹುದು. ಆದ್ದರಿಂದ ಎಲ್ಲರೂ ಮತದಾನ ಮಾಡಿ. ಆಮಿಷಕ್ಕೆ ಒಳಗಾಗದೇ ಎಲ್ಲರೂ ಕಡ್ಡಾಯವಾಗಿ ಮತ ಹಾಕಬೇಕು ಎಂದು ಮನವಿ ಮಾಡಿದರು. ಅಲ್ಲದೇ ಮತದಾನ ಮಾಡದಿದ್ದರೆ ಅಂತವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಸ್ಥಗಿತಗೊಳಸಬೇಕು ಎನ್ನುವ ಮೂಲಕ ಮತದಾನ ಮಹತ್ವ ಸಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+