HD Kumaraswamy: ಮೋದಿ ಚನ್ನಪಟ್ಟಣಕ್ಕೆ ಬಂದರೆ ಸಂತೋಷ, ಊರು ನೋಡ್ಕೊಂಡು ಹೋಗಲಿ: ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು,ಏಪ್ರಿಲ್29: ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಆಡಳಿತರೂಢ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಣತೊಟ್‌ಟಿದ್ದು, ಬಿಜೆಪಿಯ ಸಾಲು ಸಾಲು ಹೈಕಮಾಂಡ್ ನಾಯಕರು ಬಿಜೆಪಿ ಪರ ಅಬ್ಬರ ಪ್ರಚಾರವನ್ನ ನಡೆಸುತ್ತಿದ್ದಾರೆ.
ಇನ್ನೂ ದಳಪತಿಗಳ ಭದ್ರಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರವನ್ನ ನಡೆಸಿಲಿದ್ದು, ಮೋದಿ ಹಾಗೂ ಬಿಜೆಪಿ ನಾಯಕರು ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಕುಮಾರ ಸ್ವಾಮಿ ಮಾತನಾಡಿ, ಮೋದಿ ಚನ್ನಪಟ್ಟಣಕ್ಕೆ ಬಂದರೆ ಸಂತೋಷ, ಊರು ನೋಡ್ಕೊಂಡು ಹೋಗಲಿ, ನಮ್ಮ ಕ್ಷೇತ್ರನೂ ನೋಡ್ಕೊಂಡು ಹೋಗಲಿ. ಅವರು ಬರುವುದು ತಪ್ಪೇನಿಲ್ಲ, ಮೋದಿಯವರ ಆಗಮನಕ್ಕೆ ಸ್ವಾಗತ ಎಂದು ಹೇಳಿದರು.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲು ಎಸೆತ ವಿಚಾರವಾಗಿ ಮಾತನಾಡಿ, ಯಾರು ಕಲ್ಲು ಎಸೆದಿದ್ದಾರೆ. ಯಾವುದೇ ರೀತಿಯ ತನಿಖೆ ಮಾಡಿ ಸತ್ಯಾಸತ್ಯಾತೆ ಹೊರಬರಲಿ, ಬಿಜೆಪಿಯವರು ಕಲ್ಲು ಹೊಡೆದಿದ್ದಾರಾ ಕೇಳಬೇಕು!? ನಮ್ಮ ಪಕ್ಷದಲ್ಲಿ ಕಲ್ಲು ಹೊಡಿಯುವವರು ಯಾರು ಇಲ್ಲ, ಅತ್ಯಂತ ಸೂಕ್ಷ್ಮವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪ್ರಚಾರ,ಮೆರವಣಿಗೆ ಭರಾಟೆಯಲ್ಲಿ ಆಗಿದೆ.

ಧ್ವಜದ ಕಡ್ಡಿಯಿಂದ ಏಟಾಗಿದೆ ಅಂತ ಪತ್ರಿಕೆಯಲ್ಲಿ ಬರೆದಿದ್ದಾರೆ, ಮೆರವಣಿಗೆ ನೂಕುನುಗ್ಗಲಿನಲ್ಲಿ ಆಗಿರಬಹುದು. ನಮಗೂ ಎಷ್ಟೋ ಸಲ ಆಗಿದೆ. ಹೊಲಿಗೆ ಏನು ಹಾಕಿಲ್ಲ ಅಂತಿದ್ದಾರೆ, ಅದಕ್ಕೆ ರಕ್ತ ಚೆಲ್ಲಾಡ್ತಿದೆ,ಚಿಮ್ಮುಬಿಟ್ಟಿದೆ ಅಂತ ಟಿವಿಲಿ ಬಂತು. ಈ ಡ್ರಾಮಾಗಳು ರಾಷ್ಟ್ರೀಯ ಪಕ್ಷಗಳಿಂದ ನಡೆಯುತ್ತಿದೆ. ಸೋಲಿನ ಭೀತಿಯಿಂದ ಈ ರೀತಿ ಹೊಸ ನಾಟಕ ಸೃಷ್ಟಿ ಮಾಡುವುದರಲ್ಲಿ ಎರಡು ಪಕ್ಷಗಳು ಸ್ಪರ್ಧೆಗೆ ಇಳಿದಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಪ್ರಚಾರ ವಿಚಾರವಾಗಿ ಮಾತನಾಡಿ, ಮೋದಿಯವರು 10 ರಿಂದ 20 ಕ್ಷೇತ್ರ ದಿಂದ ಜನ ತಂದು ಟಾಟಾ ಮಾಡಿ ಹೋಗ್ತಾರೆ ಅಷ್ಟೇ ತಾನೆ! ಅದರಿಂದ ಅವರ ಮುಖ ನೋಡಿ ಜನ ಮತ ಹಾಕ್ತಾರೆ ಎನ್ನುವ ಭ್ರಮೆ ಅವರಿಗೆ, ನೋಡೊಣ ಯಾವ ರೀತಿ ವರ್ಕೌಟ್ ಆಗುತ್ತದೆ ಅಂತ ಎಂದು ಹೇಳಿದರು.
ರಾಮನಗರದಲ್ಲಿ ಕಾಂಗ್ರೆಸ್ ,ಬಿಜೆಪಿ ಒಳಮೈತ್ರಿ ಎಂಬ ನಿಖಿಲ್ ಕುಮಾರಸ್ವಾಮಿ ಆರೋಪ ವಿಚಾರವಾಗಿ ಮಾತನಾಡಿ, ರಾಮನಗರ ಮಾತ್ರ ಇನ್ನೂ ಹಲವು ಕಡೆ ಒಳ ಒಪ್ಪಂದಗಳೇ, ಶಿಕಾರಿಪುರ,ವರುಣಾ ಎಲ್ಲ ಕಡೆ ಕೂಡ ಒಳ ಒಪ್ಪಂದವೇ ನಡೆಯುತ್ತಿರುವುದು ಎಂದು ಹೇಳಿದ ಅವರು, ಚುನಾವಣೆಯಲ್ಲಿ ಗುಮ್ಮ ಬಂತು, ಗುಮ್ಮ ಬಂತು ತೋರಿಸಿ ಅಂತ ಮತ ಪರಿವರ್ತನೆ ಮಾಡುವ ಪ್ರಯತ್ನ ಮಾಡ್ತಿದ್ದಾರೆ ಎಂದು ಹೇಳಿದರು.












Click it and Unblock the Notifications